More

    VIDEO: ಸೌರವ್​ ಗಂಗೂಲಿಗೆ ಗಾಡ್​ ಆಫ್ ಆಫ್-ಸೈಡ್ ಎಂದು ಬಿರುದು ನೀಡಿದ್ದು ಯಾರು ಗೊತ್ತೆ..?

    ಬೆಂಗಳೂರು: ಭಾರತ ತಂಡದ ದಿಗ್ಗಜರು ತಮ್ಮ ಆಟದ ಶೈಲಿ ಮೂಲಕವೇ ಒಂದಿಲ್ಲೊಂದು ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದ್ದರು. ರಾಹುಲ್​ ದ್ರಾವಿಡ್​ ದಿ ವಾಲ್​ ಎಂದು ಪ್ರಸಿದ್ಧಿ ಪಡೆದಿದ್ದರೆ, ಸಚಿನ್​ ತೆಂಡುಲ್ಕರ್​ ಕ್ರಿಕೆಟ್​ ದೇವರು ಅಂತಲೇ ಕರೆಸಿಕೊಂಡರು. ತಮ್ಮ ಫೇವರಿಟ್​ ಹೊಡೆತಗಳ ಮೂಲಕವೇ ಗಂಗೂಲಿ ಪ್ರಸಿದ್ಧಿ ಪಡೆದಿದ್ದರು. ಆಫ್-ಸೈಡ್​ನಲ್ಲಿ 9 ಫೀಲ್ಡರ್​ಗಳೂ ಇದ್ದರೂ ನಿರಾಯಸವಾಗಿ ಚೆಂಡು ತಳ್ಳುವುದರಲ್ಲಿ ಗಂಗೂಲಿ ಫೇಮಸ್​ ಆಗಿದ್ದರು. ಇದಕ್ಕಾಗಿ ಅವರನ್ನು ಆಫ್-ಸೈಡ್ ಗಳ ರಾಜ ಎನ್ನಲಾಗುತ್ತಿತ್ತು. ಗಂಗೂಲಿಗೆ ಈ ಹೆಸರು ಇಟ್ಟಿದ್ದು ಬೇರೆಯಾರು ಅಲ್ಲ ಕನ್ನಡಿಗ ರಾಹುಲ್​ ದ್ರಾವಿಡ್​.

    ಇದನ್ನೂ ಓದಿ: 4 ತಿಂಗಳ ಬಳಿಕ ಕ್ರಿಕೆಟ್​ ಶುರು, ಬುಕ್ಕಿಗಳ ಮೇಲೆ ಸಿಸಿಬಿ ‘ಐ’ ಅಲರ್ಟ್​

    VIDEO: ಸೌರವ್​ ಗಂಗೂಲಿಗೆ ಗಾಡ್​ ಆಫ್ ಆಫ್-ಸೈಡ್ ಎಂದು ಬಿರುದು ನೀಡಿದ್ದು ಯಾರು ಗೊತ್ತೆ..?ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ಗಳಿಗೆ ಮೈದಾನದ ಒಂದೊಂದು ಏರಿಯಾ ಫೇವರಿಟ್​ ಸ್ಪಾಟ್​ಗಳಿರುತ್ತವೆ. ಹಾಗೆಯೇ ಅವರ ಬ್ಯಾಟಿಂಗ್​ ಶೈಲಿಗೂ ಹೆಸರು ಕೂಡ ದಕ್ಕುತ್ತದೆ. ತಾಳ್ಮೆಯ ಬ್ಯಾಟಿಂಗ್​ಗೆ ಹೆಸರಾಗಿದ್ದ ರಾಹುಲ್​ ದ್ರಾವಿಡ್​ ದಿ ವಾಲ್​ ಎಂದು ಕರೆಸಿಕೊಂಡರೆ, ಸಚಿನ್​ ತೆಂಡುಲ್ಕರ್​ ಅವರನ್ನು ಕ್ರಿಕೆಟ್​ ದೇವರೆಂದೆ ಕರೆಯಲಾಗಿತ್ತು. ಆಫ್ ಸೈಡ್​ ಹೊಡೆತಗಳಿಗೆ ಗಂಗೂಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಗಂಗೂಲಿ ಅವರೊಂದಿಗೆ ಸಾಕಷ್ಟು ಕ್ರಿಕೆಟ್​ ಆಡಿದ್ದ ರಾಹುಲ್​ ದ್ರಾವಿಡ್​ ಅವರ ಆಟವನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದರು. ಅವರ ಆಫ್-ಸೈಡ್ ಹೊಡೆತಗಳ ಶೈಲಿಗೆ ಮಾರು ಹೋಗಿದ್ದ ದ್ರಾವಿಡ್​ ಅವರಿಗೆ ಗಾಡ್​ ಆಫ್ ಆಫ್-ಸೈಡ್​ ಎಂದು ಕರೆದಿದ್ದರಂತೆ. 9 ಫೀಲ್ಡರ್​ಗಳು ಆಫ್​ ಸೈಡ್​ನಲ್ಲಿದ್ದರೂ ಗಂಗೂಲಿಗೆ ಚೆಂಡನ್ನು ಬೌಂಡರಿಗೆ ಅಟ್ಟುವ ಕಲೆ ಇತ್ತು. ಗಂಗೂಲಿ ಆಡುವ ವೇಳೆ ಸ್ಟಾರ್​ ಬೌಲರ್​ಗಳಾದ ಪಾಕಿಸ್ತಾನದ ವೇಗಿ ಶೋಯಿಬ್​ ಅಖ್ತರ್​, ಶ್ರೀಲಂಕಾ ಸ್ಪಿನ್ನರ್​ ಮುತ್ತಯ್ಯ ಮುರಳೀಧರನ್​ ಎಸೆತಗಳಿಗೂ ಗಂಗೂಲಿ ಎಷ್ಟೋ ಬಾರಿ ಬೌಂಡರಿಯಿಂದ ಆಚೆಗೆ ಅಟ್ಟಿದ್ದಾರೆ. ಅವರ ಆಫ್​ ಸೈಡ್​ ಹೊಡೆತಗಳನ್ನು ನೋಡುವುದೇ ಒಂದು ಖುಷಿ ಎನ್ನುತ್ತಾರೆ ಸಮಕಾಲಿನ ಕ್ರಿಕೆಟಿಗರು.

    ಇದನ್ನೂ ಓದಿ: ಧೋನಿ ಕಂಪನಿಯಿಂದ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಸಾವಯವ ಗೊಬ್ಬರ!

    ಬಿಸಿಸಿಐ ಮುಖ್ಯಸ್ಥರು ಆದ ಸೌರವ್​ ಗಂಗೂಲಿ ಬುಧವಾರವಷ್ಟೇ 48ನೇ ಹುಟ್ಟುಹಬ್ಬ ಆಚರಿಸಿಕೊಂಡರು. ವಿಶ್ವ ಕ್ರಿಕೆಟ್​ ವಲಯ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ದಾದಾಗೆ ಶುಭಾಶಯ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts