ಕಾಸರಗೋಡು: ಬೆಳಗ್ಗಿನ ವಾಯು ವಿಹಾರ ಸಂದರ್ಭ ರಸ್ತೆಬದಿ ನಡೆದುಹೋಗುತ್ತಿದ್ದ ಪಾದಚಾರಿ ಹಾಗೂ ಪತ್ರಕರ್ತನಿಗೆ ಡಿಕ್ಕಿಯಾಗಿ ನಿಲ್ಲಿಸದೆ ಪರಾರಿಯಾಗಿದ್ದ ಲಾರಿಯನ್ನು ತಮಿಳುನಾಡಿನಿಂದ ಹೊಸದುರ್ಗ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಪತ್ತೆಹಚ್ಚಿದ್ದು, ಚಾಲಕ ತಮಿಳ್ನಾಡು ಎರಿಚ್ಚೇಪುರ್ ನಿವಾಸಿ ಶಂಕರ್ ಎಂಬಾತನನ್ನು ಬಂಧಿಸಿದ್ದಾರೆ. ಲಾರಿ ಡಿಕ್ಕಿಯಾದ ಪರಿಣಾಮ ಪತ್ರಕರ್ತ, ಕರಿಂದಳ ನಿವಾಸಿ ಸುಕುಮಾರನ್(64)ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮಾ.16ರಂದು ಬೆಳಗ್ಗೆ ರಸ್ತೆಬದಿ ನಡೆದುಹೋಗುತ್ತಿದ್ದಾಗ ಇವರಿಗೆ ಲಾರಿ ಡಿಕ್ಕಿಯಾಗಿದ್ದು, ಕೈ, ಕಾಲುಗಳಿಗೆ ಗಾಯವಾಗಿತ್ತು. ಪರಾರಿಯಾಗಿದ್ದ ಲಾರಿಯ ಪತ್ತೆಗಾಗಿ ಪೊಲೀಸರು ಕಣ್ಣೂರು ವರೆಗಿನ 40ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಪರೀಕ್ಷಿಸಿದ್ದರು.
ವಿಜಯಗೋಪುರಕ್ಕೆ ಸೇವಾರೂಪದ ಇಟ್ಟಿಗೆ ನೀಡಲು ಅವಕಾಶ : ಶರತ್‌ಕೃಷ್ಣ ಪಡುವೆಟ್ನಾಯ ಮಾಹಿತಿ