

ಮುಂಬೈ: ಕನ್ನಡದಲ್ಲಿ ಮಾಸ್ಟರ್ ಕಿಶನ್ ನಿರ್ದೇಶಿಸಿದ್ದ ‘ಕೇರ್ ಆಫ್ ಫುಟ್ಪಾತ್ 2’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅವಿಕಾ ಗೋರ್, ಸದ್ಯ ತೆಲುಗಿನಲ್ಲಿ ತುಂಬಾ ಬಿಜಿಯಾಗಿದ್ದಾರೆ. ಫೋಟಾ ಮಾವ, ಎಕ್ಕಡಿಕಿ ಪೋತಾವು ಚಿನ್ನವಾಡ, ರಾಜು ಗಾರಿ ಗಾದಿ 3 ಚಿತ್ರಗಳಲ್ಲಿ ನಟಿಸಿದರೂ ಅವಿಕಾಗೆ ಅಷ್ಟೊಂದು ದೊಡ್ಡ ಹೆಸರು ಸಿಗಲಿಲ್ಲ. ಸಿನಿಮಾಗಳಲ್ಲಿ ವಿರಳವಾಗಿ ಕಾಣಿಸಿಕೊಂಡರೂ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವಿಕಾ, ನಿಯಮಿತವಾಗಿ ತಮ್ಮ ಫೋಟೋಶೂಟ್ ಮತ್ತು ಅವರ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ತನ್ನ ಬಾಡಿಗಾರ್ಡ್ನಿಂದಲೇ ಅನುಭವಿಸಿದ ಕಹಿ ಘಟನೆಯನ್ನು ಅವಿಕಾ ಬಿಚ್ಚಿಟ್ಟಿದ್ದಾರೆ. ವೇದಿಕೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಯಾರೋ ನನ್ನನ್ನು ಸ್ಪರ್ಶಿಸಿದ ಅನುಭವವಾಯಿತು. ಹಿಂದೆ ತಿರುಗಿದಾಗ ತನ್ನ ಅಲ್ಲಿ ಬಾಡಿಗಾರ್ಡ್ ಬಿಟ್ಟು, ಸುತ್ತಾಮುತ್ತ ಬೇರೆ ಯಾರೂ ಇರಲಿಲ್ಲ ಎಂದು ಹೇಳಿದರು.
ಎರಡನೇ ಬಾರಿ ಸ್ಪರ್ಶಿಸಲು ಯತ್ನಿಸಿದಾಗ ನಾನು ಬಾಡಿಗಾರ್ಡ್ ಕೈ ಹಿಡಿದುಕೊಂಡು ಅವನತ್ತ ನೋಡಿದೆ. ಆತ ತನ್ನ ಕಿವಿಗಳನ್ನು ಹಿಡಿದುಕೊಂಡು ಕ್ಷಮೆಯಾಚಿಸಿದನು. ಬಳಿಕ ನಾನು ಏನು ಮಾಡಬಹುದು? ಆತನನ್ನು ಸುಮ್ಮನೇ ಬಿಟ್ಟು ಕಳುಹಿಸಿದೆ. ಬಾಡಿಗಾರ್ಡ್ ಇದ್ದರೆ ರಕ್ಷಣೆ ಇದೆ ಎಂದು ಭಾವಿಸುತ್ತೇವೆ. ಆದರೆ, ಬಾಡಿಗಾರ್ಡ್ಗಳೇ ಈ ರೀತಿ ಮಾಡಿದರೆ ಹೇಗೆ? ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ ಎಂದು ಅವಿಕಾ ಹೇಳಿದರು.
Influencer Avika Gor shares that her bodyguard touched him inappropriately byu/funkeytoken inInstaCelebsGossip
ಸಿನಿಮಾ ವಿಚಾರಕ್ಕೆ ಬಂದರೆ, ಅವಿಕಾ ಅವರು ಬ್ಲಡಿ ಇಸ್ಕ್ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದಲ್ಲಿ ಕೇರ್ ಆಫ್ ಫುಟ್ಪಾತ್ ಸಿನಿಮಾ ಬಿಟ್ಟರೆ, ಪುನೀತ್ ರಾಜ್ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲಿ ತಾಜಾ ಸಮಾಚಾರ ಹಾಡಿನಲ್ಲಿ ಬಂದು ಹೋಗುತ್ತಾರೆ. (ಏಜೆನ್ಸೀಸ್)