ನವದೆಹಲಿ: ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದ್ದು, ಪ್ರವಾಸಿ ತಂಡವನ್ನು ಬಗ್ಗು ಬಡಿಯಲು ಭರ್ಜರಿ ಯೋಜನೆ ರೂಪಿಸಿಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಸ್ ಸರಣಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗೆ ಕೆ.ಎಲ್. ರಾಹುಲ್ ಕಮ್ಬ್ಯಾಕ್ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಾಹುಲ್ ತಮ್ಮನ್ನು ನಿರೂಪಿಸಲು ಬಾಂಗ್ಲಾ ವಿರುದ್ಧದ ಸೀರೀಸ್ ಉತ್ತಮ ಅವಕಾಶ ಎಂದು ಹೇಳಿದರೆ ತಪ್ಪಾಗಲಾರದು.
ತಂಡಕ್ಕೆ ರಾಹುಲ್ ಕಮ್ಬ್ಯಾಕ್ ಮಾಡಿರುವ ಕುರಿತು ಮಾತನಾಡಿರು ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ನನಗೆ ವೈಯಕ್ತಿಕವಾಗಿ ಕೆ.ಎಲ್. ರಾಹುಲ್ ಎಂದರೆ ತುಂಬಾ ಇಷ್ಟ. ಆತ ರನ್ಗಳಿಸುತ್ತಲೇ ಇದ್ದರೆ ಮುಂದಕ್ಕೆ ಸಾಗುತ್ತಾನೆ. ಆತನ ಅದೃಷ್ಟ ಏನೆಂದರೆ ವಿರಾಟ್ ಹಾಗೂ ರೋಹಿತ್ ಜೊತೆ ಆಟವಾಡಲು ಸದಾ ಅವನಿಗೆ ಅವಕಾಶ ಸಿಗುತ್ತದೆ.
ಇದನ್ನೂ ಓದಿ: ರಾತ್ರಿ 2:30ಕ್ಕೆ ರೋಹಿತ್ ನನಗೆ ಮೆಸ್ಸೇಜ್ ಕಳುಹಿಸಿ… ಹಿಟ್ಮ್ಯಾನ್ ಕುರಿತು ಕೇಳದ ಕಥೆಯನ್ನು ಬಹಿರಂಗಪಡಿಸಿದ ಸಹ ಆಟಗಾರ
ನನ್ನ ಪ್ರಕಾರ ರಾಹುಲ್ ಎಷ್ಟೇ ಚೆನ್ನಾಗಿ ಆಟವಾಡಿದರೂ ಆತನ ವಿರುದ್ಧ ತಂಡದಲ್ಲಿ ಸದಾ ಒಂದು ವಾತಾವರಣವನ್ನು ನಿರ್ಮಿಸಲಾಗುತ್ತದೆ. ಈ ವಿಚಾರವಾಗಿ ಆತನ ಎದುರು ಸಾಕಷ್ಟು ಎದುರು ನಿಲ್ಲುವವರಿದ್ದಾರೆ. ಬೇರೆಯವರಿಗೆ ಸಿಗುವ ಅವಕಾಶ ಅವನಿಗೆ ಸಿಗುವುದಿಲ್ಲ. ಆತ ತಂಡ ಕಷ್ಟದ ಸಮಯದಲ್ಲಿ ಇರಬೇಕಾದಾಗ ಸಾಕಷ್ಟು ರನ್ ಗಳಿಸಿದ್ದಾನೆ. ಹಾಗಾಗಿ ನಾನು ಅವನಿಗೆ ಸಂಪೂರ್ಣ ಅವಕಾಶ ಕೊಡುತ್ತೇನೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸಿ ಸಂಪೂರ್ಣ ವಿಶ್ವಾಸದಲ್ಲಿರುವ ಬಾಂಗ್ಲಾದೇಶ ತಂಡವು ಭಾರತದ ವಿರುದ್ಧವೂ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಸಜ್ಜಾಗಿದೆ. ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬಾಂಗ್ಲಾ ತಂಡವನ್ನು ಬಗ್ಗು ಬಡಿಯಲು ಭಾರತ ಸಜ್ಜಾಗಿದೆ.