

ಬೆಳಗಾವಿ: ಡ್ರಗ್ಸ್ ಕೇಸ್ನಲ್ಲಿ ನಟರು, ರಾಜಕಾರಣಿಗಳು, ಗಣ್ಯರ ಮಕ್ಕಳನ್ನು ಬಚಾವ್ ಮಾಡಲು ಬರೀ ನಟಿಯರನ್ನಷ್ಟೇ ಬಂಧಿಸಲಾಗುತ್ತಿದೆ ಎಂಬ ಅಪಸ್ವರ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ‘ಡ್ರಗ್ಸ್ ಮಾಫಿಯಾದಲ್ಲಿ ಬರೀ ಹೆಣ್ಮಕ್ಕಳು ಮಾತ್ರವೇ ಇರೋದಾ?’ ಎಂದು ಇತ್ತೀಚಿಗೆ ಪ್ರಶ್ನಿಸಿದ್ದ ನಟಿ ಪಾರುಲ್ ಯಾದವ್, ‘ಪುರುಷ ಪ್ರಧಾನ ರಾಷ್ಟ್ರದಲ್ಲಿ ಇದೆಲ್ಲವೂ ಸಾರ್ಥಕವಾಯ್ತು' ಎಂದು ಕಿಡಿಕಾರಿದ್ದರು. ಇದೀಗ ಕಾಂಗ್ರೆಸ್ ಮುಖಂಡರೊಬ್ಬರು, 'ಮಾದಕ ಜಾಲದಲ್ಲಿ ಹೆಣ್ಣು ಮಕ್ಕಳ ಹೆಸರಷ್ಟೇ ಬರುತ್ತಿದೆ. ಹಾಗಾದ್ರೆ, ಗಂಡಸರು ಯಾರೂ ಅಫೀಮು, ಗಾಂಜಾ ತೆಗೆದುಕೊಳ್ಳುವುದಿಲ್ಲವೇ?' ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರೊನಾ ತಡೆಗಟ್ಟುವಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ವಿಫಲರಾಗಿದ್ದಾರೆ. ಈ ವೈಫಲ್ಯ ಮುಚ್ಚಿಹಾಕಲು ಡ್ರಗ್ಸ್ ದಂಧೆ ಹೆಸರಲ್ಲಿ
ದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದರೆ ಅದಕ್ಕೆ ಅಲ್ಪಸಂಖ್ಯಾತರನ್ನೇ ಟಾರ್ಗೆಟ್ ಮಾಡುವುದು ಬಿಜೆಪಿಯ ಫ್ಯಾಶನ್ ಆಗಿದೆ ಎಂದ ಬಿ.ಕೆ. ಹರಿಪ್ರಸಾದ್, ಬಿಜೆಪಿಯ ದೊಡ್ಡ ಡೊಡ್ಡ ನಾಯಕರು ಅಫೀಮು ತೆಗೆದುಕೊಳ್ಳದೆ ಹೊರ ಬರುತ್ತಿರಲಿಲ್ಲ. ಎಲ್ಲವೂ ನನಗೆ ಗೊತ್ತಿದೆ. ಆದರೆ, ಹೆಸರು ಹೇಳುವುದಿಲ್ಲ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.