

ಚೆನ್ನೈ: ತಮಿಳುನಾಡಿನ ಕಡಲೂರಿನಲ್ಲಿರುವ ಎನ್ಎಲ್ಸಿ ಇಂಡಿಯಾ ಲಿಮಿಟೆಡ್ (ನಿವೆಲಿ ಲಿಗ್ನೈಟ್ ಕಾರ್ಪೋರೇಶನ್ ಲಿಮಿಟೆಡ್- ವಿದ್ಯುತ್ ಮತ್ತು ಕಂದು ಕಲ್ಲಿದ್ದಲು ಗಣಿಗಾರಿಕಾ ಘಟಕ)ನಲ್ಲಿ ಬಾಯ್ಲರ್ ಸ್ಫೋಟಗೊಂಡು ಸುಮಾರು 6 ಮಂದಿ ಮೃತಪಟ್ಟಿದ್ದು, 17 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಇಂದು ಮುಂಜಾನೆ ಘಟನೆ ನಡೆದಿದೆ. ಸುಟ್ಟ ಗಾಯಗಳಾದ 17 ಮಂದಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)