ಈ ರಾಶಿಯವರಿಗಿಂದು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಆಸ್ತಿ ಪ್ರಾಪ್ತಿಯಾಗಿ ಸಮಾಧಾನ, ಕೃಷಿಕರಿಗೆ ಉತ್ತಮ ದಿನ

Nithya Bhavishya
Published on

ಮೇಷ: ತಂದೆಯ ಆರೋಗ್ಯದ ವಿಚಾರದಲ್ಲಿ ಎಚ್ಚರ ವಹಿಸಿ. ಸಾಲ ಬಾಧೆ ಕಾಡಬಹುದು. ಪ್ರೇಮಿಗಳಲ್ಲಿ ಜಗಳವಾಗುವ ಸಂಭವ. ಶುಭಸಂಖ್ಯೆ: 9

ವೃಷಭ: ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ. ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಮಾತಿನಿಂದ ತೊಂದರೆಯಾಗಬಹುದು, ಎಚ್ಚರ. ಶುಭಸಂಖ್ಯೆ: 3

ಮಿಥುನ: ಕುಟುಂಬದ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಕೆಲಸ ಕಾರ್ಯಗಳಲ್ಲಿ ತೊಂದರೆ ಕಾಣಿಸೀತು. ಉದ್ಯಮದಲ್ಲಿ ಪ್ರಗತಿ. ಶುಭಸಂಖ್ಯೆ: 6

ಕಟಕ: ಗೃಹಿಣಿಯರಿಗೆ ಶುಭ. ಪತ್ನಿಗೆ ಉದ್ಯೋಗದಲ್ಲಿ ಒಳ್ಳೆಯ ದಿನ. ಲೋಹ ಸಂಬಂಧ ಉದ್ಯೋಗದಲ್ಲಿ ನಿರೀಕ್ಷೆಗಿಂತ ಹೆಚ್ಚು ಆದಾಯ. ಶುಭಸಂಖ್ಯೆ: 4

ಸಿಂಹ: ತಾಯಿಯ ಆರೋಗ್ಯದಲ್ಲಿ ಹಾನಿ. ವೈದ್ಯರ ನೆರವು ಅಗತ್ಯ. ವ್ಯಾಪಾರ ವ್ಯವಹಾರದಲ್ಲಿ ಮೋಸ. ಅಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 6

ಕನ್ಯಾ: ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಆಸ್ತಿ ಪ್ರಾಪ್ತಿಯಾಗಿ ಸಮಾಧಾನ. ಕೃಷಿಕರಿಗೆ ಉತ್ತಮ ದಿನ. ಕುಟುಂಬದಲ್ಲಿ ಕಲಹ ಸಾಧ್ಯತೆ. ಶುಭಸಂಖ್ಯೆ: 2

ತುಲಾ: ಯಂತ್ರ ತಯಾರಿಕೆಗೆ ಪೋತ್ಸಾಹ. ಹಿರಿಯ ಅಧಿಕಾರಿಗಳಿಂದ ತೊಂದರೆ. ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

ವೃಶ್ಚಿಕ: ಗೃಹ ಕೈಗಾರಿಕೆಗೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭ. ನೀರಿಗೆ ಸಂಬಂಧಿಸಿದ ವ್ಯವಹಾರದಲ್ಲಿಯೂ ಗಳಿಕೆ. ಅಧಿಕಾರಿಗಳಿಗೆ ಒತ್ತಡ. ಶುಭಸಂಖ್ಯೆ: 5

ಧನುಸ್ಸು: ಶೀತ ಸಂಬಂಧ ರೋಗ ಬಾಧಿಸೀತು. ಹೈನುಗಾರಿಕೆಯಲ್ಲಿ ಆದಾಯ ಬರಲಿದೆ. ಅನಿರೀಕ್ಷಿತ ಧನ ಲಾಭವಾಗಿ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 9

ಮಕರ: ರಕ್ತದೊತ್ತಡದ ಸಮಸ್ಯೆಗೆ ಧ್ಯಾನ ಸಹಕಾರಿಯಾಗಬ ಹುದು. ಸರ್ಕಾರಿ ನೌಕರರಿಗೆ ಬೆಂಬಲ ಸಿಗುವುದು. ತಾಯಿಯಿಂದ ಸಹಕಾರ. ಶುಭಸಂಖ್ಯೆ: 1

ಕುಂಭ: ಹೋಟೆಲ್ ವ್ಯವಹಾರದಲ್ಲಿ ಉತ್ತಮ ಆದಾಯ. ಕೃಷಿ ಉತ್ಪನ್ನ ಮಾರಾಟದಲ್ಲಿ ಲಾಭ ಬರುವುದು. ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭಸಂಖ್ಯೆ:3

ಮೀನ: ಛಾಯಾಗ್ರಾಹಕರಿಗೆ ಒಳ್ಳೆಯ ದಿನ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ. ತಾಳ್ಮೆ ಕಳೆದುಕೊಳ್ಳಬೇಡಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net