

ಅಮರಾವತಿ: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ತಿರುಮಲದಲ್ಲಿ ಹಮ್ಮಿಕೊಂಡಿದ್ದ ಪ್ರಾಯಶ್ಚಿತ್ತ ದೀಕ್ಷೆಯನ್ನು ಹಿಂಪಡೆದಿದ್ದಾರೆ. ತಿರುಮಲ ಪ್ರಸಾದವಾದ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ಮಾಡಿದ್ದಾರೆ ಎಂಬ ಆರೋಪಕ್ಕೆ ಪವನ್ ಕಲ್ಯಾಣ್ ಪ್ರಾಯಶ್ಚಿತ್ತದ ಕ್ರಮಕ್ಕೆ ಸೆಪ್ಟೆಂಬರ್ 22 ರಂದು ದೀಕ್ಷೆ ಸ್ವೀಕರಿಸಿದ್ದು ಗೊತ್ತೆ ಇದೆ. 11 ದಿನಗಳ ಬಳಿಕ ಬುಧವಾರ ಬೆಳಗ್ಗೆ (ಅಕ್ಟೋಬರ್ 2) ತಿರುಮಲದಲ್ಲಿ ದೀಕ್ಷೆಯನ್ನು ವಿರಮಿಸಿದರು.
ಮಂಗಳವಾರ (ಅಕ್ಟೋಬರ್ 1) ಸಂಜೆ ಪವನ್ ಕಲ್ಯಾಣ್ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟಕ್ಕೆ ತಲುಪಿದರು. ಅಲ್ಲದೆ ಪವನ್ ಕಲ್ಯಾಣ್ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಿರುಮಲ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರಿ ಪೊಲೆನಾ ಅಂಜನಾ ತಿರುಮಲ ಶ್ರೀವಾರಿ ದರ್ಶನಕ್ಕೆ ಭಗವಂತನ ಮೇಲಿನ ಗೌರವವನ್ನು ಘೋಷಿಸಿದರು. ತಾವು ತಂದ ಡಿಕ್ಲರೇಶನ್ ದಾಖಲೆಗಳಿಗೆ ಟಿಟಿಡಿ ನೌಕರರು ಸಹಿ ಹಾಕಿದರು.
ಪೊಲೆನಾ ಅಂಜನಾ ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ ಅವರ ತಂದೆ ಪವನ್ ಕಲ್ಯಾಣ್ ಅವರು ಡಿಕ್ಲರೇಶನ್ ದಾಖಲೆಗಳಿಗೆ =ಸಹಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವಿದೇಶಿಗರು ಮತ್ತು ಹಿಂದೂಯೇತರರು ದೇವಾಲಯದಲ್ಲಿ ವೆಂಕಟೇಶ್ವರನ ದರ್ಶನವನ್ನು ಪಡೆಯುವ ಮೊದಲು ಭಗವಂತನ ಮೇಲಿನ ಗೌರವವನ್ನು ಸಾಬೀತುಪಡಿಸಬೇಕು ಎಂದು ಟಿಟಿಡಿ ನಿಯಮಗಳು ತಿಳಿಸುತ್ತವೆ.1990ರಲ್ಲಿ ತಿರುಮಲ ಶ್ರೀವಾರಿ ಭೇಟಿಗೆ ಮೊದಲು ಅನ್ಯಧರ್ಮೀಯರು ಘೋಷಣೆಯನ್ನು ನೀಡಬೇಕೆಂದು ಜಂಟಿ ಆಂಧ್ರಪ್ರದೇಶದ ವಿಶೇಷ ಕಾನೂನನ್ನು ಪರಿಚಯಿಸಲಾಯಿತು.
ಈ ಹಿಂದೆ ಜಗನ್ ಅವರು ತಿರುಮಲಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ ಬಳಿಕ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಅಲಯನ್ಸ್ (ಎನ್‌ಡಿಎ) ಮಾಜಿ ಮುಖ್ಯಮಂತ್ರಿ ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ನಂಬಿಕೆಯನ್ನು ಸಾಬೀತುಪಡಿಸುವಂತೆ ಒತ್ತಾಯಿಸಿತು. ನಿಯಮವು ಹಳೆಯದಾದರೂ ಅದನ್ನು ಘೋಷಿಸುವ ಹೊಸ ಸೈನ್‌ಬೋರ್ಡ್‌ಗಳು ದೇವಾಲಯದ ಬಳಿ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥರು ಭೇಟಿ ನೀಡುವುದಾಗಿ ಘೋಷಿಸಿದ ಬಳಿಕ ದೇಗುಲದಲ್ಲಿ ಹುಟ್ಟಿಕೊಂಡಿವೆ ಎಂದು ಮೂಲಗಳು ತಿಳಿಸಿದ್ದವು.
ಪವನ್ ಕಲ್ಯಾಣ್ ಅವರ ದರ್ಶನದ ವೇಳೆ ವಾರಾಹಿ ಘೋಷಣೆ ಪುಸ್ತಕವನ್ನು ಶ್ರೀವಾರಿ ಪಾದಕ್ಕಿರಿಸಿ ಆಶೀರ್ವಾದ ಪಡೆದರು. ಆ ಬಳಿಕ ಪುಸ್ತಕ ಹಿಡಿದು ದೇವಸ್ಥಾನದ ಹೊರಗೆ ತೋರಿಸಿದರು. ಈ ವಾರಾಹಿ ಘೋಷಣೆ ಪುಸ್ತಕವನ್ನು ಸನಾತನ ಧರ್ಮಕ್ಕೆ ಸಂಬಂಧಿಸಿದ ಅಂಶಗಳೊಂದಿಗೆ ರಚಿಸಲಾಗಿದೆ ಎಂದು ತೋರುತ್ತದೆ. ಗುರುವಾರ ತಿರುಪತಿಯಲ್ಲಿ ನಡೆಯಲಿರುವ ವಾರಾಹಿ ಸಭೆಯಲ್ಲಿ ಉಪಮುಖ್ಯಮಂತ್ರಿಗಳು ವಾರಾಹಿ ಘೋಷಣೆ ಪುಸ್ತಕದ ವಿಷಯಗಳನ್ನು ಜನರಿಗೆ ತಿಳಿಸಲಿದ್ದಾರೆ ಎಂದು ತಿಳಿಸಲಾಗಿದೆ.(ಏಜೆನ್ಸೀಸ್)