ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್​ ಮುಖಂಡ ಸಿಸಿಬಿ ವಶಕ್ಕೆ

Ragini-Dwiwedi
Published on

ಹುಬ್ಬಳ್ಳಿ: ಡ್ರಗ್ಸ್‌ ಕೇಸ್​ನಲ್ಲಿ ಸ್ಯಾಂಡಲ್‌ವುಡ್​ ನಂಟಿನ ಪ್ರಕರಣದಲ್ಲಿ ದಿನಕ್ಕೆ ಒಬ್ಬಿಬ್ಬರ ಹೊಸ ಹೆಸರುಗಳು ಬಯಲಾಗುತ್ತಲೇ ಇವೆ. ಬೆಂಗಳೂರಿನಲ್ಲಿ ನಟಿಯರಿಬ್ಬರನ್ನು ವಿಚಾರಣೆ ನಡೆಸುತ್ತಿರೋ ಸಿಸಿಬಿ ಪೊಲೀಸರು ಇದೀಗ ವಾಣಿಜ್ಯ ನಗರಿ ಮೇಲೂ ಕಣ್ಣಿಟ್ಟಿದ್ದಾರೆ.

ನಟಿ ರಾಗಿಣಿ ಮೊಬೈಲ್‌ನಲ್ಲಿ ಮಾಜಿ ಸಚಿವರೊಬ್ಬರ ಆಪ್ತನೆಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್​ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಫೋಟೋ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗಿರೀಶ್​ ಗದಿಗೆಪ್ಪಗೌಡರ ಅವರನ್ನು ವಶಕ್ಕೆ ಪಡೆದ ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, 'ಮಾದಕ' ನಟಿ ರಾಗಿಣಿ ದ್ವಿವೇದಿಗೆ ಹುಬ್ಬಳಿಯ ನಂಟಿದ್ಯಾ? ಎಂಬುದು ಬಯಲಾಗಲಿದೆ. ಇದನ್ನೂ ಓದಿರಿ ಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​

ಗಿರೀಶ್ ಗದಿಗೆಪ್ಪಗೌಡರ
ಗಿರೀಶ್ ಗದಿಗೆಪ್ಪಗೌಡರ

ಈ ಹಿಂದೆ ನಟಿ ರಾಗಿಣಿ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಗಿರೀಶ್ ಗದಿಗೆಪ್ಪಗೌಡರ ಅಪ್ಲೋಡ್ ಮಾಡಿದ್ದರು. ರಾಗಿಣಿ ಜೊತೆ ಗಿರೀಶ್​ ಗೋವಾಕ್ಕೂ ತೆರಳಿದ್ದರು ಎನ್ನಲಾಗಿದೆ. ಡ್ರಗ್ಸ್​ ಕೇಸ್​ನಲ್ಲಿ ರಾಗಿಣಿ ಬಂಧನವಾಗುತ್ತಿದ್ದಂತೆ ಆ ಎಲ್ಲ ಫೋಟೋಗಳನ್ನು ಗಿರೀಶ್ ಡಿಲೀಟ್​ ಮಾಡಿದ್ದಾರೆ. ಆದರೆ ರಾಗಿಣಿ ಮೊಬೈಲ್​ನಲ್ಲಿ ಇವರ ಫೋಟೋ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಗಿರೀಶ್​ರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net