ಸಾಯಲಿಕ್ಕೂ ಮರಳಿ ಯತ್ನವ ಮಾಡಿದ; ಒಮ್ಮೆ ಸೋತರೂ ಬಿಡದೇ ಸತ್ತ..

Adithya Kumar
Published on

ಉತ್ತರಕನ್ನಡ: ಸಾಯುವ ಸಲುವಾಗಿ ಒಮ್ಮೆ ಮಾಡಿದ್ದ ಪ್ರಯತ್ನ ವಿಫಲವಾದರೂ ಬಿಡದೇ ಮರಳಿ ಯತ್ನವ ಮಾಡಿದ ಯುವಕನೊಬ್ಬ ತನ್ನ ಎರಡನೇ ಪ್ರಯತ್ನದಲ್ಲಿ ಬದುಕಿಗೆ ವಿದಾಯ ಹೇಳಿದ್ದಾನೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲದ ಲಕ್ಷೇಶ್ವರ–ಕೆರೆಕಟ್ಟ ನಿವಾಸಿ ಆದಿತ್ಯಕುಮಾರ ನಾಯ್ಕ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಂಕೋಲದ ಬಾಳೆಗುಳಿ ಬಳಿ ಈತ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಟೋಚಾಲಕನಾಗಿದ್ದ ಈತ ಮಾನಸಿಕವಾಗಿ ನೊಂದಿದ್ದು, ಬಹುಶಃ ಪ್ರೇಮವೈಫಲ್ಯಕ್ಕೆ ಒಳಗಾಗಿರಬಹುದು ಎನ್ನಲಾಗಿದೆ. ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ. ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net