More

    ಮಣಿಪುರ ಹಿಂಸಾಚಾರ; ಅದು ನಡೆದಿಲ್ಲ, ಯಾರೋ ನಡೆಸಿರುವುದು: ಮೋಹನ್​ ಭಾಗವತ್

    ನಾಗ್ಪುರ: ಮಣಿಪುರದಲ್ಲಿ ಸಂಭೌಇಸಿದ ಘರ್ಷಣೆಯ ಹಿಂದೆ ಪಿತೂರಿ ಅಡಗಿದ್ದು, ಇದರಲ್ಲಿ ಗಡಿಯಾಚೆಗಿನ ಉಗ್ರರ ಕೈವಾಡವಿರಬಹುದು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​​ ಶಂಕೆ ವ್ಯಕ್ತಪಡಿಸಿದ್ದಾರೆ.

    ನಾಗ್ಪುರದಲ್ಲಿ ಆರ್​ಎಸ್​ಎಸ್​ ದಸರಾ ರ‍್ಯಾಲಿ ಉದ್ಧೇಶಿಸಿ ಮಾತನಾಡಿದ ಭಾಗವತ್ ಕಳೆದ ಹಲವು ವರ್ಷಗಳಿಂದ ಜತೆಯಾಗಿ ವಾಸಿಸುತ್ತಿದ್ದ ಎರಡು ಸಮುದಾಯಗಳ ನಡುವೆ ಏಕಾಏಕಿ ಗಲಾಟೆಯಾಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

    ಹಲವು ವರ್ಷಗಳಿಂದ ಮೈತೇಯಿ ಹಾಗೂ ಕುಕಿ ಸಮುದಾಯಗಳು ಒಟ್ಟಿಗೆ ವಾಸಿಸುತ್ತಿವೆ. ಈ ಎರಡು ಸಮುದಾಯಗಳ ನಡುವೆ ಇದ್ದಕ್ಕಿದ್ದಂತೆ ಏಕಏಕಿ ಗಲಾಟೆ ಶುರುವಾಗಿದ್ದು, ದಿನ ಕಳೆದಂತೆ ಹಿಂಸಾಚಾರಕ್ಕೆ ತಿರುಗಿದೆ. ಇಂತಹ ಸಂಘರ್ಷಗಳಿಗೆ ಬಾಹ್ಯ ಶಕ್ತಿಗಳು ಬೆಂಬಲ ನೀಡುತ್ತಿದ್ದು, ಇದರ ಹಿಂದೆ ದೊಡ್ಡ ಪಿತೂರಿ ಅಡಗಿದೆ. ಗಡಿಯಾಚೆಗಿನ ಉಗ್ರರು ಮಣಿಪುರದಲ್ಲಿ ಸಂಭವಿಸಿದ ಹಿಂಸಾಚಾರವನ್ನು ಪ್ರಚೋದಿಸಿರಬಹುದು ಎಂದು ಶಂಕಿಸಿದ್ದಾರೆ.

    ಇದನ್ನೂ ಓದಿ: ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಜಯ; ರಶೀದ್​ ಖಾನ್ ಜತೆ ಮಸ್ತ್​ ಸ್ಟೆಪ್ಸ್​ ಹಾಕಿದ ಇರ್ಫಾನ್ ಪಠಾಣ್

    ಕೇಂದ್ರ ಗೃಹ ಸಚಿವ ಅಮಿತ್​ ಷಾ ಮೂರು ದಿನಗಳ ಕಾಲ ಮಣಿಪುರದಲ್ಲಿದ್ದರು ಸಹ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿತ್ತು. ಹಿಂಸಾಚಾರಕ್ಕೆ ಯಾರೋ ಕೆಲವರು ಪ್ರಚೋದನೆ ನೀಡುತ್ತಿದ್ದು, 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ರೀತಿಯ ಗಲಭೆಯನ್ನು ಸೃಷ್ಟಿಸಿ ಮತಗಳನ್ನು ವಿಭಜಿಸುವ ಹುನ್ನಾರ ನಡೆದಿದೆ. ದೇಶದ ಏಕತೆ, ಸಮಗ್ರತೆ, ಅಸ್ಮಿತೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.

    ಗಲಭೆಪೀಢಿತ ಮಣಿಪುರದಲ್ಲಿ ಶಾಂಯಿ ಪುನರ್​ಸ್ಥಾಪಿಸಲು ಶ್ರಮ ವಹಿಸಿದ ಪ್ರತಿಯೊಬ್ಬ ಆರ್​ಎಸ್​ಎಸ್​ ಕಾರ್ಯಕರ್ತರ ಬಗ್ಗೆ ನಗೆ ಹೆಮ್ಮೆಯಿದೆ. ಕೆಲವು ಸಮಾಜವಿರೋಧಿಗಳು ತಮ್ಮನ್ನು ತಾವು ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಎಂದು ಹೇಳಿಕೊಂಡು ತಿರುಗುತ್ತಾರೆ. ಆದರೆ, ಮಾರ್ಕ್ಸ್​​ ಸಿದ್ಧಾಂತವನ್ನೇ ಮರೆತ್ತಿದ್ದಾರೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​ ದಸರಾ ರ‍್ಯಾಲಿಯಲ್ಲಿ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts