ಕಾರ್ಕಳ: ಸಂವಿಧಾನ ಭಾರತ ದೇಶದ ಪ್ರತಿಯೊಬ್ಬ ನಾಗರಿಕನ ಧರ್ಮಗ್ರಂಥ. ಅದನ್ನು ಪ್ರತಿಯೊಬ್ಬರೂ ಓದಲೇಬೇಕು. ಸಂವಿಧಾನದಲ್ಲಿರುವ ಕಾಯ್ದೆ ಕಾನೂನುಗಳ ಬಗ್ಗೆ ತಿಳಿದು ಅದರಂತೆ ನಡೆದುಕೊಳ್ಳುವುದು ಭಾರತೀಯ ನಾಗರಿಕನ ಕರ್ತವ್ಯ. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ ಆದರೆ ಅದರಲ್ಲಿ ಅಡಕವಾಗಿರುವ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಏನು ಎಂಬುದನ್ನು ನಾವು ಅರಿತಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಸುರೇಂದ್ರ ಶೆಟ್ಟಿ ಕೊಕ್ಕರ್ಣೆ ಹೇಳಿದರು.
ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಮ್ಮ ಸಂವಿಧಾನ ನಮ್ಮ ಹೆಮ್ಮೆ ವಿಶೇಷ ಸಂವಾದ ಕ್ರಿಯೇಟಿವ್ ಚಿಂತಕರ ಚಾವಡಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು. ನಿರೂಪಕ ಅವಿನಾಶ್ ಕಾಮತ್, ಉಪನ್ಯಾಸಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.