ನೀವು ಹಣದ ಕೊರತೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ ನಿಮ್ಮ ಅದೃಷ್ಟ ಬದಲಾಗುತ್ತದೆ! | Vastu Shastra

Untitled design - 2025-09-15T133540.052
Published on

Vastu Shastra: ಇಂದಿನ ಸಮಯಲ್ಲಿ ಪ್ರತಿಯೊಬ್ಬರೂ ಸ್ವಂತ ಪರಿಶ್ರಮದ ಪೂರ್ಣ ಫಲವನ್ನು ಪಡೆಯಲು ಬಯಸುತ್ತಾರೆ. ಎಷ್ಟೇ ಕಠಿಣ ಪರಿಶ್ರಮದಿಂದಲೂ ಪ್ರಯತ್ನ ನಡೆಸಿದರೂ ಸಹ ಇದು ಕೆಲವೊಮ್ಮೆ ಅವರ ಕೈಹಿಡಿಯಲು ಸಾಧ್ಯವಾಗುವುದಿಲ್ಲ. ಈ ಸಂದರ್ಭಗಳಲ್ಲಿ ಮನುಷ್ಯನು ನನ್ನನ್ನು ಅದೃಷ್ಟ ಬೆಂಬಲಿಸುತ್ತಿಲ್ಲ . ನನಗೆ ನಿರಾಸೆಯಾಗುತ್ತದೆ ಎಂದು ಯೋಚಿಸಲು ಪ್ರಾರಂಭಿಸುತ್ತಾನೆ. ಆದರೆ, ಇದಕ್ಕೆ ನಿಜವಾದ ಕಾರಣ ಕೆಲವೊಮ್ಮೆ ಮನೆಯ ಪರಿಸರವೂ ಸಹ ಆಗಿರುತ್ತದೆ.

ವಾಸ್ತು ಪ್ರಕಾರ, ಮನೆಯಲ್ಲಿ ಇರುವ ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಯು ನಿಮ್ಮ ಸಂಪತ್ತು ಮತ್ತು ಪ್ರಗತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮನೆಯ ಪರಿಸರ ಧನಾತ್ಮಕವಾಗಿದ್ದರೆ, ಹಣ ಬರುತ್ತದೆ ಹಾಗೂ ದೀರ್ಘಕಾಲ ಉಳಿಯುತ್ತದೆ. ಹಾಗಾಗಿ ನಿಮ್ಮ ಮನೆಯ ಆರ್ಥಿಕ ಬಿಕ್ಕಟ್ಟನ್ನು ತೆಗೆದುಹಾಕಲು ಈ 5 ಸಲಹೆಗಳನ್ನು ಪಾಲಿಸಿ..

1. ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿಡಿ

ಮನೆಯ ಮುಖ್ಯದ್ವಾರವು ಕೇವಲ ಪ್ರವೇಶಿಸವಂತದಲ್ಲ. ಇಲ್ಲಿ ಲಕ್ಮೀ ದೇವತೆ ಹಾಗೂ ಧನಾತ್ಮಕ ಶಕ್ತಿಗಳು ಪ್ರವೇಶಿಸುವ ಸ್ಥಳವಾಗಿದೆ. ಈ ಬಾಗಿಲು ಕೊಳಕಾಗಿದ್ದರೆ, ಇಲ್ಲವೇ ದುಸ್ಥಿತಿ ಹೊಂದಿದ್ದರೆ ಇದು ನಿಮ್ಮ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ನೀವೇನಾದರೂ ಆದಾಯ ಲಾಭವನ್ನು ಪಡೆಯಲು ಬಯಸಿದರೆ ಮೊದಲು ನಿಮ್ಮ ಮನೆಯ ಬಾಗಿಲನ್ನು ಸ್ವಚ್ಛವಾಗಿಡಿ ಹಾಗೆಯೇ, ಅದರ ಮೇಲೆ ತೋರಣಗಳನ್ನು ಹಾಕಿ ಯಾವಾಗಲು ಅಂದವಾಗಿ ಕಾಣುವಂತೆ ಮಾಡಿರಿ.

2. ನಗದು ಪೆಟ್ಟಿಗೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಿ

ವಾಸ್ತು ಶಾಸ್ತ್ರದಲ್ಲಿ, ಉತ್ತರ ದಿಕ್ಕನ್ನು ಕುಬೇರ ಇರುವ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದರಿಂದ ಹಣದ ಪೆಟ್ಟಿಗೆಯನ್ನು ಆ ದಿಕ್ಕಿಗೆ ಇಡುವುದರಿಂದ ಶುಭವೆಂಬುದು ಅರಿತುಕೊಳ್ಳಿ. ಹಾಗೆಯೇ, ನಗದು ಪೆಟ್ಟಿಗೆ ಬಾಯಿ ಒಳಮುಖವಾಗಿ ತೆರೆದಿರಬೇಕು ಮತ್ತು ಅದರಲ್ಲಿ ಲಕ್ಷ್ಮಿ ದೇವತೆ, ಸ್ವಸ್ತಿಕ ಅಥವಾ ಶ್ರೀಫಲದಂತಹ ಯಾವುದೇ ಶುಭ ಚಿಹ್ನೆಯ ಚಿತ್ರವನ್ನು ಇಡಬೇಕು. ಇದು ನಿಮ್ಮನ್ನು ಸಮೃದ್ಧಿಯಾಗಿಡಲು ಸಹಕರಿಸುತ್ತದೆ.

3. ಮನೆಯಲ್ಲಿ ಯಾವಾಗಲೂ ನೀರಿನ ಹರಿವನ್ನು ಕಾಪಾಡಿ

ನೀರನ್ನು ಯಾವಾಗಲೂ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯ ಪಾತ್ರೆಯಲ್ಲಿರುವ ನೀರು, ಅಕ್ವೇರಿಯಂ ಅಥವಾ ಕಾರಂಜಿಯಂತವು ಇದ್ದರೆ ಅವುಗಳನ್ನು ಯಾವಾಗಲೂ ಸ್ವಚ್ಛಗೊಳಿಸುತ್ತಿರಿ. ಇದು ನಿಮ್ಮ ಹಣದ ನಿರಂತರತೆಯನ್ನು ಸೂಚಿಸುತ್ತದೆ. ಕೊಳಕು ನೀರು. ನಿಂತ ನೀರು ನೀವು ಆರ್ಥಿಕವಾಗಿ ಕುಗ್ಗುವಂತೆ ಮಾಡುತ್ತದೆ ಎಂಬುದು ತಿಳಿದಿರಿ.

4. ನಿಷ್ಪ್ರಯೋಜಕ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಬೇಡಿ

ಅನೇಕರ ಮನೆಯಲ್ಲಿ ಮುರಿದ ಪಾತ್ರೆಗಳು, ಹಾಳಾದ ಎಲೆಕ್ಟ್ರಾನಿಕ್​ ವಸ್ತುಗಳನ್ನು ಸಂಗ್ರಹಿಸಿರುತ್ತಾರೆ. ಇದು ನಿಮ್ಮ ಮನೆಯ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತವೆ. ಆದರಿಂದ ಈ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆದು ಸ್ವಚ್ಛವಾಗಿಡಿ. ಇದು ನಿಮ್ಮ ಮನೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

5. ಪೂಜಾ ಕೊಠಡಿಯನ್ನು ಸ್ವಚ್ಛವಾಗಿಡಿ

ನಿಮ್ಮ ಮನೆಯ ಪೂಜಾ ಕೊಠಡಿಯು ಅತ್ಯಂತ ಸಕಾರಾತ್ಮಕ ಶಕ್ತಿ ಹರಡುವ ಸ್ಥಳವಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಧೂಪಬತ್ತಿಯನ್ನು ಹಚ್ಚಿರಿ. ಇದು ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net