ಈ ರಾಶಿಯವರಿಗೆ ಸರ್ಕಾರದ ಅನುದಾನ ಶೀಘ್ರದಲ್ಲಿ ಕೈ ಸೇರಲಿದೆ

Nitya-Bhavishya-vvani-1-2-1
Published on

ಮೇಷ: ದಿಢೀರ್ ಶ್ರೀಮಂತರಾಗುವ ಯೋಜನೆಗಳನ್ನು ಬಿಡಿ. ಇಂಥವುಗಳಿಂದ ಸಾಕಷ್ಟು ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದೀರಿ. ಶುಭಸಂಖ್ಯೆ: 7

ವೃಷಭ: ಖಾಸಗಿ ಉದ್ಯೋಗಿಯಾಗಿದ್ದಲ್ಲಿ ವೇತನ ಏರಿಕೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾದರೆ ಯಶಸ್ಸಿದೆ. ಶುಭಸಂಖ್ಯೆ: 5

ಮಿಥುನ: ಸಂಸಾರದಲ್ಲಿ ಮೂಡಿದ್ದ ಅನುಮಾನಗಳು ದೂರವಾಗಲಿವೆ. ಬಂಧುಗಳೊಂದಿಗೆ ನಿಷ್ಠುರದ ಮಾತುಗಳು ಬೇಡ. ಶುಭಸಂಖ್ಯೆ: 1

ಕಟಕ: ಸರ್ಕಾರದ ಅನುದಾನ ಶೀಘ್ರದಲ್ಲಿಯೇ ನಿಮ್ಮ ಕೈಸೇರಲಿದೆ. ಅದು ದುರುಪಯೋಗ ಆಗದಂತೆ ನೋಡಿಕೊಳ್ಳಿ. ಶುಭಸಂಖ್ಯೆ: 9

ಸಿಂಹ: ಹೊಸ ಯೋಜನೆಗಳ ಕುರಿತಾಗಿ ಚಿಂತಿಸುವ ನೀವು ಅದಕ್ಕೆ ತಗಲುವ ಹಣದ ವಿಷಯದಲ್ಲಿ ಮಾತ್ರ ಹಿಂದೆ ಬೀಳುತ್ತೀರಿ. ಶುಭಸಂಖ್ಯೆ: 3

ಕನ್ಯಾ: ಮನೆಗೆ ಬಂದವರ ಎದುರು ಮಕ್ಕಳ ಬಗ್ಗೆ ದೂರುಗಳನ್ನು ಹೇಳಬೇಡಿ. ಈ ಬಗ್ಗೆ ಜಾಗರೂಕತೆಯಿಂದ ವರ್ತಿಸಿ. ಶುಭಸಂಖ್ಯೆ: 8

ತುಲಾ: ಕೆಲವರಿಗೆ ಕಚೇರಿಯಲ್ಲಿ ನೋಟಿಸ್ ಸಿಗುವ ಸಾಧ್ಯತೆ ಇದೆ. ಮಾರುತಿ ಸ್ತೋತ್ರ ಪಠಣದಿಂದ ಒಳಿತಾಗಲಿದೆ. ಶುಭಸಂಖ್ಯೆ: 4

ವೃಶ್ಚಿಕ: ಉದ್ಯೋಗದ ಸಂದರ್ಶನಕ್ಕಾಗಿ ದೂರ ತೆರಳುವ ಸಾಧ್ಯತೆ ಇದೆ. ಆಪ್ತರಿಂದ ಹೆಚ್ಚಿನ ಮಾರ್ಗದರ್ಶನ ಸಿಗಲಿದೆ. ಶುಭಸಂಖ್ಯೆ: 6

ಧನಸ್ಸು: ಸಣ್ಣ ವಿಷಯವೇ ದೊಡ್ಡ ರಾದ್ಧಾಂತವಾಗಿ ಪರಿಣಮಿಸಲಿದೆ. ಮಾನಸಿಕ ಕಿರಿಕಿರಿ ತಡೆಗೆ ಶಿವಮಂತ್ರವನ್ನು ಪಠಿಸಿ. ಶುಭಸಂಖ್ಯೆ: 2

ಮಕರ: ಕೂಡಿಟ್ಟ ಹಣ ಸೂಕ್ಷ್ಮ ಕೆಲಸಕ್ಕೆ ಖರ್ಚಾಗಲಿದೆ. ಅತಿಯಾದ ಮಾತುಗಳು ಬೇಡವೇ ಬೇಡ. ವ್ಯವಹಾರದಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 7

ಕುಂಭ: ಹತ್ತಿರದ ಬಂಧುಬಾಂಧವರ ಕುರಿತಾಗಿ ಅಪಹಾಸ್ಯ ಬೇಡ. ಅವು ಮುಂದೆ ನಿಮಗೇ ಕೆಟ್ಟ ಹೆಸರನ್ನು ತರುತ್ತವೆ. ಶುಭಸಂಖ್ಯೆ: 5

ಮೀನ: ಮನೆಯ ಪ್ರತಿ ಸದಸ್ಯರಿಗೂ ತನ್ನದೇ ಆದ ವೈಶಿಷ್ಟ್ಯ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಒಳಿತಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net