ಉದ್ಯಮಿ ಕುಸುಮೋಧರ ಡಿ.ಶೆಟ್ಟಿಗೆ ಸನ್ಮಾನ

New Project (31)
Published on

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ತೀರ್ಥಮಂಟಪದ ದಾನಿ ಉದ್ಯಮಿ ಕುಸುಮೋಧರ ಡಿ.ಶೆಟ್ಟಿ ಅವರನ್ನು ದೇವಸ್ಥಾನದ ವತಿಯಿಂದ ವಾರ್ಷಿಕ ಜಾತ್ರೋತ್ಸವದ ಸಂದರ್ಭ ಸನ್ಮಾನಿಸಲಾಯಿತು.

ಈ ವೇಳೆ ಅವರು 10 ಲಕ್ಷ ರೂ.ಗಳನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದು, ಹಿಂದಿನ 5 ಲಕ್ಷ ರೂ. ಸೇರಿ ಒಟ್ಟು 15 ಲಕ್ಷ ರೂ. ಸಮರ್ಪಿಸಿದಂತಾಗಿದೆ. ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಕಡೇಶ್ವಾಲ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ನುಳಿಯಾಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ವಿಜಯ ವಿ.ಕೋಟ್ಯಾನ್, ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ, ರಾಮಣ್ಣ ಶೆಟ್ಟಿ ಕಲ್ಕೊಟ್ಟೆ, ಉಮೇಶ್ ಆಳ್ವ ಕೊಟ್ಟುಂಜ, ವಿಠಲ್ ಎಂ.ಆರುಮುಡಿ, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ಶಶಿಕುಮಾರ್ ಶೆಟ್ಟಿ ಮುಂಬಯಿ, ಕುಸುಮಾಕರ ಶೆಟ್ಟಿ ಕುರ್ಯಾಳ, ಲೋಕೇಶ್ ಪೂಜಾರಿ ಎಕ್ಕುಡೇಲು, ರಾಧಾಕೃಷ್ಣ ರೈ ಕೊಟ್ಟುಂಜ, ಚೇತನ್ ಬಜ, ಸಂತೋಷ್ ಶೆಟ್ಟಿ ಪಿ, ರಾಧಾಕೃಷ್ಣ ಶೆಟ್ಟಿ ಕಲ್ಕೊಟ್ಟೆ, ಪ್ರಕಾಶ್ಚಂದ್ರ ಆಳ್ವ ಪಿ, ಶಿವರಾಮ ಶೆಟ್ಟಿ ದೋಟ, ವಚನ್ ಬಜ, ಶೇಖರ ಶೆಟ್ಟಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net