ಅಮೆರಿಕಾದಲ್ಲಿ ಭೀಕರ ಗುಂಡಿನ ದಾಳಿ; 22 ಮಂದಿ ಮೃತ್ಯು

Shootout
Published on

ನವದೆಹಲಿ: ಸಶಸ್ತ್ರಧಾರಿ ವ್ಯಕ್ತಿಯೋರ್ವ ಆಸ್ಪತ್ರೆ​ ಒಂದಕ್ಕೆ ನುಗ್ಗಿ ಸಾಮೂಹಿಕ ಗುಂಡಿನ ದಾಳಿ ನಡೆಸಿದ ಪರಿಣಾಮ 22 ಮಂದಿ ಮೃತಪಟ್ಟು, ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕಾದ ಲೆವಿಸ್ಟೋನ್ ಪ್ರಾಂತ್ಯದ ಮೈನೆ ಪಟ್ಟಣದಲ್ಲಿ ನಡೆದಿದೆ.

ಗಾಯಗೊಂಡಿರುವವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಶಂಕಿತನ ಫೋಟೋವನ್ನು ಸ್ಥಳೀಯ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಂದೂಕುಧಾರಿಯು ತನ್ನ ಭುಜದ ಮೇಲೆ ಆಯುಧವನ್ನು ತೂಗುಹಾಕಿಕೊಂಡು ಮಾಲ್ ಪ್ರವೇಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸರು ದಾಳಿಕೋರನ ಫೋಟೋ ಬಿಡುಗಡೆ ಮಾಡಿದ್ದು, ಜನರ ಸಹಾಯ ಕೋರಿದ್ದಾರೆ. ಫೋಟೋದಲ್ಲಿ ಉದ್ದನೆಯ ತೋಳಿನ ಅಂಗಿ ಮತ್ತು ಜೀನ್ಸ್​ ಧರಿಸಿರುವ ಗಡ್ಡಧಾರಿಯೊಬ್ಬ ಫೈರಿಂಗ್ ರೈಫಲ್ ಹಿಡಿದು ಗುಂಡು ಹಾರಿಸುತ್ತಿದ್ದಾನೆ. ಲೆವಿಸ್ಟನ್​ನಲ್ಲಿರುವ ಸೆಂಟ್ರಲ್ ಮೈನೆ ಮೆಡಿಕಲ್ ಸೆಂಟರ್​ನಲ್ಲಿ ಈ ಸಾಮೂಹಿ ಗುಂಡಿನ ದಾಳಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net