More

    ಆಡದಿದ್ದರೂ ಅಗ್ರ 10ರೊಳಗೆ ಕಾಣಿಸಿಕೊಂಡ ಜೋಶ್ನಾ ಚಿನ್ನಪ್ಪ

    ನವದೆಹಲಿ: ಭಾರತದ ಸ್ಟಾರ್​ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ, ಪಿಎಸ್​ಎ ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರ 10ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಶ್ವ ನಂ.1 ಆಟಗಾರ್ತಿ ಈಜಿಪ್ಟ್​ನ ರನೀಮ್​ ಎಲ್​ ವೆನಿನಿ ದಿಢೀರ್​ ನಿವೃತ್ತಿ ಘೋಷಿಸಿರುವುದು ಜೋಶ್ನಾ ಚಿನ್ನಪ್ಪ ಅಗ್ರ 10ರೊಳಗೆ ಜಿಗಿಯಲು ಪ್ರಮುಖ ಕಾರಣ.

    ಇದನ್ನೂ ಓದಿ: VIDEO: ಸೌರವ್​ ಗಂಗೂಲಿಗೆ ಗಾಡ್​ ಆಫ್ ಆಫ್-ಸೈಡ್ ಎಂದು ಬಿರುದು ನೀಡಿದ್ದು ಯಾರು ಗೊತ್ತೆ..?

    ಕರೊನಾ ವೈರಸ್​ ಭೀತಿಯಿಂದ ಜೋಶ್ನಾ ಚಿನ್ನಪ್ಪ ಮಾರ್ಚ್​ ತಿಂಗಳಿಂದ ಯಾವುದೇ ಟೂನಿರ್ಗಳಲ್ಲಿ ಸ್ಪಧಿರ್ಸಿಲ್ಲ. 33 ವರ್ಷದ ಜೋಶ್ನಾ, 2016ರಲ್ಲಿ ಮೊದಲ ಬಾರಿಗೆ ಅಗ್ರ 10ರೊಳಿಗೆ ಸ್ಥಾನ ಪಡೆದಿದ್ದರು. ಇದಕ್ಕೂ ಮೊದಲು ಮತ್ತೋರ್ವ ಆಟಗಾತಿರ್ ದೀಪಿಕಾ ಪಲ್ಲಿಕಲ್​ ಈ ಸಾಧನೆ ಮಾಡಿದ್ದರು. ಈಜಿಪ್ಟ್​ನ ಮತ್ತೋರ್ವ ಆಟಗಾರ್ತಿ ನೌರಾನ್​ ಗೊಹರ್​ ವಿಶ್ವ ನಂ.1 ಪಟ್ಟ ಅಲಂಕರಿಸಿದ್ದಾರೆ.

    ಇದನ್ನೂ ಓದಿ: ಧೋನಿ ಕಂಪನಿಯಿಂದ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಸಾವಯವ ಗೊಬ್ಬರ!

    ರನೀಮ್​ ಕಳೆದ 19 ತಿಂಗಳಿಂದ ನಂ.1 ಪಟ್ಟದಲ್ಲಿದ್ದರು. ಇದೀಗ ದಿಢೀರ್​ ನಿವೃತ್ತಿ ಘೋಷಿಸಿದ್ದಾರೆ. ಪುರುಷರ ವಿಭಾಗದಲ್ಲಿ ಭಾರತದ ಸೌರವ್​ ಘೋಷಾಲ್​ 13ನೇ ರ್ಯಾಂಕಿಂಗ್​ನಲ್ಲಿದ್ದಾರೆ. ಕರೊನಾ ವೈರಸ್​ ಭೀತಿಯಿಂದಾಗಿ ಆಗಸ್ಟ್​ ತಿಂಗಳವರೆಗೂ ಪಿಎಸ್​ಎ ಟೂರ್​ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts