

ಮುಂಬೈ: ಈ ವರ್ಷ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ನಟನೆಯ ಒಂದೇ ಒಂದು ಸಿನಿಮಾವು ತೆರೆಗೆ ಬರಲಿಲ್ಲ. ಸದ್ಯ ಆಯುಷ್ಮಾನ್ ಭಾವ ಮ್ಯೂಸಿಕಲ್ ಬ್ಯಾಂಡ್‌ನೊಂದಿಗೆ ಅಮೆರಿಕದ ಕೆಲವು ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಆಯುಷ್ಮಾನ್ ಸಿನಿಮಾ ಮತ್ತು ತಮ್ಮ ಜೀವನದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ.
ವಿಕ್ಕಿ ಡೋನರ್ ಸಿನಿಮಾ ಮಾಡಿದಾಗ ನಾನು ತಂದೆಯಾಗಿದ್ದೆ ಎಂದು ಹೇಳಿದ್ದಾರೆ. ಇದು ತುಂಬಾ ವಿಭಿನ್ನವಾಗಿತ್ತು. ತಾಹಿರಾ ಮತ್ತು ನಾನು ಶೀಘ್ರದಲ್ಲಿ ಪಾಲಕರಾಗಿದ್ದೇವೆ. ಮಗಳ ತಂದೆಯಾಗಿರುವುದು ಕೂಡ ವಿಭಿನ್ನ ಅನುಭವ ನೀಡುತ್ತದೆ ಎಂದು ಹೇಳಿದರು. ಉತ್ತಮ ವ್ಯಕ್ತಿಯಾಗಲು ಅವರ ಮಗಳು ಸಹಾಯ ಮಾಡಿರುವುದು ಉತ್ತಮ ಸಂಗತಿಯಾಗಿದೆ ಎಂದು ಹೇಳಿದರು.
ಇದೇ ಸಮಯದಲ್ಲಿ ತಮ್ಮ ತಂದೆಯ ಸರ್ವಾಧಿಕಾರಿ ಧೋರಣೆಯ ಕುರಿತು ಮಾತನಾಡಿದ್ದಾರೆ. ನನಗೂ ಮತ್ತು ನನ್ನ ತಂದೆಯ ಪಾಲನೆ ರೀತಿಗೆ ಸಾಕಷ್ಟು ವ್ಯತ್ಯಾಸವಿದೆ. ನನಗಿಂತ ನನ್ನ ತಂದೆ ವಿಭಿನ್ನವಾಗಿದ್ದಾರೆ. ನನ್ನ ತಂದೆ ಬೆಲ್ಟ್ ಮತ್ತು ಚಪ್ಪಲಿಯಿಂದ ಹೊಡೆದಿದ್ದಾರೆ. ಇದು ನನ್ನ ಬಾಲ್ಯದ ಆಘಾತವಾಗಿದೆ. ಒಮ್ಮೆ ಪಾರ್ಟಿಯಿಂದ ಹಿಂತಿರುಗುತ್ತಿದ್ದೆ. ಆಗ ನನ್ನ ಅಂಗಿಯಿಂದ ಸಿಗರೇಟಿನ ವಾಸನೆ ಬರುತ್ತಿತ್ತು. ಆದರೆ ನನ್ನ ತಂದೆಯ ಭಯದಿಂದ ನಾನು ಸಿಗರೇಟನ್ನು ಮುಟ್ಟಿರಲಿಲ್ಲ. ಆದರೂ ನನ್ನ ತಂದೆ ಸಾಕಷ್ಟು ಹೊಡೆದಿದ್ದರೂ ಎಂದು ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಆಯುಷ್ಮಾನ್ ಧರ್ಮ ಪ್ರೊಡಕ್ಷನ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ ಅವರು ಹಾರರ್ ಕಾಮಿಡಿ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್)