More

    ಕೆನಡಾದಲ್ಲಿನ ಭಾರತ ವಿರೋಧಿ ಚಟುವಟಿಕೆಗಳಿಗೆ ಲಗಾಮು ಹಾಕಿ: ಕೆನಡಾ ಪ್ರಧಾನಿಗೆ ಮೋದಿ ಕರೆ

    ನವದೆಹಲಿ: ಜಿ 20 ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಕೆನಡಾದಲ್ಲಿ ಉಗ್ರಗಾಮಿ ಶಕ್ತಿಗಳು ನಡೆಸುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊರ ಗಮನಸೆಳೆದು ತೀವ್ರ ಕಳವಳ ವ್ಯಕ್ತಪಡಿಸಿದರು.

    “ಕೆನಡಾದಲ್ಲಿ ಉಗ್ರಗಾಮಿ ಶಕ್ತಿಗಳ ಭಾರತ ವಿರೋಧಿ ಚಟುವಟಿಕೆಗಳು ಮುಂದುವರಿಯುವ ಬಗ್ಗೆ ಪ್ರಧಾನಿ ಮೋದಿ ನಮ್ಮ ಬಲವಾದ ಕಳವಳವನ್ನು ವ್ಯಕ್ತಪಡಿಸಿದರು. ಅವರು ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದ್ದು ಭಾರತದ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ. ರಾಜತಾಂತ್ರಿಕ ಕಛೇರಿಗಳನ್ನು ಹಾನಿಗೊಳಿಸುತ್ತಿರುವ ಜತೆಗೆ ಕೆನಡಾದಲ್ಲಿನ ಭಾರತೀಯ ಸಮುದಾಯ ಮತ್ತು ಅವರ ಧಾಮಿಕ ಸ್ಥಳಗಳಿಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಪ್ರಧಾನಿ ಕಚೇರಿ (ಪಿಎಂಒ) ಹೇಳಿದೆ.

    “ಭಾರತ-ಕೆನಡಾ ಸಂಬಂಧಗಳು ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮಕ್ಕೆ ಗೌರವ ಮತ್ತು ಜನರ ನಡುವಿನ ಬಲವಾದ ಸಂಬಂಧಗಳಲ್ಲಿ ನೆಲೆಗೊಂಡಿವೆ ಎಂದು ಪ್ರಧಾನಿ ಒತ್ತಿ ಹೇಳಿದರು” ಎಂದು ಪಿಎಂಒ ತಿಳಿಸಿದೆ.

    ಆದಾಗ್ಯೂ, ಕೆನಡಾದಲ್ಲಿ “ಭಾರತ ವಿರೋಧಿ ಚಟುವಟಿಕೆಗಳಿಗೆ” ಸಂಬಂಧಿಸಿದಂತೆ, ಸಂಘಟಿತ ಅಪರಾಧ, ಮಾದಕವಸ್ತು ಸಿಂಡಿಕೇಟ್ಗಳು ಮತ್ತು ಮಾನವ ಕಳ್ಳಸಾಗಣೆಯೊಂದಿಗೆ ಈ ಉಗ್ರಗಾಮಿ ಶಕ್ತಿಗಳ ಸಂಬಂಧವು ಕೆನಡಾಕ್ಕೆ ಕಳವಳಕಾರಿ ವಿಷಯವಾಗಿರಬೇಕು. ಇಂತಹ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳು ಸಹಕರಿಸುವುದು ಅತ್ಯಗತ್ಯ” ಎಂದು ಪ್ರಧಾನಿ ಕಛೇರಿ ತನ್ಮ ಹೇಳಿಕೆಯಲ್ಲಿ ತಿಳಿಸಿದೆ.

    ಖಲಿಸ್ತಾನ್ ಚಟುವಟಿಕೆಗಳ ಬಗ್ಗೆ ಜಸ್ಟಿನ್ ಟ್ರುಡೋ ಹೇಳಿಕೆ 

    ದೆಹಲಿಯಲ್ಲಿ ಭಾನುವಾರ ಜಿ 20 ಶೃಂಗಸಭೆ ಮುಕ್ತಾಯವಾಗುತ್ತಿದ್ದಂತೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ, ಭಾರತದ ಜಿ 20 ಅಧ್ಯಕ್ಷರ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು.

    “ಖಲಿಸ್ತಾನ್ ಉಗ್ರವಾದ” ಮತ್ತು “ವಿದೇಶಿ ಹಸ್ತಕ್ಷೇಪ” ಬಗ್ಗೆ ಕೇಳಿದಾಗ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಪತ್ರಿಕಾಗೋಷ್ಠಿಯಲ್ಲಿ ಕೆನಡಾ ಯಾವಾಗಲೂ ಶಾಂತಿಯುತ ಪ್ರತಿಭಟನೆ, ಅಭಿವ್ಯಕ್ತಿ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ. ಆದರೆ ಅದು ಹಿಂಸಾಚಾರವನ್ನು ಹಾಗೂ ದ್ವೇಷವನ್ನು ಪ್ರತಿರೋಧಿಸುತ್ತದೆ ಎಂದು ಹೇಳಿದರು.

    “ಸಮುದಾಯದ ವಿಷಯದಲ್ಲಿ, ಕೆಲವರು ಮಾಡುವ ಕೆಲಸಗಳು ಇಡೀ ಸಮುದಾಯವನ್ನು ಅಥವಾ ಕೆನಡಾವನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಅಷ್ಟೇ ಅಲ್ಲದೇ ನಾವು ಕಾನೂನಿನ ನಿಯಮವನ್ನು ಗೌರವಿಸುವ ಮಹತ್ವವನ್ನು ಎತ್ತಿ ತೋರಿಸಿದ್ದು ನಾವು ವಿದೇಶಿ ಹಸ್ತಕ್ಷೇಪದ ಬಗ್ಗೆ ಮಾತನಾಡಿದ್ದೇವೆ” ಎಂದು ಟ್ರುಡೊ ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts