ಈ ಕಾರಣಕ್ಕಾಗಿಯೇ ಹಾಲಿವುಡ್​ ಆಫರ್​ ತಿರಸ್ಕರಿಸಿದೆ; ಕಾರಣ ಬಿಚ್ಚಿಟ್ಟ ನಟಿ ಮಾಧುರಿ ದೀಕ್ಷಿತ್​ | Madhuri Dixit

Untitled design - 2024-11-16T160446.981
Published on

ಮುಂಬೈ: 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಸಿನಿಮಾಗಳನ್ನು ಹಿಟ್​ ಮಾಡಲು ಈ ಖ್ಯಾತ ನಟಿಯ ಹೆಸರು ಒಂದು ಸಾಕಿತ್ತು. ತಮ್ಮ ನಟನೆ ಮತ್ತು ನೃತ್ಯ ಕೌಶಲ್ಯದಿಂದ ಸಾಕಷ್ಟು ಹೆಸರು ಗಳಿಸಿದ್ದ ನಟಿ ಮಾಧುರಿ ದೀಕ್ಷಿತ್(Madhuri Dixit) ಅವರನ್ನು ಬಾಲಿವುಡ್​ನ ಲಕ್ಕಿ ಕ್ವೀನ್​ ಎಂದು ಕರೆಯಲಾಗುತಿತ್ತು. ನಟಿ ಮಾಧರಿ ಅವರ ಕ್ರೇಜ್​ ಇಂದಿಗೂ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ​​ ಬಾಲಿವುಡ್​ನ ಎವರ್​ಗ್ರಿನ್​ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಲಿವುಡ್​ನಿಂದ ಸಿನಿಮಾ ಆಫರ್​ಗಳು ಬಂದರೂ ನಟಿ ಮಾಧುರಿ ದೀಕ್ಷಿತ್​ ನಿರಾಕರಿಸಿದ್ದರೂ. ಅದಕ್ಕೆ ಕಾರಣವೇನು ಎಂಬುದನ್ನು ಸ್ವತಃ ಅವರೇ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಮಾಧುರಿ ದೀಕ್ಷಿತ್​​​ ತಮ್ಮ ವೈಯಕ್ತಿಕ ಜೀವನ ಹಾಗೂ ಅಮೆರಿಕದಲ್ಲಿ ವಾಸಿಸುವ ಹಾಲಿವುಡ್​ನಿಂದ ಬಂದ ಆಫರ್​ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ವೃತ್ತಿಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ನಟಿ 1999ರಲ್ಲಿ ಕ್ಯಾಲಿಫೋರ್ನಿಯಾದ ವೈದ್ಯರಾದ ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. ಮದುವೆಯ ನಂತರ ಅವರು ಕೊಲೊರಾಡೋಗೆ ತೆರಳಿದ ಅವರು ಗಮನವನ್ನು ತಮ್ಮ ವೈವಾಹಿಕ ಜೀವನದೆಡೆಗೆ ಕೇಂದ್ರೀಕರಿಸಿದರು. 2011ರಲ್ಲಿ ಭಾರತಕ್ಕೆ ಮರಳಿದರು. ನಟಿ ಮಾಧುರಿ ಅವರಿಗೆ ಆರಿನ್​ ಮತ್ತು ರಿಯಾನ್​ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.

ಅಮೆರಿಕದಲ್ಲಿ ವಾಸಿಸುತ್ತಿದ್ದಾಗ ಹಾಲಿವುಡ್​ ಸಿನಿಮಾದಲ್ಲಿ ನಟಿಸಲು ಒಂದೆರಡು ಅವಕಾಶಗಳು ಬಂದವು. ಆದರೆ ಆ ಸಮಯದಲ್ಲಿ ನಾನು ನನ್ನ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದೆ. ಗರ್ಭಿಣಿಯಾಗಿದ್ದಾಗ ಕೆಲಸ ಮಾಡಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಬೇಡ ಎಂದು ಹೇಳಿದ್ದೆ ಎಂದು ಮಾಧುರಿ ಹೇಳಿದರು.

ನನ್ನ ಕುಟುಂಬವನ್ನು ನೋಡಿಕೊಳ್ಳುವುದರಲ್ಲಿ ಮತ್ತು ಜೀವನವನ್ನು ನಡೆಸುವುದರಲ್ಲಿ ತೊಡಗಿಸಿಕೊಂಡಿದ್ದೆ. ಇದು ನನ್ನ ಕನಸಿನ ಭಾಗವಾಗಿತ್ತು. ಹಾಲಿವುಡ್​ ಸಿನಿಮಾ ಮಾಡುವ ಕುರಿತು ನಾನು ಯೋಚಿಸಿರಲಿಲ್ಲ. ನಾನು ಇಲ್ಲಿ ಏನು ಮಾಡುತ್ತಿದ್ದೇನೆ ಎಂಬುದು ನನಗೆ ಸಂತೋಷವಿದೆ.ಭಾರತೀಯ ಚಲನಚಿತ್ರಗಳನ್ನು ಪ್ರಪಂಚದಾದ್ಯಂತ ವೀಕ್ಷಿಸುತ್ತಾರೆ ಎಂದು ತಿಳಿಸಿದರು.

ಇನ್ನು ಪತಿ ಮತ್ತು ಮಕ್ಕಳ ಬಗ್ಗೆ ಮಾತನಾಡಿದ ಮಾಧುರಿ ಅವರು ಸಾಮಾನ್ಯವಾಗಿ ನನ್ನ ಸಿನಿಮಾಗಳನ್ನು ನೋಡುವುದಿಲ್ಲ. ನಾನು ಅವರಿಗೆ ನನ್ನ ಸಿನಿಮಾಗಳನ್ನು ನೋಡಿ ಎಂದು ಒತ್ತಾಯಿಸುವುದಿಲ್ಲ. ಆದರೆ ಭೂಲ್ ಭುಲೈಯಾ 3 ಅನ್ನು ವೀಕ್ಷಿಸಿ, ನನ್ನ ಮಗ ನನಗೆ ಕರೆ ಮಾಡಿ ಚಿತ್ರವನ್ನು ನೋಡಿದಾಗಿ ತಿಳಿಸಿದ. ಸಿನಿಮಾವನ್ನು ನಿಜವಾಗಿಯೂ ಆನಂದಿಸಿರುವುದಾಗಿ ಹೇಳಿದ ಎಂದು ತಿಳಿಸಿದರು. ಮಾಧುರಿ ದೀಕ್ಷಿತ್​ ನವೆಂಬರ್ 1ರಂದು ಬಿಡುಗಡೆಯಾದ 'ಭೂಲ್ ಭುಲೈಯಾ 3' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿದ್ಯಾಬಾಲನ್​, ಕಾರ್ತಿಕ್ ಆರ್ಯನ್, ಟ್ರಿಪ್ಟಿ ಡಿಮ್ರಿ ಮೀರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net