ಈ ರಾಶಿಯವರು ದೀರ್ಘಕಾಲದ ವ್ಯಾಜ್ಯವೊಂದರಲ್ಲಿ ಗೆಲುವು ಸಾಧಿಸುತ್ತಾರೆ

Nitya-Bhavishya-vvani-1-2-1
Published on

ಮೇಷ:  ಮಾತಿನ ಶಕ್ತಿ ಮಾತ್ರವೇ ಅಲ್ಲ. ಅದರ ಜತೆಗೆ ಸ್ವಲ್ಪ ತರ್ಕವೂ ಇದ್ದರಷ್ಟೇ ಉತ್ತಮ ಫಲ ನಿಮ್ಮದಾಗಲಿದೆ. ಶುಭಸಂಖ್ಯೆ: 8

ವೃಷಭ: ಹತ್ತಿರದ ನೆಂಟರು ನಿಮ್ಮ ತಲೆ ತಿನ್ನುವ ವಿಚಾರವನ್ನು ಅಲಕ್ಷಿಸದಿರಿ. ಅವರನ್ನು ಜಾಣ್ಮೆಯಿಂದ ದೂರವಿಡಿ. ಶುಭಸಂಖ್ಯೆ: 1

ಮಿಥುನ:  ವಿದ್ಯಾಭ್ಯಾಸದ ವಿಚಾರದಲ್ಲಿ ಹೆಚ್ಚಿನಗಮನವನ್ನು ಕೇಂದ್ರೀಕರಿಸಿ. ಇದರಿಂದ ಉತ್ತಮ ಫಲಿತಾಂಶ ಲಭ್ಯ. ಶುಭಸಂಖ್ಯೆ: 3

ಕಟಕ:  ನೆರೆಹೊರೆಯವರ ಬಳಿ ವಾದಿಸದೆ ಮೌನವಾಗಿದ್ದುಬಿಡಿ. ಇದರಿಂದ ಜಗಳದ ವಾತಾವರಣ ಮೂಡದು. ಶುಭಸಂಖ್ಯೆ: 9

ಸಿಂಹ:  ಮೂಗಿನ ತುದಿಗೇ ಇರುವ ನಿಮ್ಮ ಕೋಪವನ್ನು ಬಿಟ್ಟುಬಿಡಿ. ಅನವಶ್ಯಕ ರಗಳೆಗಳಿಗೆ ದಾರಿ ಬೇಡ. ಶುಭಸಂಖ್ಯೆ: 7

ಕನ್ಯಾ:  ದೀರ್ಘಕಾಲದ ವ್ಯಾಜ್ಯವೊಂದರಲ್ಲಿ ಗೆಲುವು ಸಾಧಿಸುವಿರಿ. ನಿಮ್ಮ ಕುರಿತ ಆರೋಪವೂ ನಿವಾರಣೆಯಾಗಲಿದೆ. ಶುಭಸಂಖ್ಯೆ: 2

ತುಲಾ:  ಹೊಸ ರೀತಿಯ ಜನರನ್ನು ನೀವು ಭೇಟಿ ಮಾಡುವಿರಿ. ಎಚ್ಚರಿಕೆಯಿಂದಲೇ ಅವರನ್ನು ಸ್ವಾಗತಿಸಿ. ಜಾಗ್ರತೆ ಅಗತ್ಯ. ಶುಭಸಂಖ್ಯೆ: 4

ವೃಶ್ಚಿಕ:  ಜೂಜು, ಬೆಟ್ಟಿಂಗ್​ನಂತಹ ಅಭ್ಯಾಸಗಳಿಗೆ ಮತ್ತೆ ಅವಕಾಶ ನೀಡದಿರಿ. ಇದರಿಂದಾಗಿ ನಿಮಗೇ ತೊಂದರೆ ಇದೆ. ಶುಭಸಂಖ್ಯೆ: 6

ಧನಸ್ಸು:  ಹೊಸ ಕೆಲಸವನ್ನು ಹುಡುಕಲು ಆರಂಭಿಸಿ. ಆದರೆ ಇರುವ ಕೆಲಸ ಬಿಡಲು ಯಾವುದೇ ಆತುರವನ್ನು ತೋರದಿರಿ. ಶುಭಸಂಖ್ಯೆ: 8

ಮಕರ:  ನಿಮ್ಮ ಸರಳ ಜೀವನದ ರೀತಿನೀತಿಗಳು ಇತರರನ್ನು ಬಹುವಾಗಿ ಸೆಳೆಯಲಿವೆ. ನಿಮಗೂ ಸಂತೃಪ್ತಿ ಲಭ್ಯ. ಶುಭಸಂಖ್ಯೆ: 1

ಕುಂಭ:  ಆದರದಿಂದ ಕಾಣುವ ಕೆಲವು ಮಿತ್ರರ ಮೂಲಕ ನಿಮಗೆ ಹೊಸ ಅವಕಾಶಗಳು ಸಿಗಲಿವೆ. ಚಿಂತೆ ಬೇಡ. ಶುಭಸಂಖ್ಯೆ: 5

ಮೀನ:  ವಿಭಿನ್ನ ಕಾರ್ಯವಿಧಾನಗಳಿಂದ ಬೇಗನೆ ಯಶಸ್ಸನ್ನು ಪಡೆಯಬಹುದು. ಅನುಭವ ನಿಮಗೆ ಗುರುವಾಗಲಿದೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net