ಮೇಷ: ಅನಾರೋಗ್ಯದ ಕಾರಣದಿಂದ ಅವಕಾಶ ವಂಚಿತರಾಗುವ ಸಾಧ್ಯತೆ. ಗೃಹ ನಿರ್ಮಾಣ ಕಾರ್ಯ ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಶುಭಸಂಖ್ಯೆ: 9.ವೃಷಭ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೆಮ್ಮದಿ ದೊರೆಯುತ್ತದೆ. ವಿದೇಶ ಪ್ರಯಾಣವನ್ನು ಕೆಲ ದಿನ ಮುಂದೂಡುವುದು ಒಳ್ಳೆಯದು. ಶುಭಸಂಖ್ಯೆ: 4.ಮೀಥುನ: ಸೇವಾ ಕಾರ್ಯದಲ್ಲಿ ಭಾಗವಹಿಸುವಿರಿ. ಸಹೋದರ ರೊಂದಿಗೆ ಆಸ್ತಿ ವಿವಾದ ಪರಿಹಾರ. ಸಾಲದ ಋಣದಿಂದ ಮುಕ್ತರಾಗುವಿರಿ. ಶುಭಸಂಖ್ಯೆ: 2.ಕಟಕ: ನಾಟ್ಯ ಕಲಾವಿದರಿಗೆ ಅವಕಾಶ ದೊರೆಯುತ್ತದೆ. ನಿವೇಶನ ಖರೀದಿ ಮುಂದೂಡಿ. ಕುಟುಂಬದ ಭೂ ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ: 6.ಸಿಂಹ: ಪ್ರಭಾವಿ ವ್ಯಕ್ತಿಗಳಿಂದ ಸಹಾಯ. ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ದಕ್ಷತೆಯಿಂದ ವರ್ತಿಸುವಿರಿ. ಶುಭಸಂಖ್ಯೆ:4 .ಕನ್ಯಾ: ಆದಾಯಕ್ಕಿಂತ ಖರ್ಚು ಅಧಿಕ. ವ್ಯವಹಾರಗಳಲ್ಲಿ ಹೊಸ ಸವಾಲು ಎದುರಾಗುತ್ತವೆ. ಹಳೆಯ ಸ್ನೇಹಿತರೊಂದಿಗೆ ಭೋಜನಕೂಟ.ಶುಭಸಂಖ್ಯೆ: 6.ತುಲಾ: ಹೊಸ ಕೆಲಸದಲ್ಲಿ ಶ್ರಮ ಅಧಿಕವಾಗಲಿದೆ. ಕೈಗೆತ್ತಿಕೊಂಡ ಕೆಲಸ ವೇಗವಾಗಿ ಸಾಗುತ್ತದೆ. ಬಂಧುಗಳಿಂದ ಸಾಲ ತೀರಿಸಲು ಸಹಾಯ. ಶುಭಸಂಖ್ಯೆ: 8.ವೃಶ್ಚಿಕ: ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ. ಕೇಂದ್ರ ಸರ್ಕಾರಿ ನೌಕರರಿಗೆ ಪದವಿ ಪ್ರಾಪ್ತಿ.ಶುಭಸಂಖ್ಯೆ:1.ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಪಾಲುದಾರರ ಆಗಮನ. ಮಕ್ಕಳ ಮಾತು ಭಾವನಾತ್ಮಕವಾಗಿ ನೋವುಂಟು ಮಾಡುತ್ತವೆ. ಶುಭಸಂಖ್ಯೆ:9.ಮಕರ: ಅಮೂಲ್ಯವಾದ ವಸ್ತುವನ್ನು ಖರೀದಿಸುವಿರಿ. ಹಳೆಯ ಸ್ನೇಹಿತರ ಸಮಾಗಮ. ತಾಂತ್ರಿಕ ವಿದ್ಯಾರ್ಥಿಗಳು ಯಶಸ್ಸು ಸಾಧಿಸುತ್ತೀರಿ. ಶುಭಸಂಖ್ಯೆ: 6.ಕುಂಭ: ಆಧ್ಯಾತ್ಮ ಗುರುಗಳ ಭೇಟಿಯಿಂದ ಸಮಾಧಾನ. ಉದ್ಯೋಗದಲ್ಲಿ ಶ್ರಮ ಜಾಸ್ತಿ. ಸಂಗೀತ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ: 9 .ಮೀನಾ: ಪಿತ್ರಾರ್ಜಿತ ಆಸ್ತಿ ಹಂಚಿಕೆ ಆಗಲಿದೆ. ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಶುಭಸಂಖ್ಯೆ: 4