ನಿತ್ಯ ಭವಿಷ್ಯ: ಈ ರಾಶಿಯವರ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ | Nitya Bhavishya

Nitya Bhavishya
Nitya Bhavishya
Published on
ಮೇಷ: ಬಾಳೆ, ತೆಂಗು ಕೃಷಿಕರಿಗೆ ಲಾಭ. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ಯುವತಿಯರಿಗೆ ಮದುವೆಗೆ ಕಾಲ ಕೂಡಿ ಬರಲಿದೆ. ಶುಭಸಂಖ್ಯೆ:1
ವೃಷಭ: ಸಿದ್ಧ ಉಡುಪು ಕಾರ್ಖಾನೆ ಮಾಲೀಕರಿಗೆ ಕಾರ್ಮಿಕರ ಕಾಳಜಿ ಅಗತ್ಯ. ಪ್ರಭಾವಿ ವ್ಯಕ್ತಿಯ ಭೇಟಿ. ಭೂ ವ್ಯಾಪಾರದಲ್ಲಿ ನಿರೀಕ್ಷೆ ಬೇಡ. ಶುಭಸಂಖ್ಯೆ: 7
ಮೀಥುನ: ನ್ಯಾಯಾಲಯದ ಕೆಲಸಗಳಲ್ಲಿ ಜಯ. ಕುಟುಂಬದಲ್ಲಿ ವಿವಾಹ ಜರುಗಲಿದೆ. ಪಾಲುದಾರಿಕೆಯಲ್ಲಿ ಆದಾಯ ಬರುವುದು. ಶುಭಸಂಖ್ಯೆ:1
ಕಟಕ: ಮಗನ ವಿವಾಹಕ್ಕೆ ಸಂಬಂಧಿಸಿದ ಯತ್ನ ಫಲಿಸಲಿದೆ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಬೆಳೆಗಳ ಕೃಷಿಕರಿಗೆ ಲಾಭ. ಶುಭಸಂಖ್ಯೆ:8
ಸಿಂಹ: ಉದ್ಯೋಗ ಬದಲಿಸಲು ಸಮಯವಲ್ಲ. ರೇಷ್ಮೆ ವಸ್ತ್ರ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಮಕ್ಕಳ ಪ್ರಗತಿ ಕಂಡು ಸಮಾಧಾನ. ಶುಭಸಂಖ್ಯೆ:3
ಕನ್ಯಾ: ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ಜಾಗ್ರತೆ ಇರಲಿ. ರಂಗಕರ್ಮಿಗಳಿಗೆ ಲಾಭ. ಗೃಹ ನಿರ್ಮಾಣಕ್ಕೆ ಅನುಕೂಲವಾಗುವುದು. ಶುಭಸಂಖ್ಯೆ: 2
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸ. ಸಂಶೋಧನಾ ವಿನಾನಿಗಳಿಗೆ ಯಶ. ವೈದ್ಯರ ಸಲಹೆ ನಿರ್ಲಕ್ಷಿಸಿ ಸಮಸ್ಯೆ ಹೆಚ್ಚಲಿದೆ. ಶುಭಸಂಖ್ಯೆ:1
ವೃಶ್ಚಿಕ: ಔಷಧ ಮಾರಾಟದವರಿಗೆ ಬೇಡಿಕೆ. ಅಧಿಕಾರಿ ಗಳೊಂದಿಗೆ ವಾದ ವಿವಾದ ಆಗಬಹುದು. ಲೇವಾ ದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 5
ಧನಸ್ಸು: ರಿಯಲ್​ ಎಸ್ಟೇಟ್​ ವ್ಯವಹಾರಸ್ಥರಿಗೆ ಶ್ರಮಕ್ಕೆ ತಕ್ಕ ಯಶಸ್ಸು. ನಿಮ್ಮ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 9
ಮಕರ: ಸರ್ಕಾರಿ ವೈದ್ಯರಿಗೆ ಕಾರ್ಯದೊತ್ತಡ. ಕಿರುಚಿತ್ರ ನಿರ್ದೇಶಕರಿಗೆ ಧನ ಲಾಭವಾಗಿ ಸಂತಸ. ಗುತ್ತಿಗೆ ಕೆಲಸಗಾರರಿಗೆ ಆದಾಯವಿದೆ. ಶುಭಸಂಖ್ಯೆ: 2
ಕುಂಭ: ಯಂತ್ರೋಪಕರಣ ಜತೆ ಕೆಲಸ ಮಾಡುವಾಗ ಎಚ್ಚರ. ಲೆಕ್ಕಪರಿಶೋಧಕರ ಆದಾಯ ಹೆಚ್ಚಲಿದೆ. ಸಂಗೀತ ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ: 6
ಮೀನಾ: ರಾಜಕೀಯದವರಿಗೆ ಅನಿರೀತ ಉನ್ನತ ಸ್ಥಾನ. ವಾಣಿಜ್ಯ, ಮುತ್ತು ರತ್ನ ವ್ಯವಹಾರದಲ್ಲಿ ಯಶ. ಉದ್ಯೋಗದ ಹುಡುಕಾಟ ಸಫಲ. ಶುಭಸಂಖ್ಯೆ: 4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net