More

    42 ಸಲ ಸಂಚಾರ ನಿಯಮ ಉಲ್ಲಂಘಿಸಿ ಕೊನೆಗೂ ಸಿಕ್ಕಿಬಿದ್ದ; ಜಂಟಿ ಪೊಲೀಸ್ ಆಯುಕ್ತರ ಅಭಿಮಾನಿ, ಪ್ರೆಸ್​ ಅಂತೆಲ್ಲ ಪೋಸ್ ಕೊಟ್ಟು ತಪ್ಪಿಸಿಕೊಳ್ತಿದ್ದ!

    ಬೆಂಗಳೂರು: ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್​. ರವಿಕಾಂತೇಗೌಡರ ಅಭಿಮಾನಿ, ಆರ್​ಟಿಐ ಕಾರ್ಯಕರ್ತ ಎಂದೆಲ್ಲ ಪೋಸ್ ಕೊಡುತ್ತಿದ್ದುದಲ್ಲದೆ, ವಾಹನದ ಮೇಲೆ ಪ್ರೆಸ್​ ಎಂಬುದರ ಜತೆಗೆ ಜಂಟಿ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಸ್ಟಿಕರ್ ಹಾಕಿಸಿಕೊಂಡಿದ್ದಾತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ತ್ಯಾಗರಾಜ ನಗರ ನಿವಾಸಿ ಪಿ. ಗಿರೀಶ್ ​ಬಾಬು (58) ಆರೋಪಿ. ಈತ KA 05 JS 2581 ನಂಬರ್​ನ ತನ್ನ ದ್ವಿಚಕ್ರ ವಾಹನದ ನಂಬರ್​ ಪ್ಲೇಟ್​ ಮೇಲೆ ಪ್ರೆಸ್ ಎಂದು ಬರೆಸಿಕೊಂಡಿದ್ದ. ಅಲ್ಲದೆ ವಾಹನದ ಮೇಲೆ ರವಿಕಾಂತೇಗೌಡರ ಹೆಸರು ಬರೆಸಿಕೊಂಡಿದ್ದಲ್ಲದೆ, ಆರ್​ಟಿಐ ಕಾರ್ಯಕರ್ತ ಎಂದೂ ಹೇಳಿಕೊಂಡು ತಿರುಗುತ್ತಿದ್ದ. ಹೀಗೆ ಈತ 42 ಸಾಲ ಸಂಚಾರ ನಿಯಮ ಉಲ್ಲಂಘಿಸಿ, 20,200 ರೂ. ದಂಡ ಪಾವತಿಸಬೇಕಿರುತ್ತದೆ. ಅದಾಗ್ಯೂ ಹೀಗೆಲ್ಲ ಪೋಸ್ ಕೊಟ್ಟು ಕೊಂಡು ಈತ ತಿರುಗುತ್ತಿದ್ದ ಕುರಿತ ಫೋಟೋಗಳು ವೈರಲ್ ಆಗಿದ್ದವು.

    ಇದನ್ನೂ ಓದಿ: ನದಿ ನೀರಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ಅಮ್ಮನೂ ನೀರುಪಾಲು!

    ಈ ಬಗ್ಗೆ ತಿಳಿದ ಜಂಟಿ ಪೊಲೀಸ್ ಆಯಕ್ತ ಡಾ.ಬಿ.ಆರ್. ರವಿಕಾಂತೇಗೌಡ ಅವರು ಆರೋಪಿಯ ಪತ್ತೆಗಾಗಿ ಜಯನಗರ ಸಂಚಾರ ಠಾಣೆ ಪೊಲೀಸ್ ಇನ್​​​ಸ್ಪೆಕ್ಟರ್ ಪಿ.ಎನ್. ಈಶ್ವರಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಸೂಚಿಸಿದ್ದರು. ಈ ತಂಡ ಆರೋಪಿಯನ್ನು ಪತ್ತೆ ಮಾಡಿ, ವಾಹನ ವಶಕ್ಕೆ ಪಡೆದಿದೆ. ಯಾರಾದರೂ ಹೀಗೆ ಪೊಲೀಸ್ ಅಧಿಕಾರಿಗಳ ಅಥವಾ ಮಾಧ್ಯಮದ ಹೆಸರು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದಲ್ಲಿ ಸಂಬಂಧಪಟ್ಟ ಠಾಣೆಗೆ ತಿಳಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

    ಸಂಚಾರಿ ಪೊಲೀಸ್ ಆಯುಕ್ತರು ಓದಲೇಬೇಕಾದ ಸ್ಟೋರಿ ಇದು: ಪೊಲೀಸರಿಗೆ ಸವಾಲಾದ ಬೈಕ್ ಸವಾರ ಈತ!

    ನನಗೂ ಹಣ ಕೊಡು, ಠಾಣೆಗೂ ದುಡ್ಡು ಕೊಡು ಎಂದು ರೌಡಿಶೀಟರ್​ ಬಳಿ ಲಂಚ ಕೇಳಿದ ಇನ್​ಸ್ಪೆಕ್ಟರ್​; ರೌಡಿಶೀಟರ್ ಪರ ಶಾಸಕರ ಶಿಫಾರಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts