ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ತಿರಸ್ಕಾರ; ಬಾಂಗ್ಲಾದೇಶ ನ್ಯಾಯಾಲಯ ಹೇಳಿದ್ದೇನು? | Bangladesh

blank

ಢಾಕಾ: ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ಶೀಘ್ರವಾಗಿ ವಿಚಾರಣೆ ನಡೆಸಬೇಕೆಂಬ ಹಿಂದೂ ಸಂತ ಚಿನ್ಮೋಯ್ ಕೃಷ್ಣ ದಾಸ್ ಅವರ ಬೇಡಿಕೆಯನ್ನು ಬಾಂಗ್ಲಾದೇಶದ(Bangladesh ) ನ್ಯಾಯಾಲಯ ಬುಧವಾರ(ಡಿಸೆಂಬರ್​ 11) ತಿರಸ್ಕರಿಸಿದೆ. ಅವರ ಅರ್ಜಿಯನ್ನು ಈ ಹಿಂದೆ ನಿಗದಿಪಡಿಸಿದ 2025 ಜನವರಿ 2ರಂದು ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಇದನ್ನು ಓದಿ: ವರದಕ್ಷಿಣೆ ಕಾನೂನಿನ ದುರುಪಯೋಗ ತಡೆಯಲು ಎಚ್ಚರವಹಿಸಿ; ಸುಪ್ರೀಂಕೋರ್ಟ್​​ ಹೀಗೆಳಿದ್ದೇಕೆ? | Supreme Court

ಚಿನ್ಮೋಯ್ ದಾಸ್ ಪರವಾಗಿ ಅರ್ಜಿಯನ್ನು ಸಲ್ಲಿಸಲು ವಕೀಲರಿಗೆ, ವಕೀಲ ಅಧಿಕಾರವಿಲ್ಲದ ಕಾರಣ ಚಿತ್ತಗಾಂಗ್ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಸೈಫುಲ್ ಇಸ್ಲಾಂ ಅರ್ಜಿಯನ್ನು ತಿರಸ್ಕರಿಸಿದರು ಎಂದು ನ್ಯಾಯಾಲಯದ ಮೂಲಗಳು ತಿಳಿಸಿದಾಗಿ ಪಿಟಿಐ ವರದಿ ಮಾಡಿದೆ.
ವಕೀಲ ರವೀಂದ್ರ ಘೋಷ್ ಅವರು ನ್ಯಾಯಾಲಯದಿಂದ ಅರ್ಜಿಯ ಶೀಘ್ರ ವಿಚಾರಣೆಗೆ ಒತ್ತಾಯಿಸಿದರು. ಆದರೆ ರವೀಂದ್ರ ಘೋಷ್ ಅವರನ್ನು ಪ್ರತಿನಿಧಿಸಲು ಚಿನ್ಮಯ್ ದಾಸ್ ಅವರಿಂದ ಅಧಿಕಾರ ಪತ್ರವಿಲ್ಲ ಎಂದು ಎರಡನೇ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ, ನ್ಯಾಯಾಧೀಶರು ಶೀಘ್ರ ವಿಚಾರಣೆಯನ್ನು ಕೋರಿದ ಅವರ ಮನವಿಯನ್ನು ತಿರಸ್ಕರಿಸಿದರು ಎನ್ನಲಾಗಿದೆ.

ದಾಸ್ ಅವರು ಮಧುಮೇಹ, ಅಸ್ತಮಾ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದರೂ ಸುಳ್ಳು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಘೋಷ್ ಹೇಳಿದರು ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ವಕೀಲರು ಚಿನ್ಮೋಯ್ ದಾಸ್ ಅವರ ಅಧಿಕಾರವನ್ನು ಪಡೆಯಲು ಜೈಲಿನಲ್ಲಿ ಭೇಟಿ ಮಾಡಿಲ್ಲ ಎಂದು ಒಪ್ಪಿಕೊಂಡರು. ಈಗ ನಾನು ಚಿನ್ಮೋಯ್ ದಾಸ್ ಅವರನ್ನು ಭೇಟಿ ಮಾಡಲು ಜೈಲಿಗೆ ಹೋಗುತ್ತೇನೆ ಮತ್ತು ಅವರಿಂದ ಪವರ್ ಆಫ್ ಅಟಾರ್ನಿ ಪಡೆಯುತ್ತೇನೆ ಎಂದು ಅವರು ನ್ಯಾಯಾಲಯಕ್ಕೆ ಹೇಳಿದರು.

ಇದಕ್ಕೂ ಮೊದಲು ಡಿಸೆಂಬರ್ 3ಕ್ಕೆ ನಿಗದಿಯಾಗಿದ್ದ ವಿಚಾರಣೆಯಲ್ಲಿ ಆರೋಪಿ ಪರವಾಗಿ ಯಾವುದೇ ವಕೀಲರು ಹಾಜರಾಗಿರಲಿಲ್ಲ. ಪ್ರಾಸಿಕ್ಯೂಷನ್ ಸಲಹೆಯ ಮೇರೆಗೆ 2025ರ ಜನವರಿ 2ಕ್ಕೆ ವಿಚಾರಣೆಯನ್ನು ಮುಂದೂಲಾಯಿತು. ದಾಸ್ ಅವರ ಸಹವರ್ತಿ ಮತ್ತು ಅವರ ಅಂಗಸಂಸ್ಥೆ ಸನಾತನಿ ಜಾಗರಣ ಜೋಟ್ ಸಂಘಟನೆಯ ಸದಸ್ಯ ಸ್ವತಂತ್ರ ಗೌರಂಗ್ ದಾಸ್ ಅವರು ರಾಜಕೀಯ ಪ್ರೇರಿತ ವಕೀಲರ ಗುಂಪಿನಿಂದ ಒತ್ತಡಕ್ಕೆ ಒಳಗಾದ ಕಾರಣ ಮತ್ತು ಬೆದರಿಕೆಗಳಿಗೆ ಒಳಗಾಗಿದ್ದರಿಂದ ದಾಸ್ ಅವರನ್ನು ಯಾವುದೇ ವಕೀಲರು ಪ್ರತಿನಿಧಿಸಲಿಲ್ಲ ಎಂದು ಈ ಹಿಂದೆ ಹೇಳಿದ್ದರು.(ಏಜೆನ್ಸೀಸ್​)

ತನ್ನ ವಿರುದ್ಧದ ಟೀಕೆಗಳನ್ನು ತೆಗೆದುಹಾಕಿ; ಸ್ಪೀಕರ್ ಓಂ ಬಿರ್ಲಾರ ಬಳಿ ರಾಹುಲ್​ ಗಾಂಧಿ ಮನವಿ | Rahul Gandhi

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…