More

    VIDEO| ಮಹಿಳೆಯ ಹಸ್ತಕ್ಷೇಪದಿಂದ ಇಕ್ಕಟ್ಟಿಗೆ ಸಿಲುಕಲಿದೆ ಸರ್ಕಾರ; ದೇವರಗುಡ್ಡ ಕಾರ್ಣಿಕ ನುಡಿ

    ಹಾವೇರಿ: ವರ್ಷದ ಭವಿಷ್ಯವಾಣಿ ಎಂದೇ ಚಿರಪರಿಚಿತವಾಗಿರುವ ಮಾಲತೇಶ ದೇವರ ಕಾರ್ಣಿಕದಲ್ಲಿ ಈ ಬಾರಿ ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್ ಎಂದು ಗೊರವಯ್ಯ ಸ್ವಾಮಿ ದೈವವಾಣಿ ನುಡಿದಿದ್ದಾರೆ. ಹಾವೇರಿಯ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿರುವ ಈ ದೇವಸ್ಥಾನವು ಹಲವು ವರ್ಷಗಳ ಇತಿಹಾಸವನ್ನು ಹೊಂದಿದೆ.

    ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ ಈ ಬಾರಿಯ ಕಾರ್ಣಿಕ ನುಡಿದಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಕಾರ್ಣಿಕ ವಾಣಿಯನ್ನು ವಿಶ್ಲೇಷಿಸಿದ್ದಾರೆ.

    ಈ ಬಾರಿ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬರಗಾಲ ಎದುರಾಗಿರುವುದರಿಂದ ರೈತರಿಗೆ ಭಾರೀ ನಷ್ಟವಾಗುವ ಸಂಭವ ಇದೆ. ರೈತರು ಭೂಮಿಗೆ ಸುರಿದ ಬಂಡವಾಳ ಕೈಗೆ ವಾಪಸ್ ಬರುವುದು ಕಷ್ಟ ಎಂದು ಈ ಕಾರ್ಣಿಕದ ನುಡಿಯನ್ನು ವಿಶ್ಲೇಷಿಸಲಾಗಿದೆ. ಇನ್ನೂ ರಾಜಕೀವಾಗಿ  ಕೋಟ್ಯಂತರ ಜನರು ಮತ ಹಾಕಿ ಸರ್ಕಾರವನ್ನು ಬಹುಮತದಿಂದ ತಂದಿದ್ದಾರೆ. ಅದರೆ ಮಹಿಳೆಯ ಹಸ್ತಕ್ಷೇಪದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ. ಸರ್ಕಾರ ಏರುಪೇರು ಆಗುವ ಹಂತಕ್ಕೆ ಸಹ ತಲುಪಲಿದೆ ಎಂದು ಈ ಬಾರಿಯ ಕಾರ್ಣಿಕ ವಾಣಿಯನ್ನು ವಿಶ್ಲೇಷಿಸಿಲಾಗಿದೆ.

    ಕಾರ್ಣಿಕ

    ಇದನ್ನೂ ಓದಿ: ಮಣಿಪುರ ಹಿಂಸಾಚಾರ; ಅದು ನಡೆದಿಲ್ಲ, ಯಾರೋ ನಡೆಸಿರುವುದು: ಮೋಹನ್​ ಭಾಗವತ್

    ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕ ಕೇಳಲು ಸಾವಿರಾರು ಜನ ಸೇರುತ್ತಾರೆ. ಸುಮಾರು 9 ದಿನಗಳ ಕಾಲ ಕಠಿಣ ಉಪವಾಸ ವ್ರತ ಮಾಡಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ. ಕರಿಯಾಲ ಪ್ರದೇಶಕ್ಕೆ ಡಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಾರೆ.

    ರಾಣೇಬೆನ್ನೂರಿನ ದೇವರಗುಡ್ಡದ ಮಾಲತೇಶ ದೇವಸ್ಥಾನ ಹಲವು ವರ್ಷಗಳ ಇತಿಹಾಸ ಹೊಂದಿದೆ. ಸಂಜೆ ವೇಳೆಗೆ ಕಾರ್ಣಿಕ ಸ್ಥಳಕ್ಕೆ ಬರುವ ಗೊರವಯ್ಯ 21 ಅಡಿ ಎತ್ತರದ ಬಿಲ್ಲನ್ನೇರಿ ಕಾರ್ಣಿಕ ನುಡಿಯುತ್ತಾರೆ. ಸದ್ದಲೇ ಎಂದಾಕ್ಷಣ ಕಿಕ್ಕಿರಿದು ಸೇರಿದ ಜನರು ಮೌನಕ್ಕೆ ಜಾರುತ್ತಾರೆ. ಆಗ ಗೊರವಪ್ಪ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts