

ಮೂಡುಬಿದಿರೆ: ಸೇವಾ ಬಳಗ ಸಕ್ರೀಯವಾಗಿದೆ ಎಂದಾದರೆ ಆ ಸಂಸ್ಥೆ ಊರಿಗೆ ಬೆಳಕಿದ್ದಂತೆ. ನವಚೇತನಾ ಸಂಸ್ಥೆ ಐದು ವರ್ಷಗಳಲ್ಲಿ 45 ಲಕ್ಷ ರೂ.ನೆರವು ನೀಡಿರುವುದು ಸಾಮಾನ್ಯ ಮಾತಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ತೋಡಾರು ನವಚೇತನ ಸೇವಾಬಳಗ ಐದನೇ ವರ್ಷದ ‘ನವಚೇತನ ಪಂಚಮಿಲನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಶಾಂತಿ ಪ್ರಸಾದ್ ಹೆಗ್ಡೆ, ಅಶ್ವತ್ಥ್ ಪಣಪಿಲ, ಸುನೀಲ್ ಪಣಪಿಲ, ದಿವಾಕರ ಶೆಟ್ಟಿ ತೋಡಾರು, ಬಳಗದ ಸ್ಥಾಪಕ ಅಧ್ಯಕ್ಷ ಸುಕೇಶ್ ಜಿ.ಅಂಚನ್, ಜಯಂತ್ ಕುಕ್ಕೇಡಿ, ಅಧ್ಯಕ್ಷ ಕೀರ್ತನ್ ಪೂಜಾರಿ ಬೋಳ, ಕಾರ್ಯದರ್ಶಿ ವಿಜೇತ್ ವಿ.ಪೂಜಾರಿ, ಕೋಶಾಧಿಕಾರಿ ದಿನಕರ್ ಮಾರ್ನಾಡ್ ಮತ್ತಿತರರಿದ್ದರು.
180 ಮಂದಿ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣ ವಿತರಿಸಲಾಯಿತು. ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೀಲಿ ಕೈ ಹಸ್ತಾಂತರಿಸಲಾಯಿತು. 17 ಮಂದಿ ಅನಾರೋಗ್ಯ ಪೀಡಿತರ ಕುಟುಂಬಕ್ಕೆ ತಲಾ 10,000ದಂತೆ ಧನ ಸಹಾಯ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ವಿಜಯ್ ಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ಶಿವಧೂತ ಗುಳಿಗೆ ನಾಟಕ ಪ್ರದರ್ಶನಗೊಂಡಿತು.