ನಮ್ಮ ಅಕೌಂಟ್ ಹ್ಯಾಕ್ ಆಗಿದೆ, ಯಾರೂ ದುಡ್ಡು ಕಳಿಸ್ಬೇಡಿ! ಪ್ರಿಯಾಂಕಾ, ಉಪೇಂದ್ರ ಮೊಬೈಲ್ ಹ್ಯಾಕ್.. priyanka upendra mobile number got hacked

Upendra (4)
Published on

ಬೆಂಗಳೂರು: ( priyanka upendra mobile number got hacked ) ಸ್ಯಾಂಡಲ್​ವುಡ್​ ನಟ ಉಪೇಂದ್ರ ಅವರ ಫೋನ್​ ನಂಬರ್​ ಹಾಗೂ ಅಕೌಂಟ್​​ನ್ನು ಸೈಬರ್​ ವಂಚಕರು ಹ್ಯಾಕ್​​ ಮಾಡಿದ್ದಾರೆ. ಈ ಕುರಿತಾಗಿ ಉಪೇಂದ್ರ ಅವರು ವಿಡಿಯೋ ಮೂಲಕವಾಗಿ​​ ಹಂಚಿಕೊಂಡಿದ್ದಾರೆ.

ಉಪೇಂದ್ರ ಅವರ ಸಂದೇಶದಲ್ಲಿ ಏನಿದೆ?:

ನನ್ನ ಪತ್ನಿ ಪ್ರಿಯಾಂಕಾಗೆ ಒಂದು ನಂಬರ್​ ಇಂದು ಎನೋ ಸಂದೇಶ ಬಂದಿತ್ತು. ಪ್ರಿಯಾಂಕ ಅವರು ಒಂದು ವಸ್ತು ಆರ್ಡರ್​ ಮಾಡಿದ್ದರು ಅದು ಬರುತ್ತದೆ ನಾವು ಹೇಳಿದಂತೆ ಮಾಡಿ ಎಂದು ಹೇಳಿದ್ದಾರೆ. ಆದರೆ ಅದು ಹ್ಯಾಕರ್​ದು ಆಗಿತ್ತು. ನಮಗೆ ಇದು ತಿಳಿಯದೆ ಹ್ಯಾಕರ್​ ನಂಬರ್​ಗೆ ಕರೆ ಮಾಡಿದ್ದೇವೆ. ನಮ್ಮಿಬ್ಬರ ನಂಬರ್​​ ಹ್ಯಾಕ್​ ಆಗಿದೆ.

ನನ್ನ ಹಾಗೂ ಪ್ರಿಯಾಂಕಾ ಅವರ ನಂಬರ್​ ಇಂದ ಹಣ ಕಳುಹಿಸಿ ಎಂದು ಕರೆ, ಸಂದೇಶ ಬಂದರೆ ದಯವಿಟ್ಟು ನೀವು ಯಾರು ಹಣವನ್ನು ಕಳುಹಿಸಬೇಡಿ. ನಾವು ಈ ಕುರಿತಾಗಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ ಎಂದು ನಟ ಉಪೇಂದ್ರ ಅವರು ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಈಗ ಪ್ರಿಯಾಂಕಾ ಅವರು ಸದ್ಯ ಸದಾಶಿವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ.

ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಎಲ್ಲರಿಗೂ ಹಣ ನೀಡುವಂತೆ ಮೆಸೇಜ್ ಮಾಡಲಾಗಿದ್ದು, ಎಮರ್ಜೆನ್ಸಿ ಇದೆ, ಹಣ ನೀಡಿ ಎಂದು ಪ್ರಿಯಾಂಕ ಉಪೇಂದ್ರ ನಂಬರ್ ನಿಂದ ಮೆಸೇಜ್ ಹೋಗಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net