ಮೇಷ: ಹೊಸ ಕಾರ್ಯದಲ್ಲಿ ಪ್ರಗತಿ ಕೆಲಸದ ಒತ್ತಡ ಇದ್ದರೂ ಆತ್ಮವಿಶ್ವಾಸದಿಂದ ಮುನ್ನಡೆಯುವಿರಿ. ಮನೆಯವರ ಜೊತೆ ಔತಣ ಕೂಟ. ಶುಭಸಂಖ್ಯೆ:9.ವೃಷಭ: ಹಣಕಾಸು ವ್ಯವಹಾರದಲ್ಲಿ ಎಚ್ಚರ. ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದ ಮನಸ್ತಾಪ ಬಗೆಹರಿಯುತ್ತವೆ. ಶುಭಸಂಖ್ಯೆ:2.ಮಿಥುನ: ಹೊಸ ಪರಿಚಯ ಪ್ರಯೋಜನಕಾರಿ ಆಗಲಿದೆ. ವೃತ್ತೀಜಿವನದಲ್ಲಿ ಸಂಗಾತಿಯಿಂದ ಬೆಂಬಲ. ನೆಮ್ಮದಿ ನೀಡುವ ಸುದ್ದಿ ಸಿಗಲಿದೆ. ಶುಭಸಂಖ್ಯೆ:5.ಕಟಕ: ದಿನವನ್ನು ಜಾಣ್ಮೆಯಿಂದ ಬಳಸಿದರೆ ಲಾಭ. ಕೆಲಸದ ಜಾಗದಲ್ಲಿ ಗೌರವ ಸಿಗಲಿದೆ. ಕೂಡಿಟ್ಟ ಹಣವನ್ನು ಜಾಗ್ರತೆಯಿಂದ ಬಳಸಿ.ಶುಭಸಂಖ್ಯೆ: 6.ಸಿಂಹ: ಕಚೇರಿಯಲ್ಲಿ ಆತ್ಮವಿಶ್ವಾಸದಿಂದ ವರ್ತಿಸಿ. ನಿಮ್ಮ ಅಭಿಪ್ರಾಯಕ್ಕೆ ಕುಟುಂಬದ ಬೆಂಬಲ ಸಿಗುತ್ತದೆ. ಹೂಡಿಕೆ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ:4.ಕನ್ಯಾ: ಹಳೆಯ ಯೋಜನೆ ಕಾರ್ಯಗತ. ಸ್ವಂತ ಉದ್ಯಮದಲ್ಲಿ ಹೊಣೆಗಾರಿಕೆ ಹೆಚ್ಚಬಹುದು. ಆರೋಗ್ಯದಲ್ಲಿ ಸಣ್ಣ ತೊಂದರೆಗಳನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 4.ತುಲಾ: ಹಣಕಾಸಿನಲ್ಲಿ ಮೋಸದ ಸಾಧ್ಯತೆ ಇದೆ. ದೀರ್ಘಕಾಲದ ಯೋಜನೆಗಳಿಗೆ ಶುಭಾರಂಭ. ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ. ಶುಭಸಂಖ್ಯೆ:2.ವೃಶ್ಚಿಕ: ಮನಸ್ಸಿನ ನಿಯಂತ್ರಣ ಅಗತ್ಯ. ಕಚೇರಿಯಲ್ಲಿ ಹೊಸ ಕೆಲಸದ ಅವಕಾಶ. ಕುಟುಂಬದಲ್ಲಿ ಸಣ್ಣ ವ್ಯಾಪಾರ ಪ್ರಾರಂಭಕ್ಕೆ ಸೂಚನೆ. ಶುಭಸಂಖ್ಯೆ: 4.ಧನಸ್ಸು: ಷೇರು ವಿಚಾರದಲ್ಲಿ ಸಲಹೆ ಪಡೆದು ಮುಂದುವರಿದರೆ ಲಾಭ. ಸ್ನೇಹಿತರೊಂದಿಗೆ ಸಂತಸದ ಸಂದರ್ಭ. ದೂರಪ್ರಯಾಣ ಯಶಸ್ವಿ. ಶುಭಸಂಖ್ಯೆ: 9.ಮಕರ: ಕಠಿಣ ಪರಿಶ್ರಮದಿಂದ ಉತ್ತಮ ಫಲ ಸಿಗುತ್ತದೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭ ಸಿಗಲಿದೆ. ಮನೆಯಲ್ಲಿ ಶಾಂತಿ ವಾತಾವರಣ. ಶುಭಸಂಖ್ಯೆ:7.ಕುಂಭ: ಕಲಿಕೆ, ಕೌಶಲ ಅಭಿವೃದ್ದಿಗೆ ಸೂಕ್ತ ಸಮಯ. ವೃತ್ತಿಯಲ್ಲಿ ಸಹೋದ್ಯೋಗಿಗಳ ಬೆಂಬಲ. ಸ್ನೇಹಿತರ ಸಹಕಾರ, ಸಮಸ್ಯೆ ಪರಿಹಾರ. ಶುಭಸಂಖ್ಯೆ: 6.ಮೀನಾ: ಹಣಕಾಸಿನಲ್ಲಿ ವ್ಯರ್ಥ ಖರ್ಚನ್ನು ನಿಯಂತ್ರಿಸಿ. ಕುಟುಂಬದಲ್ಲಿ ಶಿಕ್ಷಣ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ. ಶುಭಸಂಖ್ಯೆ: 3