ಹಿರಿಯರ ತ್ಯಾಗ, ಬಲಿದಾನದ ಅರಿವು ಅವಶ್ಯ

Mul_Awareness
Published on

ಮೂಲ್ಕಿ: ಹಿರಿಯರು ಧರ್ಮರಕ್ಷಣೆಗಾಗಿ ಮಾಡಿದ ತ್ಯಾಗ, ಬಲಿದಾನದ ನೆನಪು ಮಾಡುತ್ತಾ ಅವರ ಶ್ರೇಷ್ಠತೆಯನ್ನು ಯುವ ಪೀಳಿಗೆಗೆ ತಿಳಿಸಿ ಬೆಳೆಸುವ ಕಾರ್ಯ ಬಹಳ ಮುಖ್ಯ ಎಂದು ಮಂಗಳೂರು ಸೇಂಟ್ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ಫಾ.ನವೀನ್ ಪಿಂಟೋ ಹೇಳಿದರು.

ಮೂಲ್ಕಿ ಘಜನಿ ಚರ್ಚ್‌ಲ್ಲಿ ಭಾನುವಾರ ಟಿಪ್ಪು ಸುಲ್ತಾನನ ಕ್ರೌರ್ಯಕ್ಕೆ ಬಲಿಯಾದ ಹಿರಿಯರ ತ್ಯಾಗ ಬಲಿದಾನದ ಸಂಸ್ಮರಣೆಯಾಗಿ ನಡೆಸುವ ವಿಶೇಷ ಪೂಜಾವಿಧಿಯ ಮುಖ್ಯಸ್ಥರಾಗಿ ಆಶೀರ್ವಚನವಿತ್ತರು.

ಮೂಲ್ಕಿ ಚರ್ಚ್‌ನ ಧರ್ಮಗುರು ಆಂಟನಿ ಶೇರಾ ಈ ದಿನದ ಮಹತ್ವದ ಬಗ್ಗೆ ಮಾಹಿತಿ ಪ್ರಸ್ತಾವಿಸಿದರು. ಮೂಲ್ಕಿ ಡಿವೈನ್ ಕಾಲ್ ಸೆಂಟರ್‌ನ ನಿರ್ದೇಶಕ ಅಬ್ರಹಾಂ ಡಿಸೋಜ, ವಾಲ್ಟರ್ ಮೆಂಡೋನ್ಸಾ, ಮೂಲ್ಕಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕಾರ್ಯದರ್ಶಿ ಎಡ್ವಿನ್ ಡಿಸೋಜ, ಚರ್ಚ್ ಪಾಲನಾ ಸಮಿತಿ, ವಾರ್ಡ್ ಗುರಿಕಾರರು ಹಾಗೂ ಧರ್ಮ ಸಭಾ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net