More

  ಗಾಂಧಿ ಹೆಸರನ್ನು ಬಿಟ್ಟು ಬಿಡಿ ಎಂದು ಹಿಮಂತ್ ಬಿಸ್ವಾ ಶರ್ಮಾ!

  ಗುವಾಹಟಿ: “ಗಾಂಧಿ ಕುಟುಂಬ ದೇಶವನ್ನು ಒಡೆಯಲು ಕೆಲಸ ಮಾಡುತ್ತಿದೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು “ಗಾಂಧಿ ಹೆಸರನ್ನು ಬಿಟ್ಟು ಬಿಡಿ” ಎಂದು ಒತ್ತಾಯಿಸಿದ್ದಾರೆ.

  ಗಾಂಧಿ ಕುಟುಂಬವು “ನಕಲಿ ಸರ್ದಾರ್” ಆಗಿದ್ದು ಅವರು “ಅನೇಕ ಹಗರಣಗಳನ್ನು” ಮಾಡಿದ್ದಾರೆ ಎಂದು ಅಸ್ಸಾಂ ಸಿಎಂ ಆರೋಪಿಸಿದರು. “ಅವರ ಮೊದಲ ಹಗರಣ, ಗಾಂಧಿ ಎಂಬ ಹೆಸರಿನೊಂದಿಗೆ ಪ್ರಾರಂಭವಾಯಿತು. ಅವರು ಕೇವಲ ಪರಿವಾರವಾದದ ಜತೆಜತೆಗೆ ದೇಶವನ್ನು ಒಡೆಯುವ ಕೆಲಸ ಮಾಡಿದರು. ಗಾಂಧಿ ಬಿರುದು ಬಿಡುವಂತೆ ನಾನು ರಾಹುಲ್ ಗಾಂಧಿಯನ್ನು ವಿನಂತಿಸುತ್ತೇನೆ” ಎಂದು ಗುವಾಹಟಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹೇಳಿದರು.

  ದೆಹಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಅಂಗೀಕರಿಸಲಾದ ‘ದೆಹಲಿ ಘೋಷಣೆ’ ಗಾಗಿ ಮುಖ್ಯಮಂತ್ರಿ ಶರ್ಮಾ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು.

  “ಮುಂದಿನ ಎರಡು ವರ್ಷಗಳಲ್ಲಿ ಕಾಮಾಕ್ಯ ಕಾರಿಡಾರ್ ವಾಸ್ತವಕ್ಕೆ ಬರಲಿದೆ. ಪ್ರಧಾನಿ ಮೋದಿಯವರ ಕಾರಣದಿಂದಾಗಿ, ಉಕ್ರೇನ್, ರಷ್ಯಾ ಯುದ್ಧದ ನಡುವೆ ದೆಹಲಿ ಘೋಷಣೆ ಸಂಭವಿಸಿದೆ. ಕಾಂಗ್ರೆಸ್ ದೇಶದ ಸ್ವಾತಂತ್ರ್ಯದ 25 ವರ್ಷಗಳು ಅಥವಾ 50 ವರ್ಷಗಳನ್ನು ಆಚರಿಸಲಿಲ್ಲ. ಆದರೆ, ಮೋದಿ ಅವರು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಿದರು ಮತ್ತು ಎಲ್ಲರೂ ನಾವು ಭಾರತೀಯರು ಎಂದು ಭಾವಿಸುತ್ತಾರೆ. ಮಹಾನ್ ಸುಧಾರಕ ಮಹಾಪುರುಷ ಶಂಕರದೇವ ಅವರು 500 ವರ್ಷಗಳ ಹಿಂದೆ ಭಾರತ ಭೂಮಿಯ ಬಗ್ಗೆ ಬರೆದಿದ್ದಾರೆ, ಇದು ನಮ್ಮ ಭಾರತ ಭೂಮಿ” ಎಂದು ಶರ್ಮಾ ಹೇಳಿದರು. (ಏಜೆನ್ಸೀಸ್)

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts