ಸಿಎಸ್​ಕೆ ತಂಡಕ್ಕೆ ಬಾಸ್​ ಆಗಲಿದ್ದಾರೆ ಎಂಎಸ್​ ಧೋನಿ..!

dhoni csk
Published on

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿಗೂ ಐಪಿಎಲ್​ ಫ್ರಾಂಚೈಸಿ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ತಂಡಕ್ಕೂ ಅವಿನಾಭಾವ ಸಂಬಂಧ. ಐಪಿಎಲ್​ ಆರಂಭಗೊಂಡ ದಿನದಿಂದಲೂ ಸಿಎಸ್​ಕೆ ತಂಡ ಮುನ್ನಡೆಸಿರುವ ಏಕೈಕ ನಾಯಕ ಎನಿಸಿಕೊಂಡಿರುವ ಧೋನಿ, ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಬಳಿಕವೂ ತಂಡದೊಂದಿಗೆ ಮುಂದುವರಿಯುವುದು ಖಚಿತವಾಗಿದೆ. ಮುಂದಿನ 10 ವರ್ಷಗಳ ಕಾಲ ತಂಡದೊಂದಿಗೆ ಇರಲಿರುವ ಧೋನಿ, ಅದು ಟೀಮ್​ ಬಾಸ್​ ಆಗಿರಲಿದ್ದಾರೆ ಎಂದು ತಂಡದ ಸಿಇಒ ಕಾಶಿ ವಿಶ್ವನಾಥನ್​ ತಿಳಿಸಿದ್ದಾರೆ.

ಕಡಲನಗರಿ ಚೆನ್ನೈ ನಗರದ ಡ್ರೀಮ್​ ಬಾಯ್​, ಥಲಾ (ನಾಯಕ), ಆಗಿರುವ ಧೋನಿ, ಮುಂದಿನ ದಿನಗಳಲ್ಲೂ ಆ ನಗರದೊಂದಿಗೆ ಮುಂದುವರಿಯಲಿದ್ದಾರೆ. ಕ್ರಿಕೆಟ್​ ಆಡದಿದ್ದರೂ ಸಿಎಸ್​ಕೆಯೊಂದಿಗೆ ಧೋನಿ ಮುಂದುವರಿಯಲಿದ್ದಾರೆ ಎಂದು ಮಾಲೀಕ ಎನ್​.ಶ್ರೀನಿವಾಸನ್​ ಈ ಮೊದಲೇ ಹೇಳಿಕೊಂಡಿದ್ದರು. ಇದೀಗ ಸಿಇಒ ಕೂಡ ಶ್ರೀನಿ ಮಾತನ್ನೇ ಪುನರುಚ್ಚಿಸಿದ್ದಾರೆ. ಕ್ರಿಕೆಟ್​ ಜೀವನದ ಸಂಧ್ಯಾಕಾಲದಲ್ಲಿರುವ ಧೋನಿ, ಇದುವರೆಗೂ 10 ಆವೃತ್ತಿಗಳಲ್ಲಿ ಸಿಎಸ್​ಕೆ ತಂಡ ಮುನ್ನಡೆಸಿದ್ದು, ಇದರಲ್ಲಿ 3 ಬಾರಿ ಚಾಂಪಿಯನ್​ ಆಗಿದೆ. ಎಲ್ಲ ಆವೃತ್ತಿಗಳಲ್ಲೂ ಕನಿಷ್ಠ ಅಗ್ರ 4ನೇ ಸ್ಥಾನ ಪಡೆದಿದೆ.

ಮಂಗಳವಾರ ಧೋನಿ ಅವರ 39ನೇ ಹುಟ್ಟುಹಬ್ಬದ ಅಂಗವಾಗಿ ಸ್ಟಾರ್​ ಸ್ಪೋರ್ಟ್ಸ್​ ತಮಿಳು ಚಾನೆಲ್​ನಲ್ಲಿ ಮಾತನಾಡಿದ ಸಿಎಸ್​ಕೆ ಸಿಇಒ, ಭವಿಷ್ಯದಲ್ಲೂ ತಂಡ ಧೋನಿ ಜತೆಗಿರಲಿದೆ ಎಂದು ಹೇಳಿದರು. ಚೆನ್ನೈ ಫೇರಿಟ್​ ಮಗ ಆಗಿರುವುದರರಿಂದ ಅವರನ್ನು ಥಲಾ ಎಂದು ಕರೆಯಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net