More

    ಜಂಬೂ ಸವಾರಿಗೆ ಆಗಮಿಸಿದ ಹೆಣ್ಣಾನೆಗೆ ಹೆರಿಗೆಯ ಸಂಭ್ರಮ

    ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂಸವಾರಿಗೆ ಆಗಮಿಸಿದ್ದ ನೇತ್ರಾವತಿ (27) ಹೆಸರಿನ ಆನೆಯೊಂದು ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

    ಸೋಮವಾರ ತಡರಾತ್ರಿ ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳ ತಂಡ ಬೀಡುಬಿಟ್ಟಿತ್ತು. ಶಾಲೆಯ ಆವರಣದಲ್ಲಿ ಆನೆ ಮರಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರು ಸಹ ಆರೋಗ್ಯವಾಗಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವು ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ನೆರವೇರುತ್ತದೆ. ಶಿವಮೊಗ್ಗ ಪಾಲಿಕೆ ಮೇಯರ್ ಮನವಿ ಬೆನ್ನಲ್ಲೆ ಸಕ್ರೈಬೈಲು ಬಿಡಾರದಿಂದ 3 ಪಳಗಿದ ಆನೆಗಳನ್ನು ಇಲ್ಲಿನ ದಸರಾ ಕಳುಹಿಸಲು ಅರಣ್ಯ ಸಚಿವರಿಂದ ಅನುಮತಿ ಸಹ ದೊರೆತಿತ್ತು. ಅದರಂತೆ ಸಾಗರ್ (ಗಂಡಾನೆ), ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಹಬ್ಬಕ್ಕೂ ಮೊದಲೇ ಮಲೆನಾಡಿನ ಜಿಲ್ಲೆಗೆ ಬಂದು ಇಲ್ಲಿನ ವಾಸವಿ ಶಾಲಾ ಆವರಣದಲ್ಲಿ ನೆಲೆಸಿದ್ದವು. ಅಗತ್ಯ ತಾಲೀಮು ಸಹ ನಡೆಸಲಾಗಿತ್ತು.

    ವಿಜಯದಶಮಿ ದಿನವೇ ಗರ್ಭಿಣಿ ಆನೆ ನೇತ್ರಾವತಿ ಮುದ್ದು ಮರಿಗೆ ಜನ್ಮ ನೀಡಿದೆ. ಬೆಳಗ್ಗೆ ಮೂರು ಆನೆಗಳು ಶಿವಮೊಗ್ಗ ನಗರದ ಸುತ್ತಾಡಿದ್ದವು. ಸಂಜೆ ಮರಿ ಹಾಕಿದೆ. ಬಿಡಾರದಲ್ಲಿ ನೇತ್ರಾವತಿ ಗರ್ಭಿಣಿ ಆಗಿದ್ದರೂ ಉತ್ಸವಕ್ಕೆ ಕರೆತಂದಿದ್ದರ ಬಗ್ಗೆ ಜಿಲ್ಲಾಧಿಕಾರಿಗಳು, ಪಾಲಿಕೆ ಅಧಿಕಾರಿಗಳು ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Elephant Delivery

    ಇದನ್ನೂ ಓದಿ: ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ; ದುಬೈನಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ ED

    ಪರೀಕ್ಷೆಯಲ್ಲಿ ತಿಳಿದಿರಲಿಲ್ಲ

    ಸಕ್ರೆಬೈಲು ಬಿಡಾರದಲ್ಲಿ ಕುಂತಿ ಎಂಬ ಹೆಣ್ಣಾನೆ ಮರಿ ಹಾಕಿದ್ದರಿಂದ ಅದರ ಬದಲಾಗಿ ನೇತ್ರಾವತಿಯನ್ನು ಅಂತಿಮಗೊಸಿ ಕರೆ ತರಲಾಗಿತ್ತು. ನೇತ್ರಾವತಿ ಆನೆ ಗರ್ಭಿಣಿ ಎಂಬ ವಿಚಾರವು ಬಿಡಾರದ ಸಿಬ್ಬಂದಿ ಹಾಗೂ ವೈದ್ಯರಿಗೆ ಸಹ ಗೊತ್ತಿರಲಿಲ್ಲ. ಮೈಸೂರು ದಸರಾ ಜಂಬುಸವಾಗಿರು ಸಹ ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಈ ಸಂದರ್ಭ ನೇತ್ರಾವತಿ ಆನೆಯ ಆರೋಗ್ಯ ಪರೀಕ್ಷೆ ನಡೆದಿತ್ತು. ಆಗ ನೇತ್ರಾವತಿ ಆನೆ ಗರ್ಭಿಣಿ ಎಂಬ ವಿಚಾರ ತಿಳಿದಿರಲಿಲ್ಲ. ಶಿವಮೊಗ್ಗ ದಸರಾ ಹಿನ್ನಲೆಯಲ್ಲಿ ನೇತ್ರಾವತಿಯನ್ನು ಮೈಸೂರಿಗೆ ಕಳುಹಿಸಿರಲಿಲ್ಲ.

    ಶಿವಮೊಗ್ಗ ದಸರಾ ಹಿನ್ನಲೆಯಲ್ಲಿ ಮೂರು ದಿನಗಳ ಹಿಂದೆಯೇ ನಗರಕ್ಕೆ ನೇತ್ರಾವತಿ, ಸಾಗರ್ ಹಾಗೂ ಹೇಮಾವತಿ ಆನೆಗಳು ಬಂದಿದ್ದವು. ಸೋಮವಾರ ಸಂಜೆ ಅಮತಿಮ ಹಂತದ ತಾಲೀಮು ನಡೆಸಿ ವಾಸವಿ ಶಾಲೆ ಆವರಣಕ್ಕೆ ವಾಪಸ್​ ತೆರಳಿದ್ದವು. ಶಾಲೆಯ ಆವರಣಕ್ಕೆ ತೆರಳಿದ ಕೆಲವೇ ಹೊತ್ತಿನಲ್ಲಿ ಆನೆ ಮರಿಗೆ ಜನ್ಮ ನೀಡಿದೆ.

    ಸಾರ್ವಜನಿಕರ ಅಸಮಾಧಾನ

    ಮರಿಗೆ ಜನ್ಮ ನೀಡಿದ ನೇತ್ರಾವತಿ ಆನೆ ಹಾಗೂ ಮರಿಯನ್ನು ಸಕ್ರೆಬೈಲು ಬಿಡಾರಕ್ಕೆ ಕರೆದೊಯ್ಯಲಾಗಿದೆ. ನೇತ್ರಾವತಿ ಆನೆ ಗರ್ಭವತಿ ಆಗಿರುವುದು ಅರಣ್ಯ ಸಿಬ್ಬಂದಿಗೆ, ವೈದ್ಯರಿಗೆ ತಿಳಿಯದಿರುವುದು ಆಶ್ಚರ್ಯ ಉಂಟು ಮಾಡಿದೆ. ಗರ್ಭವತಿಯಾಗಿದ್ದ ಆನೆಯನ್ನು ದಸರಾ ಜಂಬೂ ಸವಾರಿ ತಾಲೀಮಿನಲ್ಲಿ ಬಳಸಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts