ಮುಂಬೈ: ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ ನಟಿ ಆಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಸುನೀಲ್ ಶೆಟ್ಟಿ ಅವರು ತಮ್ಮ ಮಗಳು ಅಥಿಯಾ ಪ್ರೆಗ್ನೆನ್ಸಿ ಬಗ್ಗೆ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ನನ್ನದು ಪಕ್ಕಾ ಲವ್ ಮ್ಯಾರೇಜ್, ಆದರೆ ಒಂದು ಕಂಡೀಷನ್: ವಿವಾಹದ ಬಗ್ಗೆ ನಟ ವಿಜಯ್ ಮನದಾಳದ ಮಾತು!
ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್‌ನಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಕಳೆದ ವರ್ಷ ಜನವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಪ್ರಸ್ತುತ ರಾಹುಲ್ ಐಪಿಎಲ್ನಲ್ಲಿ ಆಡುತ್ತಿದ್ದಾರೆ.
ರಾಹುಲ್ ಅವರನ್ನು ವಿವಾಹವಾದ ಅಥಿಯಾ ಶೆಟ್ಟಿ, ಮದುವೆಯಾದ ಒಂದು ವರ್ಷದ ನಂತರ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿಯನ್ನು ಕೇಳಿದ ರಾಹುಲ್ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಜೂನಿಯರ್ ರಾಹುಲ್ ಆರ್ಸಿಬಿಗೆ ಆಡಲಿ ಎಂದು ಹಾರೈಸುತ್ತಿದ್ದಾರೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಈಗ ಮಾಧುರಿ ದೀಕ್ಷಿತ್ ಜತೆಗೆ ಡ್ಯಾನ್ಸ್ ರಿಯಾಲಿಟಿ ಶೋ ʻಡ್ಯಾನ್ಸ್ ದೀವಾನೆ ವಿಶೇಷ ಸಂಚಿಕೆಯಲ್ಲಿ, ನಿರೂಪಕಿ ಭಾರ್ತಿ ಸಿಂಗ್ ಸುನೀಲ್ ಶೆಟ್ಟಿ ಅವರು ಅಜ್ಜನ ರೀತಿ ಹೇಗೆ ವರ್ತಿಸಬಹುದು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟಿ “ಹೌದು ಮುಂದಿನ ಸೀಸನ್‌ಗೆ ಬಂದಾಗ ನಾನು ವೇದಿಕೆಯ ಮೇಲೆ ಅಜ್ಜನಂತೆಯೇ ಓಡಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಟನ ಈ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.
ರಾಹುಲ್ ಮತ್ತು ಅಥಿಯಾ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಅಭಿಮಾನಿಗಳು ಪ್ರಶ್ನೆ ಇಟ್ಟಿದ್ದಾರೆ. ಅಥಿಯಾ ಶೆಟ್ಟಿ ಮದುವೆ ನಂತರ ಸಿನಿಮಾಗಳಿಂದ ದೂರವಿದ್ದಾರೆ. ಇತ್ತೀಚೆಗೆ ಯಾವುದೇ ಬಾಲಿವುಡ್‌ಗೆ ಸಂಬಂಧಿಸಿದ ಪಾರ್ಟಿಗಳಲ್ಲಿ ಅಥಿಯಾ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಈ ಸುದ್ದಿ ಸತ್ಯ ಇರಬಹುದು ಎಂದು ಅವರ ಫ್ಯಾನ್ಸ್ ಊಹಿಸುತ್ತಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ವಿವೇಕ್ ಮಗಳು!: ಮದುವೆಗೆ ಹರಸಲು ಬಂದವರಿಗೆ ವಿಶೇಷ ಉಡುಗೊರೆ!