ಶಾಲೆ ಏನೋ ಶುರುವಾಯಿತು, ಆದರೆ ಹಾಜರಾತಿ ಯಾಕೆ ಹೀಗಾಯಿತು!?; ಹಬ್ಬದ ಬಳಿಕದ ಆ ನಿರೀಕ್ಷೆಯೂ ಹುಸಿಯಾಯಿತು..

School
Published on

ಬೆಂಗಳೂರು: ಹಬ್ಬದ ನಂತರದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಪ್ರಮಾಣ ಹೆಚ್ಚಾಗಲಿದೆ ಎಂಬ ಭರವಸೆ ಹುಸಿಯಾಗಿದೆ. ಸೋಮವಾರ 6ರಿಂದ 8ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಎಂದಿನಂತೆ ಶೇ.45 ಆಸುಪಾಸಿನಲ್ಲಿದೆ. ಆದರೆ, 9ರಿಂದ 10ನೇ ತರಗತಿಯ ಹಾಜರಾತಿ ಮಾತ್ರ ಶೇ.50 ದಾಟಿದೆ.

6ರಿಂದ 8ನೇ ತರಗತಿ ಆರಂಭವಾಗಿ ಒಂದುವಾರ ತುಂಬಿದೆ. ಹಬ್ಬ ಕೂಡ ಕಳೆದಿದೆ. ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಪಾಲಕರು ಏಕೋ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿರುವುದು ಹಾಜರಾತಿ ಪ್ರಮಾಣದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಹಬ್ಬದ ಹಿಂದಿನ ದಿನ ವಿದ್ಯಾರ್ಥಿಗಳ ಪ್ರಮಾಣ ಶೇ.35ಕ್ಕೆ ಕುಸಿತ ಕಂಡಿತು. ಆದರೆ, ಶಾಲೆ ಆರಂಭವಾದ ಎರಡು ಮೂರು ದಿನದಲ್ಲಿ ಶೇ.45 ಹಾಜರಾತಿ ಇತ್ತು. ಆ ಪ್ರಕಾರ ನೋಡಿದರೆ, ಶಾಲೆ ಆರಂಭವಾಗಿ ಒಂದುವಾರ ಕಳೆದಿದೆ. ಕನಿಷ್ಠ ಶೇ.50 ಹಾಜರಾತಿ ನಿರೀಕ್ಷೆಯಲ್ಲಿದ್ದ ಶಾಲೆಗಳ ಮುಖ್ಯಸ್ಥರು ಮಕ್ಕಳ ಹಾಜರಾತಿ ಪ್ರಮಾಣ ಬೇಸರ ತಂದಿದೆ.

6ನೇ ತರಗತಿ ಶೇ.43.50, 7ನೇ ತರಗತಿ ಶೇ.42.01 ಮತ್ತು 8ನೇ ತರಗತಿ ಶೇ.37.33 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇ.48.35 ಶಾಲೆಗಳು ವಿದ್ಯಾರ್ಥಿಗಳ ಹಾಜರಾತಿಯ ಅಂಕಿ-ಅಂಶಗಳನ್ನು ಅಪ್‌ಲೋಡ್ ಮಾಡಿದ್ದು, ಶೇ.51.65 ಶಾಲೆಗಳು ಅಪ್‌ಲೋಡ್ ಮಾಡಿಲ್ಲ. 9ನೇ ತರಗತಿ ಶೇ.54.52 ಹಾಗೂ 10ನೇ ತರಗತಿ ಶೇ.56.24 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net