More

    ಇಡೀ ವಿಶ್ವವೇ ಕಾಯುತ್ತಿರುವ ‘ಅವತಾರ್​’ ಚಿತ್ರದ ಟ್ರೇಲರ್​ ಹೀಗಿದೆ ನೋಡಿ …

    ಮುಂಬೈ: ಜೇಮ್ಸ್​ ಕ್ಯಾಮರಾನ್​ ನಿರ್ದೇಶನದ ‘ಅವತಾರ್​ – ದಿ ವೇ ಆಫ್​ ವಾಟರ್​’ ಚಿತ್ರವು ಡಿ. 16ಕ್ಕೆ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಜಗಜ್ಜಾಹೀರಾಗಿದೆ. ಯಾವಾಗ ಚಿತ್ರದ ಟೀಸರ್​ ಬಿಡುಗಡೆಯಾಯಿತೋ, ಆಗಿನಿಂದಲೇ ಚಿತ್ರದ ಬಗ್ಗೆ ಎಲ್ಲರಲ್ಲೂ ವಿಶೇಷವಾದ ಕುತೂಹಲವಿತ್ತು. ಈಗ ಚಿತ್ರದ ಟ್ರೇಲರ್​ ಸಹ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಗಂಡ ಮುಖಕ್ಕೆ ಮಾಸ್ಕ್​ ಹಾಕಿಕೊಂಡೇ ಇರೋದು ಯಾಕೆ ಗೊತ್ತಾ?

    ‘ಅವತಾರ್​’ ಚಿತ್ರವು ಬಿಡುಗಡೆಯಾಗಿದ್ದು 2009ರಲ್ಲಿ. ಆ ನಂತರ ಅದರ ಮುಂದುವರೆದ ಭಾಗಗಳನ್ನು ನಿರ್ದೇಶಿಸುವುದಾಗಿ ನಿರ್ದೇಶಕ ಜೇಮ್ಸ್​ ಕ್ಯಾಮರಾನ್​ ಹೇಳುತ್ತಲೇ ಇದ್ದರು. ಚಿತ್ರದ ಕೆಲಸಗಳನ್ನೂ ಪ್ರಾರಂಭಿಸಿದ್ದರು. ಇನ್ನೂ ಐದು ಭಾಗಗಳಲ್ಲಿ ಚಿತ್ರ ಮೂಡಿಬರಲಿದ್ದು, ಮೊದಲ ಭಾಗವಾಗಿ ಇದೇ ಡಿ. 16ರಂದು ‘ಅವತಾರ್​ – ದಿ ವೇ ಆಫ್​ ವಾಟರ್ಸ್​’ ಮೊದಲು ಬಿಡುಗಡೆಯಾಗಲಿದೆ.

    ಮೊದಲ ಚಿತ್ರದ ಕಥೆ ನಡೆದು ಒಂದು ದಶಕದ ನಂತರ ಈ ಭಾಗದ ಕಥೆ ನಡೆಯಲಿದೆಯಂತೆ. ಸಲ್ಲಿ ಕುಟುಂಬದ ಕಥೆ ಈ ಭಾಗದಲ್ಲೂ ಮುಂದುವರೆಯಲಿದ್ದು, ಅವರು ಬದುಕುವುದಕ್ಕೆ ಈ ಬಾರಿ ಏನೆಲ್ಲಾ ಹೋರಾಟಗಳನ್ನು ನಡೆಸುತ್ತಾರೆ, ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ಈ ಚಿತ್ರ ಹೇಳುತ್ತದೆ.

    ‘ಅವತಾರ್​’ ಚಿತ್ರದಂತೆಯೇ ಈ ಚಿತ್ರದಲ್ಲೂ ಅದ್ಭುತವಾದ ವಿಷ್ಯುಯಲ್​ಗಳಿದ್ದು, ಪ್ರೇಕ್ಷಕರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂಡರ್​ವಾಟರ್​ ದೃಶ್ಯಗಳು ಚಿತ್ರದ ಹೈಲೈಟ್​ಗಳೆಂದು ಹೇಳಲಾಗುತ್ತಿದೆ. ಇನ್ನು, ಚಿತ್ರದ ಹಿನ್ನೆಲೆ ಸಂಗೀತ ಸಹ ಕೇಳುಗರ ಮನಸ್ಸು ಗೆದ್ದಿದ್ದು, ಈ ಚಿತ್ರವು ಮೊದಲ ಚಿತ್ರವನ್ನೂ ಮೀರಿಸಲಿದೆ ಎಂದು ನೆಟ್ಟಿಗರು ಈಗಾಗಲೇ ಭವಿಷ್ಯ ನುಡಿದಿದ್ದಾರೆ.

    ಇದನ್ನೂ ಓದಿ: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ಸಾಥ್ ಕೊಟ್ಟ ರಮ್ಯಾ … ಹೇಗೆ ಗೊತ್ತಾ?

    ‘ಅವತಾರ್​ – ದಿ ವೇ ಆಫ್​ ವಾಟರ್ಸ್​’ ಚಿತ್ರವು 3ಡಿಯಲ್ಲದೆ, ಐಮ್ಯಾಕ್ಸ್​ನಲ್ಲೂ ಬಿಡುಗಡೆಯಾಗಲಿದೆ. ಮೂಲ ಚಿತ್ರದಲ್ಲಿದ್ದ ಸ್ಯಾಮ್​ ವರ್ಥಿಂಗ್​ಟನ್​, ಜೋ ಸಲ್ದಾನ, ಸ್ಟೀಫನ್​ ಲ್ಯಾಂಗ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಮರಾಠಿ ಚಿತ್ರರಂಗಕ್ಕೆ ಅಕ್ಷಯ್​ ಕುಮಾರ್; ಛತ್ರಪತಿ ಶಿವಾಜಿಯಾಗಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts