More

    ಬೆಂಗಳೂರಿನಲ್ಲಿ ಖಾಸಗಿ ವಾಣಿಜ್ಯ ವಾಹನ ಸಂಚಾರ ಬಂದ್! ನೀವು ತಿಳಿಯಬೇಕಾದ A-Z ಮಾಹಿತಿ ಇಲ್ಲಿದೆ…

    ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಖಾಸಗಿ ವಾಣಿಜ್ಯ ವಾಹನಗಳ ಸಂಘಟನೆಗಳು ಮುಷ್ಕರ ನಡೆಸುತ್ತಿದ್ದು, ಇದರ ಪರಿಣಾಮವಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಸದ್ಯ ಮೆಟ್ರೋ ಹಾಗೂ ಬಿಎಂಟಿಸಿ ಬಸ್‍ಗಳ ಮೇಲೆ ಭಾರಿ ಹೆಚ್ಚಿನ ಒತ್ತಡ ಬಿದ್ದಿದ್ದು, ಮೆಜೆಸ್ಟಿಕ್‍ನಲ್ಲಿ ಬಿಎಂಟಿಸಿ ಬಸ್‍ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಇನ್ನು ಮೆಟ್ರೋದಲ್ಲೂ ಹೆಚ್ಚಿನ ಜನ ಸಂಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಎಂಆರ್‍ಸಿಎಲ್, ಪ್ರತಿ 5 ನಿಮಿಷಕ್ಕೆ ಒಂದರಂತೆ ರೈಲಿನ ವ್ಯವಸ್ಥೆ ಮಾಡಲಾಗಿದೆ.

    ಮುಷ್ಕರದ ಪರಿಣಾಮವಾಗಿ ಏರ್ ಪೋರ್ಟ್ ಮೂಲಕ ನಗರಕ್ಕೆ ಬರುತ್ತಿರುವ ಪ್ರಯಾಣಿಕರಿಗೂ ಬಿಸಿ ತಟ್ಟಿದೆ. ನಿನ್ನೆ ,ಮಧ್ಯರಾತ್ರಿಯಿಂದಲೇ ಏರ್ಪೋರ್ಟ್‍ನಲ್ಲಿ ಟ್ಯಾಕ್ಸಿಗಳ ಸಂಚಾರ ವಿರಳವಾಗಿತ್ತು. ಏರ್ಪೋರ್ಟ್‍ನ ಕೆಎಸ್ಟಿಡಿಸಿ ಟ್ಯಾಕ್ಸಿಗಳು ರಾತ್ರಿಯಿಂದಲೇ ಮುಷ್ಕರಕ್ಕೆ ಬೆಂಬಲ ನೀಡಿದ್ದರ ಪರಿಣಾಮವಾಗಿ ಕಡಿಮೆ ಸಂಖ್ಯೆಯಲ್ಲಿ  ಸಂಚಾರ ಕಂಡುಬರುತ್ತಿದೆ. ಆದರೂ ಬಂದ್ ನಡುವೆ  ಏರ್ಪೋರ್ಟ್‍ಗೆ ಕೆಲ ಟ್ಯಾಕ್ಸಿ ಚಾಲಕರು ಬಂದು ನಿತ್ಯದಂತೆ ಸಂಚಾರ ನಡೆಸುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.

    ಇನ್ನು ಮೆಜೆಸ್ಟಿಕ್ ಕೆಎಸ್ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಆಟೋಗಳ ಸಂಖ್ಯೆಯಲ್ಲೂ ಇಳಿಮುಖವಾಗಿದ್ದು ಈ ದಿನದ ಮುಷ್ಕರಕ್ಕೆ ಪೂರ್ಣ ಬೆಂಬಲ ನೀಡಲು ಚಾಲಕರು ತೀರ್ಮಾನಿಸಿರುವ ಹಾಗಿದೆ. ಆಟೋಗಳ ಸಂಖ್ಯೆ ಕಡಿಮೆ ಹಿನ್ನೆಲೆ ಬಿಎಂಟಿಸಿ ಬಸ್‍ಗಳತ್ತ ಜನರು ಮುಖ ಮಾಡುತ್ತಿದ್ದಾರೆ.

    ಬೆಳಗ್ಗೆ ಸಾವಿರಾರು ಚಾಲಕರು ಹಾಗೂ ಮಾಲಕರ ರ್‍ಯಾಲಿ!

    ಬೇಡಿಕೆಯ ಈಡೇರಿಸದ ಸಾರಿಗೆ ಇಲಾಖೆ ವಿರುದ್ಧ ಖಾಸಗಿ ‌ಸಾರಿಗೆ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಮನವಿ ಮಾಡಿ ಫಲ ಕಾಣದ ಹಿನ್ನೆಲೆಯಲ್ಲಿ ಚಾಲಕರ ಒಕ್ಕೂಟ ಬಂದ್ ಮೊರೆಹೋಗಿದೆ ಎನ್ನುತ್ತಿದೆ. ಸದ್ಯ 40ಕ್ಕೂ ಅಧಿಕ ಖಾಸಗಿ ಸಾರಿಗೆ ಸಂಘಟನೆಗಳು ಸೇರಿ ಬೆಂಗಳೂರು ಬಂದ್ ಮಾಡುತ್ತಿದ್ದಾರೆ.

    ಬೆಳಿಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ರ್‍ಯಾಲಿ ನಡೆಯಲಿದ್ದು ಈ ಸಂದರ್ಭದಲ್ಲಿ 8ರಿಂದ 10 ಸಾವಿರ ಚಾಲಕರು, ಮಾಲೀಕರು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಚಾಲಕರ ಸಂಘಟನೆ ಬೇಡಿಕೆ ಏನೇನು?

    1. ಆಟೋಗಳಿಗೆ ಸಂಬಂಧಿಸಿದ ಬೇಡಿಕೆಗಳು

    • ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು
    • ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು‌
    • ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ದಪಡಿಸಬೇಕು
    • ಎಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು

    2. ಟ್ಯಾಕ್ಸಿಗಳಿಗೆ ಸಂಬಂಧಿಸಿದ ಬೇಡಿಕೆಗಳು

    • ಜೀವಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು
    • ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
    • ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಬೇಕು
    • ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಕೊಡಬೇಕು

    3. ಬಸ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು

    • ಖಾಸಗಿ ಬಸ್‌ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು
    • ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು‌
    • ಖಾಸಗಿ ಬಸ್‌ಗಳನ್ನ ಕಿಲೋಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು

    4. ಗೂಡ್ಸ್ ವಾಹನಗಳಿಗೆ ಸಂಬಂಧಿಸಿದ ಬೇಡಿಕೆಗಳು

    • ಪೋರ್ಟರ್ ಸಂಸ್ಥೆಯಿಂದ ಆಗ್ತಿರೋ ಅನ್ಯಾಯ ಸರಿಪಡಿಸಬೇಕು
    • ವಾಹನಗಳ ಚಾಲಕರ ಮೇಲೆ ಪ್ರಕರಣ ದಾಖಲಿಸುವ ಬದಲು ಪೋರ್ಟರ್ ಮೇಲೆ ದಾಖಲಿಸಬೇಕು
    • ಅಕ್ರಮವಾಗಿ ಚಾಲಕರ ಡಿಎಲ್ ರದ್ದು ಮಾಡಲಾಗ್ತಿರೋದಕ್ಕೆ ಪೂರ್ಣವಿರಾಮ ಹಾಕಬೇಕು

    5. ಸ್ಕೂಲ್‌ ವ್ಯಾನ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು

    • ಶಾಲಾ ವ್ಯಾನ್‌ಗಳನ್ನು ಚಲಾಯಿಸಲು ಪರ್ಮಿಟ್ ನೀಡಬೇಕು
    • ಸೀಝ್ ಆದ ವ್ಯಾನ್‌ಗಳ ಮೇಲೆ ವಿಧಿಸುತ್ತಿರೋ ಫೈನ್ ಮೊತ್ತವನ್ನು ಇಳಿಸಬೇಕು
    • ತೆರಿಗೆ ಕಟ್ಟಿದ್ರೂ ವಯೋಲೇಶನ್ ಅಂತ ನಕಲಿ ಕೇಸ್‌ಗಳನ್ನು ಹಾಕುವುದು ನಿಲ್ಲಿಸಬೇಕು

    ಬಂದ್ ಬೆಂಬಲ ನೀಡುತ್ತಿರುವ ಸಂಘಟನೆ ಯಾವುವು?

    1. ಕರ್ನಾಟಕ ಚಾಲಕರ ಒಕ್ಕೂಟ
    2. ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್
    3. ಪೀಸ್ ಆಟೋ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್
    4. ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್
    5. ಕರ್ನಾಟಕ ರಾಜೀವ್ ಗಾಂಧೀ ಚಾಲಕರ ವೇದಿಕೆ
    6. KSTOA
    7. KSBOA
    8. ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ
    9. ನಮ್ಮ ಚಾಲಕರ ಟ್ರೇಡ್ ಯೂನಿಯನ್
    10. ವಿಜಯಸೇನೆ ಆಟೋ ಘಟಕ
    11. ಜಯಕರ್ನಾಟಕ ಆಟೋ ಘಟಕ
    12. ಜೈ ಭಾರತ್ ಆಟೋ ಚಾಲಕರ ಸಂಘ
    13. ಬೆಂಗಳೂರು ಆಟೋ ಸೇನೆ
    14. ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್
    15. ಕರ್ನಾಟಕ ರಾಜ್ಯಾ ಶಾಲಾ ಮಕ್ಕಳ ವಾಹನ ಟ್ರೇಡ್ ಯೂನಿಯನ್
    16. ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್
    17. ಬೆಂಗಳೂರು ಸಾರಥಿ ಸೇನೆ
    18. ಕರ್ನಾಟಕ ಸಿಟಿ ಟ್ಯಾಕ್ಸ್ ಆಪರೇಟರ್ ಕಂಟ್ರೋಲರ್ ಅಸೋಸಿಯೇಷನ್
    19. ಕರುನಾಡು ಸಾರಥಿ ಸೇನೆ ಟ್ರೇಡ್ ಯೂನಿಯನ್
    20. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘ
    21. ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಡ್ರೈವರ್ ಯೂನಿಯನ್
    22. ಕೆ.ಆರ್ ಪುರ ಆಟೋ ಚಾಲಕರ ಸಂಘ
    23. ಕರುನಾಡು ವಿಜಯ ಸೇನೆ ಚಾಲಕರ ಸಂಘ
    24. ಮೈಸೂರು ಬಸ್ ಮಾಲೀಕರ ಸಂಘ
    25. ಪ್ರೀಪೈಡ್ ಟ್ಯಾಕ್ಸಿ ಡ್ರೈವರ್ ವೆಲ್ಫೇರ್ ಅಸೋಸಿಯೇಷನ್
    26. KTDO
    27. ನೊಂದ ಚಾಲಕರ ವೇದಿಕೆ
    28. ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ
    29. ಶಂಕರ್ ನಾಗ್ ಆಟೋ ಸೇನೆ
    30. ರಾಜ್ ಕುಮಾರ್ ಆಟೋ ಸೇನೆ
    31. ಕರ್ನಾಟಕ ಸ್ವಾಭಿಮಾನಿ‌ ಆಟೋ ಡ್ರೈವರ್ಸ್ ಯೂನಿಯನ್
    32. ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್
    33. ಆದರ್ಶ ಆಟೋ ಯೂನಿಯನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts