More

    ಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​

    ಚಿಕ್ಕಬಳ್ಳಾಪುರ: ಅಲ್ಪಸಂಖ್ಯಾತ ಅನ್ನೋದು ರಕ್ಷಣೆಗೆ ಟ್ಯಾಗ್ ಅಲ್ಲ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರನ್ನು ಯಾವುದೇ ಕಾರಣಕ್ಕೂ ರಕ್ಷಣೆ ಮಾಡಲ್ಲ ಎಂದಿರುವ ಸಚಿವ ಡಾ.ಕೆ. ಸುಧಾಕರ್, ಅಲ್ಪಸಂಖ್ಯಾತ ಅನ್ನೋದು ಜಮೀರ್ ಖಾನ್​ಗೆ ಐಡಿ ನಾ..? ಎಂದು ಪ್ರಶ್ನಿಸಿದ್ದಾರೆ.

    ಡ್ರಗ್ಸ್​ ಮಾಫಿಯಾದಲ್ಲಿ ಶಾಸಕ ಜಮೀರ್​ ಅಹ್ಮದ್​ ಹೆಸರನ್ನು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಪ್ರಸ್ತಾಪಿಸಿದ್ದು, ಭಾರೀ ಸಂಚಲನ ಮೂಡಿಸಿದೆ. ಈ ಬಗ್ಗೆ ಮಾಹಿತಿ ಕೇಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಜಮೀರ್​ ಜತೆಗೆ ಸಭೆ ನಡೆಸಿದ್ದರು. ಆ ವೇಳೆ ‘ನಾನು ಮುಸ್ಲಿಂ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡ್ತಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಬೆಳೆಯುತ್ತಿರುವುದೇ ಇದಕ್ಕೆಲ್ಲ ಕಾರಣ’ ಎಂದು ಜಮೀರ್​ ಆರೋಪಿಸಿದ್ದರು. ಈ ವಿಚಾರವಾಗಿ ಗರಂ ಆದ ಸುಧಾಕರ್, ಅಲ್ಪಸಂಖ್ಯಾತ ಅನ್ನೋದು ರಕ್ಷಣೆಗೆ ಟ್ಯಾಗ್ ಅಲ್ಲ. ಸಿದ್ದರಾಮಯ್ಯನವರೇ ಡ್ರಗ್ಸ್ ದಂಧೆ ನಿಗ್ರಹಕ್ಕೆ ಸಹಕಾರ ಕೊಡಿ. ಸಹಕಾರ ಕೊಡೋ ಬದಲು ನುಣಚಿಕೊಳ್ಳೋ ಕೆಲಸ ಮಾಡಬೇಡಿ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. ಇದನ್ನೂ ಓದಿರಿ ‘ಏನಪ್ಪ ಜಮೀರ್ ನಿನ್ನ ಹೆಸರು ಮೀಡಿಯಾದಲ್ಲಿ ಬರ್ತಿದೆ…’

    ಕಾಂಗ್ರೆಸ್​ನವರು ಡ್ರಗ್ಸ್ ದಂಧೆಯನ್ನ ಲಘುವಾಗಿ ಪರಿಗಣಿಸಿದ್ದಾರೆ. ಇದರಲ್ಲಿ ಭಾಗಿಯಾದ ಯಾರನ್ನೂ ರಕ್ಷಣೆ ಮಾಡಲು ಹೋಗಬೇಡಿ. ಸಿದ್ದರಾಮಯ್ಯನವರೇ ಡ್ರಗ್ಸ್ ಧಂದೆಯನ್ನ ಬುಡಸಮೇತ ಕಿತ್ತು ಹಾಕೋಣ.. ಸಹಕಾರ ನೀಡಿ ಎಂದ ಸುಧಾಕರ್​, ನಾನು ನನ್ನ ಜಾತಿ ಐಡಿ ಇಟ್ಟುಕೊಂಡು ರಕ್ಷಣೆ ಮಾಡಿಕೊಳ್ಳಬೇಕಾ? ಎಂದು ಜಮೀರ್​ ವಿರುದ್ಧ ವಾಗ್ದಾಳಿ ನಡೆಸಿದರು.

    ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರನ್ನ ರಾಜ್ಯ ಸರ್ಕಾರದಿಂದ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಈ ಕೇಸ್​ನಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಕಠಿಣ ಕ್ರಮ ಕೈಗೊಳ್ತೀವಿ. ಮುಂದಿನ ದಿನಗಳಲ್ಲಿ ಸ್ಪಷ್ಟವಾದ ಕಾನೂನು ಕೂಡ ತರಲಿದ್ದೇವೆ. ಡ್ರಗ್ಸ್ ಮಾಫಿಯಾ ಬಗ್ಗೆ ಬಹಳ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

    ‘ಡ್ರಗ್ಸ್ ದಂಧೆಯಲ್ಲಿ ಜಮೀರ್ ಅಹ್ಮದ್ ಪಾತ್ರ ನೂರರಷ್ಟಿದೆ’, ಆದ್ರೂ ಅರೆಸ್ಟ್​ ಮಾಡ್ತಿಲ್ಲ ಏಕೆ?

    ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts