

ಪುತ್ತೂರು ಗ್ರಾಮಾಂತರ: ಕೊಳ್ತಿಗೆ ಗ್ರಾಮದ ಮೊಗಪ್ಪೆ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ನವೀಕರಣ ಪ್ರತಿಷ್ಠಾಪನಾ ಬ್ರಹ್ಮಕಲಶವು ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳುಕ್ಕುರಾಯ ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮಾರಿಯಮ್ಮ ದೇವಿಯ ಪ್ರತಿಷ್ಠಾಪನೆ, ಗಣಪತಿ ದೇವರ ಪ್ರತಿಷ್ಠಾಪನೆ ಹಾಗೂ ದಿ.ಪಾಂಬಾರು ಸುಬ್ಬಣ್ಣ ರೈ ಸ್ಮರಣಾರ್ಥ ಪ್ರದೀಪ್ ಕುಮಾರ್ ರೈ ಪಾಂಬಾರು ಅವರು ನೂತನವಾಗಿ ನಿರ್ಮಿಸಿರುವ ಅಶ್ವತ ಕಟ್ಟೆ ಮತ್ತು ನಾಗನಕಟ್ಟೆಯ ಪ್ರತಿಷ್ಠಾಪನೆ ಕಾರ್ಯಕ್ರಮ ಪ್ರದೀಪ್ ಕುಮಾರ್ ರೈ ಪಾಂಬಾರು, ತಾಯಿ ಹೇಮಾವತಿ ಎಸ್. ರೈ, ಪತ್ನಿ ದೀಕ್ಷಿತಾ ಪಿ.ರೈ, ಪುತ್ರ ಪ್ರಧಾನ್ ರೈ, ಪುತ್ರಿ ಪ್ರಾಧ್ಯ ರೈ ಉಪಸ್ಥಿತಿಯಲ್ಲಿ ನಡೆಯಿತು.
ವಾಸ್ತು ತಜ್ಞ ಪಿ.ಜಿ.ಜಗನ್ನೀವಾಸ ರಾವ್, ದೇವಸ್ಥಾನ ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಮೊಗಪ್ಪೆ, ಗೌರವಾಧ್ಯಕ್ಷ ಕನಕರತ್ನ, ಕಾರ್ಯದರ್ಶಿ ಷಣ್ಮುಖ ಸುಂದರ, ದೇವಸ್ಥಾನ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅಮಳ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ನೂಜಿ, ವಸಂತ ಕುಮಾರ್ ರೈ ದುಗ್ಗಳ, ಯೋಗೇಶ್ವರನ್, ಜೀವರಾಜ್ ಮೊಗಪ್ಪೆ, ತಿರುಮಲೇಶ್ವರ ದೊಡ್ಡಮನೆ, ಪದ್ಮನಾಥನ್, ಸತೀಶ್ ನೂಜಿ, ವರದರಾಜನ್ ಮಂಗಳೂರು, ಸ್ನೇಹಪ್ರಭಾ ನೂಜಿ, ಕೀರ್ತನ್, ಕೊಳ್ತಿಗೆ ಗ್ರಾ.ಪಂ. ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಮುರಳಿಧರ ಎಸ್.ಪಿ., ಭಾಸ್ಕರ್ ರೈ ಪುನರಡ್ಕ, ಬಾಲಕೃಷ್ಣ ಗೌಡ ಕೆವ್ಮಾರ, ಪಳನಿಮುತ್ತು, ಚಂದ್ರಕುಮಾರ್ ಪಡ್ಪು, ಮಹೇಶ್ವರನ್, ಗಣೇಶ್, ಚಂದ್ರಕುಮಾರ್ ಮೊಗಪ್ಪೆ ಮತ್ತಿತರರಿದ್ದರು.
ಧಾರ್ಮಿಕ ಸಭೆ
ಧಾರ್ಮಿಕ ಸಭಾ ಕಾರ್ಯಕ್ರಮ ಕೊಳ್ತಿಗೆ ಗ್ರಾಪಂ ಮಾಜಿ ಅಧ್ಯಕ್ಷ ಶಾಮಸುಂದರ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ರಾಮಚಂದ್ರ ಭಟ್ ಮೊಗಪ್ಪೆ ಮತ್ತಿತರರಿದ್ದರು. ವಿನೋದ್ ರೈ ಕೆಳಗಿನಮನೆ ನಿರೂಪಿಸಿದರು.