ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ '420 ಕಾರ್ಡ್': ಅರುಣ್ ಸಿಂಗ್

arun singh
Published on

ವಿಜಯಪುರ: ಕಾಂಗ್ರೆಸ್ ಹೇಳಿದ್ದು ಯಾವುದು ಮಾಡಿಲ್ಲಾ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ 420 ಕಾರ್ಡ್ ಇದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ಎಂಟಕ್ಕೆ ಎಂಟೂ ಸೀಟ್ ಗಳು ಬಿಜೆಪಿ ಗೆಲ್ಲಲಿದೆ. ಜೆಡಿಎಸ್ ನದ್ದು ಮುಳುಗುವ ಹಡಗು.ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ & ಜೆಡಿಎಸ್ ಎರಡೂ ಎಬಿ ಟೀಂ ಗಳು ಇದ್ದಂಗೆ ಎಂದು ಹೇಳಿದ್ದಾರೆ.

ನಗರ ಬಿಜೆಪಿ ಕಚೇರಿಯಲ್ಲಿ ಪ್ರಾಣಳಿಕೆ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅವರ ಪ್ರಚಾರ ಶುರುವಾಗಿದೆ.ಅವರ ಸಭೆಗಳಲ್ಲಿ ಲಕ್ಷಕ್ಕೂ ಅಧಿಕ ಜನ್ರು ಸೇರುತ್ತಿದ್ದಾರೆ. 150ಕ್ಕೂ ಅಧಿಕ ಸೀಟ್ ಗೆಲ್ಲುವ ಮೂಲಕ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ. ಬಿಜೆಪಿ ಸರ್ಕಾರ ಬಂದಮೇಲೆ ಪ್ರಾಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿಗೆ ತರಲಾಗುವುದು.

39ಲಕ್ಷ ಮನೆಗಳಿಗೆ ನಲ್ಲಿ ಕೊಡಲಾಗಿದೆ, ಲಕ್ಷಾಂತರ ಜನ್ರಿಗೆ ಪಿಂಚಣಿ ಕೊಡಲಾಗಿದೆ.ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರಗಳು ಅತ್ಯುತ್ತಮ ಕೆಲಸ ಮಾಡಿವೆ. ಕರ್ನಾಟಕದಲ್ಲಿ ರಸ್ತೆ, ಮೆಟ್ರೋ, ರೇಲ್ವೆ, ಏರಪೋರ್ಟ್ ಗಳನ್ನು ನಿರ್ಮಿಸಲಾಗಿದೆ.ಡಬಲ್ ಇಂಜಿನ್ ಸರ್ಕಾರಗಳು ಕರ್ನಾಟಕದಲ್ಲಿ ಭಾರೀ ಅಭಿವೃದ್ಧಿ ಕೆಲಸ ಮಾಡಿವೆ.ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲ ವರ್ಗಕ್ಕೂ ಸೌಲಭ್ಯಗಳನ್ನು ಕೊಡಲಾಗಿದೆ. ಯಾರೂ ಸಹ ಕಾಂಗ್ರೆಸ್ ಬರಬೇಕು ಎಂದು ಬಯಸುತ್ತಿಲ್ಲ ಎಂದು ವಿರೋಧ ಪಕ್ಷದ ಕುರಿತಾಗಿ ಕಿಡಿ ಕಾರಿದ್ದಾರೆ.

ರಾಜಸ್ಥಾನ, ಛತ್ತಿಸಘಡ, ಹಿಮಾಚಲ‌ ಪ್ರದೇಶ ಗಳಲ್ಲಿ ಕೊಟ್ಟಿದ್ದ ಭರವಸೆಗಳನ್ನು ಕೊಟ್ಟಿಲ್ಲಾ. ಉತ್ತರ ಪ್ರದೇಶದಲ್ಲೂ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ರು, ಆದ್ರೆ ಇವರದ್ದು ಗ್ಯಾರಂಟಿ ಇಲ್ಲಾ ಎಂದು ಜನ ಇವರನ್ನು ನಿರಾಕರಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ 420 ಕಾರ್ಡ್ ಇದೆ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net