ಶಾರುಖ್​ ಪುತ್ರನಿಗೆ ಇಂದೂ ಸಿಗಲಿಲ್ಲ ಬಿಡುಗಡೆ ಭಾಗ್ಯ: ಅ.20ರವರೆಗೆ ಜೈಲು ವಾಸ​

aryan
Published on

ಮುಂಬೈ: ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್​ ತಾರೆ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​ಗೆ ಇಂದೂ ಜಾಮೀನು ಸಿಗಲಿಲ್ಲ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ)ಗೆ ಹೇಳಿಕೆ ಸಲ್ಲಿಸಲು ಅವಕಾಶ ನೀಡಿದ ಮುಂಬೈನ ವಿಶೇಷ ಎನ್​ಡಿಪಿಎಸ್​ ಕೋರ್ಟ್​, ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ತನ್ನ ಆದೇಶವನ್ನು ಅಕ್ಟೋಬರ್​ 20ರವರೆಗೆ ಕಾಯ್ದಿರಿಸಿದೆ. ನ್ಯಾಯಧೀಶ ವಿವಿ ಪಾಟೀಲ್​ ಆದೇಶವನ್ನು ಕಾಯ್ದಿರಿಸಿದ್ದಾರೆ. ಸದ್ಯ ಆರ್ಯನ್​ ಖಾನ್​ ಅ.20ರವರೆಗೆ ಜೈಲಿನಲ್ಲೇ ಕಾಲ ಕಳೆಯಬೇಕಿದೆ.

ಹತ್ತು ಇತರ ಆರೋಪಿಗಳೊಂದಿಗೆ ಎನ್​ಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟ 23 ವರ್ಷ ವಯಸ್ಸಿನ ಆರ್ಯನ್​ ಖಾನ್​, ಕಳೆದ ಶುಕ್ರವಾರದಿಂದ ಜೈಲಿನಲ್ಲಿದ್ದಾನೆ. ಅವನ ಜಾಮೀನು ಅರ್ಜಿಗೆ ಹೇಳಿಕೆ ಸಲ್ಲಿಸಲು ಇಂದು ಎನ್​ಸಿಬಿ ವಕೀಲರು ಶುಕ್ರವಾರದವರೆಗೆ ಕಾಲಾವಕಾಶ ಕೋರಿದರು. ಆದರೆ ನ್ಯಾಯಾಲಯ ಬುಧವಾರದೊಳಗೆ ಹೇಳಿಕೆ ಸಲ್ಲಿಸಬೇಕೆಂದು ಸೂಚಿಸಿ, ವಿಚಾರಣೆ ಮುಂದೂಡಿತ್ತು. ಇದೀಗ ಪ್ರಕರಣದ ಆದೇಶವನ್ನು ಅ.20ರವರಗೆ ಕಾಯ್ದಿರಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net