

Screen: ಡಿಜಿಟಲ್ ಯುಗ ಎಂದೇ ಕರೆಯಲ್ಪಡುವ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್, ಕಂಪ್ಯೂಟರ್ ಇನ್ನಿತರ ತಾಂತ್ರಿಕ ಉಪಕರಣಗಳ ಮೇಲೆ ಅವಲಂಬಿರುತ್ತಾರೆ. ಒತ್ತಡ ಇರುವಂತಹ ಈ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಮೊಬೈಲ್ ನೀಡಿ ಮಕ್ಕಳಿಂದ ಶಾಂತಿ ಪಡೆಯಲು ಬಯಸುತ್ತಾರೆ. ಅಂದಹಾಗೆ,ಮಲಗುವ ಮುನ್ನ ಮಕ್ಕಳು ಸ್ಮಾರ್ಟ್ಫೋನ್ಗಳನ್ನು ಹೋಮ್ವರ್ಕ್ ಮಾಡಲು, ಆನ್ಲೈನ್ ತರಗತಿಗಳು, ಗೇಮಿಂಗ್, ಸ್ಟ್ರೀಮಿಂಗ್ ನಂತಹ ಕಾರ್ಯಗಳನ್ನು ಮಾಡಲು ಅತೀ ಹೆಚ್ಚು ಬಳಸಲಾರಂಭಿಸುತ್ತಾರೆ. ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಿ ನಿಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಹೃದಯೀ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು.
ಇನ್ನು ಈ ವಿಷಯದ ಕುರಿತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಬಂದ ಮಾಹಿತಿ ಪ್ರಕಾರ, ಮಕ್ಕಳಲ್ಲಿ ಹೆಚ್ಚುವರಿ ಸ್ಕ್ರೀನ್ ಸಮಯವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅದರಲ್ಲಿ 8-9 ನೇ ತರಗತಿಯ ಮಕ್ಕಳಲ್ಲಿ ತೂಕ ಹೆಚ್ಚಳದ ಬಗ್ಗೆ ನಡೆಸಿದ ಅಧ್ಯಯನದಲ್ಲಿ 1-4 ಗಂಟೆಗಳವರೆಗೆ ಮೊಬೈಲ್ ಬಳಕೆ, ಜಂಕ್ ಫುಡ್ ಸೇವನೆ, ದೈಹಿಕ ಚಟುವಟಿಕೆಗಳ ಕೊರತೆಯಿಂದ ಚಿಕ್ಕ ಬವಯಸ್ಸಿನಲ್ಲಿಯೇ ಹೃದಯೀ ಸಂಬಂಧೀ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದು ತಿಳಿಸಿದೆ.
2 ವರ್ಷಕಿಂತ ಕಡಿಮೆ ಇರುವಂತಹ ಮಕ್ಕಳಿಗೆ ನಿಮ್ಮ ಮೊಬೈಲ್ಗಳನ್ನು ಸಂಪೂರ್ಣವಾಗಿ ತಪ್ಪಿಸಿ, ಹಾಗೇ 2-5 ವರ್ಷದೊಳಗಿರುವ ಮಕ್ಕಳಿಗೆ ದಿನಕ್ಕೆ 1 ಗಂಟೆಗಿಂತ ಕಡಿಮೆ ಸ್ಕ್ರೀನ್ ಸಮಯವನ್ನು ಅನುಮತಿಸಿ. ಹಾಗೆಯೇ ಕೆಲವೊಂದು ಜಾಗಗಳಲ್ಲಿ ಮೊಬೈಲ್ಗಳನ್ನು ನಿಯಂತ್ರಿಸಿ. ಉದಾಹರಣೆಗೆ ಊಟದ ಮೇಜು, ಮಲಗುವ ಕೊಠಡಿ ಇನ್ನಿತರ ಸೂಕ್ಷ್ಮ ಜಾಗಗಳಲ್ಲಿ ನಿಯಂತ್ರಿಸಿ.
ನಿಮ್ಮ ಮಕ್ಕಳಿಗೆ ಓದುವುದರ ಜೊತೆಗೆ ದಿನಕ್ಕೆ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಆಟ ಆಡುವುದು, ಸೈಕಲ್ ತುಳಿಯುವುದು, ಓಡುವುದು ಈ ರೀತಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ.
ನಿಮ್ಮ ಮಕ್ಕಳು (ಜಂಕ್ ಫುಡ್) ಹೊರಗೆ ತಿನ್ನುತ್ತಾರಾ ಹಾಗಿದ್ದರೆ ಮೊದಲು ಅವುಗಳನ್ನು ನಿಯಂತ್ರಿಸಿ, ಅವುಗಳ ಬದಲು ಹಣ್ಣು, ತರಕಾರಿ, ಧಾನ್ಯಗಳು, ಮತ್ತು ಕಡಿಮೆ ಎಣ್ಣೆ ಇರುವಂತಹ ಆಹಾರವನ್ನು ನೀಡಿ.
ನಿಮ್ಮ ಮಕ್ಕಳು ಮೊದಲು ಹೆಚ್ಚು ನೋಡುವ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಿ. ಹಾಗೆಯೇ ಕೆಲವೊಂದು ಪ್ರದೇಶಗಳಲ್ಲಿ ನಿರ್ಬಂಧಿಸಿ. ಅಂದರೆ, ಮಲಗುವ ಮುಂಚೆ, ಊಟದ ಸಮಯದಲ್ಲಿ ಆದಷ್ಟು ಟಿವಿ ಹಾಗೂ ಮೊಬೈಲ್ನಿಂದ ದೂರ ಇಡಿ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ