

ಮೇಷ: ನಿಷ್ಠುರಿಗಳಾದ ನಿಮ್ಮೆದುರು ಕೆಲವರು ತಗ್ಗಿಬಗ್ಗಿ ನಡೆದರೂ ಅದು ಮನಃಪೂರ್ವಕ ನಡೆಯಲ್ಲ ಎಂದು ತಿಳಿದಿರಲಿ. ಶುಭಸಂಖ್ಯೆ: 1
ವೃಷಭ: ಕೆಲಸಕಾರ್ಯಗಳಲ್ಲಿ ವಿಳಂಬ ಆಗಬಹುದು. ದುಷ್ಟರ ಸಹವಾಸದಿಂದ ತೊಂದರೆ ಇದೆ. ಕೃಷಿಕರಿಗೆ ಲಾಭವಿದೆ. ಶುಭಸಂಖ್ಯೆ: 3
ಮಿಥುನ: ಆಹಾರ ವಿಚಾರದಲ್ಲಿ ಜಾಗ್ರತೆ ವಹಿಸಿ. ಬಾಯಿಚಪಲಕ್ಕೆ ಮನಸೋತರೆ ಆರೋಗ್ಯದಲ್ಲಿ ಏರುಪೇರಾಗಬಹುದು. ಶುಭಸಂಖ್ಯೆ: 5
ಕಟಕ: ದಾಂಪತ್ಯದಲ್ಲಿ ಅನ್ಯೋನ್ಯತೆ ವೃದ್ಧಿಸಲಿದೆ. ವೃಥಾ ಧನವ್ಯಯವಾಗಬಹುದು. ಮಾನಸಿಕ ನೆಮ್ಮದಿಗೆ ಧಕ್ಕೆ ಇದೆ. ಶುಭಸಂಖ್ಯೆ: 7
ಸಿಂಹ: ದೂರಪ್ರವಾಸದ ನಿರ್ಧಾರ ಕೈಗೊಳ್ಳುವಿರಿ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಿರಿ. ಪೂರಕ ಹಣಕಾಸು ಒದಗಲಿದೆ. ಶುಭಸಂಖ್ಯೆ: 9
ಕನ್ಯಾ: ಕುಟುಂಬದಲ್ಲಿ ಅಹಿತಕರ ವಾತಾವರಣ ಇದ್ದರೂ ಬಂಧುಗಳಿಂದ ಸಹಾಯ ಸಿಗಲಿದೆ. ಸ್ತ್ರೀಯರಿಗೆ ಲಾಭವಿದೆ. ಶುಭಸಂಖ್ಯೆ: 2
ತುಲಾ: ಸುಳ್ಳನ್ನೇ ಸತ್ಯವೆಂದು ವಾದಿಸುವವರ ಮಧ್ಯೆ ನಿಮ್ಮ ಮಾತು ಮಹತ್ವ ಕಳೆದುಕೊಳ್ಳುವುದು. ಮಾತಿನ ಬಗ್ಗೆ ಎಚ್ಚರ. ಶುಭಸಂಖ್ಯೆ: 4
ವೃಶ್ಚಿಕ: ಪ್ರಶಂಸೆಯ ಮಾತಿಗೆ ಹಿಗ್ಗದಿರಿ. ಧೂರ್ತರು ಇದೇ ಸಂದರ್ಭದಲ್ಲಿ ಹಾನಿ ಮಾಡಬಹುದು. ಪರಶಿವನ ಸ್ತುತಿ ಮಾಡಿ. ಶುಭಸಂಖ್ಯೆ: 6
ಧನಸ್ಸು: ವ್ಯಾಪಾರದಲ್ಲಿ ಲಾಭವಾಗಿ ಇಷ್ಟಾರ್ಥ ಸಿದ್ಧಿಸಲಿದೆ. ಋಣಬಾಧೆಯಿಂದ ಮುಕ್ತಿ ಲಭ್ಯ. ಆಪ್ತರ ಜತೆ ಮನಸ್ತಾಪ. ಶುಭಸಂಖ್ಯೆ: 8
ಮಕರ: ಸಂತಸಕ್ಕೆ ಕಾರಣವಾಗುವ ದಿನ. ಜನಮನ್ನಣೆ ಕೂಡ ಪಡೆಯುವಿರಿ. ಆದರೆ ತಪ್ಪದೆಯೇ ವಿಷ್ಣುಸಹಸ್ರನಾಮ ಪಠಿಸಿ. ಶುಭಸಂಖ್ಯೆ: 1
ಕುಂಭ: ನಾನಾ ರೀತಿಯಲ್ಲಿ ಧನಾಗಮನ ಆಗಲಿದೆ. ಕೆಲಸಕಾರ್ಯಗಳಲ್ಲಿ ಪ್ರಗತಿ. ಹಿರಿಯ ಮಹಿಳೆಯೊಬ್ಬರಿಂದ ನೆರವು. ಶುಭಸಂಖ್ಯೆ: 2
ಮೀನ: ಕಾರ್ಯಸಾಧನೆಗಾಗಿ ತಿರುಗಾಟ ನಡೆಸುವಿರಿ. ಖರ್ಚು ಅಧಿಕವಾಗಬಹುದು. ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ. ಶುಭಸಂಖ್ಯೆ: 4