blank

ಸರ್ಕಾರಿ ನಿವಾಸ ತೊರೆದ ಕೇಜ್ರಿವಾಲ್​​; ಹೊಸ ಮನೆ ಆಯ್ಕೆಗೆ ಕಾರಣ ಹೀಗಿದೆ | Delhi

blank

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಗೊತ್ತೆ ಇದೆ. ರಾಜೀನಾಮೆ ನೀಡ ಕೆಲ ದಿನಗಳು ಕಳೆದ ಬಳಿಕ ಶುಕ್ರವಾರ (ಅಕ್ಟೋಬರ್​​ 4)ಮುಖ್ಯಮಂತ್ರಿ ನಿವಾಸವನ್ನು ತೊರೆದಿದ್ದಾರೆ. ಸಿಎಂ ಹುದ್ದೆ ತೊರೆದ ಬಳಿಕ ಸರ್ಕಾರಿ ನಿವಾಸವನ್ನು ಖಾಲಿ ಮಾಡಬೇಕಾಯಿತು. ಸದ್ಯ ಅರವಿಂದ್​ ಕೇಜ್ರಿವಾಲ್​ ತಮ್ಮ ಕುಟುಂಬದ ಸದಸ್ಯರೊಂದಿಗೆ ಶಿಫ್ಟ್​ ಆಗಿದ್ದಾರೆ.

blank

ಇದನ್ನು ಓದಿ: Tirupati Laddu Row | ಟಿಟಿಡಿ ನಿಯಮವನ್ನು ಅನುಸರಿಸಿದ ಡಿಸಿಎಂ ಪವನ್​ ಕಲ್ಯಾಣ್​ ಪುತ್ರಿ

ಕೇಜ್ರಿವಾಲ್ ಕುಟುಂಬ ಸಮೇತ ದೆಹಲಿಯ ಫಿರೋಜ್‌ಶಾ ರಸ್ತೆಯಲ್ಲಿರುವ ಬಂಗಲೆ ನಂ.5ಕ್ಕೆ ಬಂದಿದ್ದಾರೆ. ಈ ಮನೆಯನ್ನು ಆಯ್ಕೆ ಮಾಡಲು ಒಂದಲ್ಲ ಮೂರು ಕಾರಣಗಳಿವೆ ಎಂದು ಮೂಲಗಳು ತಿಳಿಸಿವೆ. ಆ ಕಾರಣಗಳು ಹೀಗಿವೆ.

ಅರವಿಂದ್ ಕೇಜ್ರಿವಾಲ್ ತಮ್ಮ ಹೊಸ ಮನೆಯನ್ನು ಹುಡುಕುತ್ತಿದ್ದಾಗ, ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ನವದೆಹಲಿಯಲ್ಲಿ ಮಾತ್ರ ಇರಲು ಬಯಸಿದ್ದರು. ಈಗ ಶಿಫ್ಟ್​ ಆಗಿರುವ ಬಂಗಲೆ ನಂ. 5 ಅವರ ಸ್ವಂತ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಇಲ್ಲಿಂದ ಅವರು ತಮ್ಮ ಕ್ಷೇತ್ರದ ಸುದ್ದಿಗಳನ್ನು ಅಪ್ಡೇಟ್​​ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಫಿರೋಜ್‌ಶಾ ರಸ್ತೆಯಲ್ಲಿರುವ ಬಂಗಲೆ ನಂ.5 ಅನ್ನು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರಿಗೆ ನೀಡಲಾಗಿದೆ. ಅರವಿಂದ್ ಕೇಜ್ರಿವಾಲ್ ಹೊಸ ಮನೆಯನ್ನು ಹುಡುಕುತ್ತಿದ್ದಾಗ ಅಶೋಕ್ ಮಿತ್ತಲ್ ಅವರು ತಮ್ಮ ಬಂಗಲೆಯಲ್ಲಿ ವಾಸಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಈ ಮನೆಗೆ ಶಿಫ್ಟ್ ಆಗಿದ್ದಾರೆ.

ಅರವಿಂದ್ ಕೇಜ್ರಿವಾಲ್ ಬಂಗಲೆ ನಂ.5 ಅನ್ನು ಆಯ್ಕೆ ಮಾಡಲು ಇನ್ನೊಂದು ಬಹುಮುಖ್ಯ ಕಾರಣವೆಂದರೆ ಈ ಬಂಗಲೆ ಅವರ ಪಕ್ಷದ ಪ್ರಧಾನ ಕಚೇರಿಗೆ ಬಹಳ ಹತ್ತಿರದಲ್ಲಿದೆ.

ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರಿಗೆ ಉಳಿದುಕೊಳ್ಳಲು ಸ್ಥಳವಿಲ್ಲ ಎಂದು ನನಗೆ ತಿಳಿಯಿತು. ನಾನು ಅವರನ್ನು ನನ್ನ ದೆಹಲಿಯ ನಿವಾಸಕ್ಕೆ ಅತಿಥಿಯಾಗಿ ಆಹ್ವಾನಿಸಿದೆ. ಅವರು ನನ್ನ ಮನವಿಯನ್ನು ಸ್ವೀಕರಿಸಿರುವುದು ತುಂಬಾ ಸಂತೋಷವನ್ನು ಉಂಟುಮಾಡಿದೆ ಎಂದು ಅಶೋಕ್​ ಮಿತ್ತಲ್​​​ ಹೇಳಿದರು.

ಈ ಮಧ್ಯೆ ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿರುವ ಬಂಗಲೆಗೆ ಸ್ಥಳಾಂತರಗೊಂಡಿದ್ದಾರೆ. ಇದು ಎಎಪಿ ಮತ್ತೊಬ್ಬ ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಅವರ ಅಧಿಕೃತ ನಿವಾಸವಾಗಿದೆ.

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ಎರಡು ದಿನಗಳ ನಂತರ ಸಿಎಂ ​ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಘೋಷಿಸಿ ತಮ್ಮ ಸ್ಥಾನವನ್ನು ತೊರೆದರು. ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ ಈಗ ಸಾರ್ವಜನಿಕ ನ್ಯಾಯಾಲಯ ನ್ಯಾಯ ನೀಡಲಿದೆ ಎಂದು ಹೇಳಿದರು. ಪ್ರಸ್ತುತ ಎಎಪಿ ನಾಯಕಿ ಅತಿಶಿ ನೂತನ ಮುಖ್ಯಮಂತ್ರಿಯಾಗಿದ್ದಾರೆ. ದೆಹಲಿಯಲ್ಲಿ ಎಎಪಿ ಸರ್ಕಾರದ ಅವಧಿ ಫೆಬ್ರವರಿ 2025ಕ್ಕೆ ಕೊನೆಗೊಳ್ಳಲಿದೆ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು 2013ರಿಂದ ದೆಹಲಿಯಲ್ಲಿ ಅಧಿಕಾರದಲ್ಲಿದೆ. (ಏಜೆನ್ಸೀಸ್​​)

 

Share This Article
blank

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

ನಿಮ್ಮ ಪತಿ ಬಿಗಿಯಾದ ಬೆಲ್ಟ್ ಧರಿಸುತ್ತಿದ್ದಾರಾ? ಅವರಿಗೆ ಈ ಕುರಿತಾಗಿ ಜಾಗೃತಿ ಮೂಡಿಸಿ..belt

belt: ಇತ್ತೀಚಿನ ದಿನಗಳಲ್ಲಿ ಬೆಲ್ಟ್ ಧರಿಸುವುದು ಸಾಮಾನ್ಯ. ಆದರೆ, ಬೆಲ್ಟ್ ಧರಿಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು…

blank