ರಾಮ ನವಮಿಗೂ ಮುನ್ನ ಅಯೋಧ್ಯೆಯಲ್ಲಿ ಪೊಲೀಸರ ಕಟ್ಟೆಚ್ಚರ! ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ ; Ayodhya

Ayodhya
Published on

Ayodhya | ಈ ಬಾರಿಯ ರಾಮನವಮಿಗಾಗಿ ಅಯೋಧ್ಯೆ ನಗರ ಸಿದ್ಧತೆಯಲ್ಲಿದ್ದು, ಭಗವಾನ್ ಶ್ರೀ ರಾಮನ ಜಯಂತಿಗೆ ಇಡೀ ನಗರವೇ ಅಲಂಕರಿಸಲ್ಪಡುತ್ತಿದೆ. ರಾಮನಗರಿಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಡೆ ನಾಳೆ (ಏಪ್ರಿಲ್ 6) ರಂದು ಭಗವಾನ್​ ಶ್ರೀರಾಮನಿಗಾಗಿ ರಾಮ ನವಮಿ ಆಚರಿಸಲಾಗುತ್ತಿದೆ.

ಈ ದಿನ ಸುಮಾರು 50 ಲಕ್ಷ ಭಕ್ತರು ರಾಮಲಲ್ಲಾ ದರ್ಶನ ಪಡೆಯಲು ಅಯೋಧ್ಯೆಗೆ ಬರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಅಯೋಧ್ಯೆಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಇದರೊಂದಿಗೆ, ದೇಶಾದ್ಯಂತ ನೂರಾರು ದೇವಾಲಯಗಳಲ್ಲಿ ರಾಮ ನವಮಿಗೆ ವಿಶೇಷ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಅಯೋಧ್ಯೆಯಲ್ಲಿ ಹೇಗಿದೆ ಸಿದ್ಧತೆ?

ಇನ್ನೂ ರಾಮ ನವಮಿ ಹಿನ್ನಲೆ ಅಯೋಧ್ಯೆಗೆ ಆಗಮಿಸುವ ಭಕ್ತಾದಿಗಳಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗ್ತಾ ಇದೆ. ಬೇಸಿಗೆಯ ಹಿನ್ನಲೆ ಬಿಸಿಲಿನ ತಾಪಮಾನ ಹೆಚ್ಚಾಗಿ ಇರೋದ್ರಿಂದಾಗಿ ಇಲ್ಲಿಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಈ ಬಗ್ಗೆ ಅಯೋಧ್ಯೆಯ ಆಯುಕ್ತ ಗೌರವ್ ದಯಾಳ್ ಮಾತನಾಡಿದ್ದು, ಪ್ರತಿ ವರ್ಷದಂತೆ, ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದೆ. ಭಕ್ತರು ಬರುವ ನಮ್ಮ ಮುಖ್ಯ ಪ್ರವೇಶ ರಸ್ತೆಗಳು ಮತ್ತು ಕಾರಿಡಾರ್‌ಗಳನ್ನು ಎಡಭಾಗ ಮತ್ತು ಬಲಭಾಗ ಎರಡರಲ್ಲೂ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ, ಅವರನ್ನು ಸುಲಭವಾಗಿ ದರ್ಶನಕ್ಕಾಗಿ ರಾಮ ಮಂದಿರಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ರಾಮಲಲ್ಲಾ ದರ್ಶನಕ್ಕಾಗಿ ಬರುವ ಭಕ್ತರಿಗೆ ಬಿಸಿಲು ಬೀಳದಂತೆ ವಿಶೇಷ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಬಿಸಲು ಬೀಳದಂತೆ ಅಲ್ಲಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿ ಎಂದಿದ್ದಾರೆ.

ಅನೇಕ ಜನರು ಬರಿಗಾಲಿನಲ್ಲಿ ಇರುವುದರಿಂದ, ಅವರಿಗೆ ಅತಿಯಾದ ಶಾಖದ ಅನುಭವವಾಗದಂತೆ ನೋಡಿಕೊಳ್ಳಲು ಅಂತಹ ಪ್ರದೇಶಗಳಲ್ಲಿ ಚಾಪೆಗಳನ್ನು ಒದಗಿಸಲಾಗುವುತ್ತದೆ. ಹಾಗೂ ದೇವಾಲಯದ ಆವರಣದಲ್ಲಿ ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ದಯಾಳ್ ಹೇಳಿದ್ದಾರೆ. ಜೊತೆಗೆ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ಆಶೀರ್ವಾದ ಪಡೆಯಲು ಮುಖ್ಯ ದೇವಾಲಯವನ್ನು ಸಮೀಪಿಸುವಾಗ ಜನರು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net