ನವದೆಹಲಿ: ಹರಿಯಾಣ ಸರ್ಕಾರವು ದೆಹಲಿಗೆ ಸಮರ್ಪಕವಾಗಿ ನೀರನ್ನು ನೀಡುತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಡಬೇಕಾದರೆ ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಆದ್ದರಿಂದ ನಾನು ಶುಕ್ರವಾರ (ಜೂನ್ 21) ‘ಜಲ ಸತ್ಯಾಗ್ರಹ’ ಆರಂಭಿಸುತ್ತೇನೆ. ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ದಕ್ಷಿಣ ದೆಹಲಿಯ ಭೋಗಲ್ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸುತ್ತೇನೆ ಎಂದು ಸಚಿವೆ ಅತಿಶಿ ಹೇಳಿದ್ದಾರೆ.
ಇದನ್ನು ಓದಿ: ಆರೋಗ್ಯವಾಗಿರಲು ಡಿಟಾಕ್ಸ್ ಡ್ರಿಂಕ್ ಅತ್ಯವಶ್ಯಕ; ದೇಹದೊಳಗಿನ ವಿಷಕಾರಿ ಅಂಶ ತೆಗೆಯಲಿರುವ ಮಾರ್ಗ
ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರೂ ಹರಿಯಾಣ ಸರ್ಕಾರವು ದೆಹಲಿಗೆ ಪೂರ್ಣ ಪ್ರಮಾಣದ ನೀರನ್ನು ನೀಡುತ್ತಿಲ್ಲ. ಆದ್ದರಿಂದ ಸತ್ಯಾಗ್ರಹ ನಡೆಸುವುದಾಗಿ ಅತಿಶಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ಎರಡು ವಾರಗಳಿಂದ ಹರಿಯಾಣ ತನ್ನ ಪಾಲಿನ 613 MGD ಗಿಂತ ದೆಹಲಿಗೆ ದಿನಕ್ಕೆ 100 ಮಿಲಿಯನ್ ಗ್ಯಾಲನ್ ಕಡಿಮೆ ನೀರನ್ನು ನೀಡುತ್ತಿದೆ, ಇದರ ಪರಿಣಾಮವಾಗಿ ದೆಹಲಿಯಲ್ಲಿ 28 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಸಚಿವೆ ಈ ಹಿಂದೆ ಹೇಳಿದ್ದರು.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಕ್ಕೂ ಮುನ್ನು ಸಚಿವೆ ಅತಿಶಿ ಅವರು ಮುಂಜಾನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವರಾದ ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್ ಮತ್ತು ಇತರ ಶಾಸಕರು ಕೂಡ ರಾಜ್‌ಘಾಟ್‌ಗೆ ಭೇಟಿ ನೀಡಿಲಿದ್ದಾರೆ. ಬಳಿಕ ರಾಜ್ಘಾಟ್ನಿಂದ ಜಂಗ್‌ಪುರಕ್ಕೆ ಸಚಿವೆ ಅತಿಶಿ ಅವರೊಂದಿಗೆ ಎಎಪಿ ನಾಯಕರು ತೆರಳಲಿದ್ದು ಅಲ್ಲಿ ಅತಿಶಿ ಉಪವಾಸ ಆರಂಭಿಸಲಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.
ಈ ಹಿಂದೆ ಸುಪ್ರೀಂಕೋರ್ಟ್ ಹೆಚ್ಚುವರಿ ನೀರನ್ನು ದೆಹಲಿಗೆ ಬಿಡುಗಡೆ ಮಾಡಲು ಹಿಮಾಚಲ ಪ್ರದೇಶ ಸರ್ಕಾರ ಒಪ್ಪಿಗೆ ನೀಡಿದೆ ಎಂದಿತ್ತು ಹಾಗೂ ಹತ್ನಿಕುಂಡ ಬ್ಯಾರೇಜ್‌ನಿಂದ ಬಿಡುಗಡೆಗೊಂಡ ನೀರನ್ನು ವಜೀರಾಬಾದ್‌ಗೆ ತಲುಪಿಸಲು ಸಹಾಯ ಮಾಡಬೇಕೆಂದು ಹರಿಯಾಣ ಸರ್ಕಾರಕ್ಕೆ ಸೂಚಿಸಿತ್ತು. (ಏಜೆನ್ಸೀಸ್)