laptop or USB: ಸ್ಮಾರ್ಟ್ಫೋನ್ಗಳಿಲ್ಲದ ಜಗತ್ತನ್ನು ಒಂದು ನಿಮಿಷ ಕೂಡ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಸೆಲ್ಫೊನ್ಗಳು ಅತ್ಯಾಧುನಿಕ ಜೀವನದ ಒಂದು ಭಾಗವೇ ಆಗಿ ಹೋಗಿವೆ. ಫೋನ್ಗಳನ್ನು ಕೆಲವರು ಮನರಂಜನೆಗೆ ಬಳಸಿದರೆ ಇನ್ನೂ ಕೆಲವರು ಕಚೇರಿ ಸೇರಿ ತಮ್ಮ ವ್ಯವಹಾರಗಳ ಉಪಯೋಗಕ್ಕೆ ಬಳಸುತ್ತಾರೆ.
ಇದನ್ನೂ ಓದಿ:ಶರವು ದೇವಸ್ಥಾನದಲ್ಲಿ ಕಾಪ ದೇವಸ್ಥಾನದ ಹೊರಕಾಣಿಕೆ ಸಂಗ್ರಹಣಾ ಕಚೇರಿಯ ಉದ್ಘಾಟನೆ
ಅದಗ್ಯೂ, ನೀವು ಫೋನ್ ಎಷ್ಟೇ ಚಾರ್ಚ್ ಮಾಡಿದರೂ ದಿಢೀರ್ ಬ್ಯಾಟರಿ ಖಾಲಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹೀಗಾಗಿ, ಜನರು ಸಿಕ್ಕಸಿಕ್ಕ ಕಡೆ ಚಾರ್ಚ್ ಹಾಕುತ್ತಾರೆ. ಅದರಲ್ಲೂ ಲ್ಯಾಪ್ಟ್ಯಾಪ್ ಮತ್ತು USB ಗಳಿಗೆ ವೈಯರ್ ಕನೆಕ್ಟ್ ಮಾಡಿ ಚಾರ್ಚ್ ಮಾಡಿಕೊಳ್ಳುತ್ತಾರೆ. ಇನ್ನೊಂದು ಡಿವೈಸ್ಗೆ ಏಕಾಏಕಿ ಚಾರ್ಚ್ ಹಾಕುವುದರಿಂದ ಇದು ಎಷ್ಟರಮಟ್ಟಿಗೆ ಸೂಕ್ತ ಎಂಬುವುದನ್ನ ನೋಡೋಣ..
ಫೋನ್ ಬ್ಯಾಟರಿ ಹಾಳು..!
ಅಡಾಪ್ಟರ್ ಬದಲಿಗೆ ಲ್ಯಾಪ್‌ಟಾಪ್‌ನಿಂದ ಸೆಲ್ಫೋನ್ ಚಾರ್ಜ್ ಮಾಡುವುದರಿಂದ ಪ್ರಯೋಜನಗಳಿಗಿಂತ ಅಪಾಯಗಳೇ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ರೀತಿಯಲ್ಲಿ ಚಾರ್ಜ್ ಮಾಡಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ನಿಮ್ಮ ಫೋನ್‌ನ ಬ್ಯಾಟರಿಯಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಫೋನ್‌ನ ಬ್ಯಾಟರಿ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸುತ್ತದೆ. USB ಪೋರ್ಟ್‌ಗಳು ಚಾರ್ಜರ್‌ಗಳಿಗಿಂತ ಕಡಿಮೆ ಶಕ್ತಿಶಾಲಿಯಾಗಿರುತ್ತವೆ. ಆದ್ದರಿಂದ ಅವುಗಳಿಂದ ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಫೋನ್‌ನ ಬ್ಯಾಟರಿ ಹಾಳಾಗುತ್ತದೆ.
ಇದನ್ನೂ ಓದಿ:ಗಣರಾಜ್ಯೋತ್ಸವ ಆಚರಿಸಿದ ಗ್ರಾಪಂ ಸಿಬ್ಬಂದಿಗೆ ಅಮಾನತಿಗೆ ಒತ್ತಾಯ
ಲ್ಯಾಪ್‌ಟಾಪ್ ಕೂಡ ನಷ್ಟ ಅನುಭವಿಸುತ್ತೆ..
ಈ ರೀತಿ ಏಕಾಏಕಿ ಚಾರ್ಚ್ ಮಾಡಿಕೊಳ್ಳುವುದರಿಂದ ನಿಮ್ಮ ಸೆಲ್ಫೋನ್ ಮತ್ತು ಲ್ಯಾಪ್‌ಟಾಪ್ ಕೂಡ ಹಾಳಾಗುತ್ತದೆ. ಹೀಗೆ ಮಾಡುವುದರಿಂದ ಲ್ಯಾಪ್‌ಟಾಪ್ ಕೂಡ ಅತಿಯಾಗಿ ಬಿಸಿಯಾಗುತ್ತದೆ. ಇವುಗಳು ಕಾಲಕಾಲಕ್ಕೆ ಸ್ಫೋಟಗೊಳ್ಳುವ ಘಟನೆಗಳನ್ನೂ ನಾವು ನೋಡುತ್ತೇವೆ. ಅದಕ್ಕಾಗಿಯೇ ಕೇಬಲ್‌ನ ಸಾಮರ್ಥ್ಯವನ್ನು ಪರೀಕ್ಷಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.(ಏಜೆನ್ಸೀಸ್)