More

    ನನ್ನದು ಪಕ್ಕಾ ಲವ್‌ ಮ್ಯಾರೇಜ್‌, ಆದರೆ ಒಂದು ಕಂಡೀಷನ್….: ನಟ ವಿಜಯ್​ ಮನದಾಳದ ಮಾತು!

    ಹೈದರಾಬಾದ್: ಟಾಲಿವುಡ್​ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಆಗಾಗ ಮುನ್ನೆಲೆಗೆ ಬರುತ್ತದೆ. ಆದರೆ ಈಗ ವಿಜಯ್​ ದೇವರಕೊಂಡ ತಮ್ಮ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ವಿಜಯ್ ಹೇಳಿಕೆ ಸುದ್ದಿ ಸಹ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಇದನ್ನೂ ಓದಿ: ಕಾಂಗ್ರೆಸ್‌ ಬಳಿಕ ಸಿಪಿಐಗೆ 11 ಕೋಟಿ ರೂ. ತೆರಿಗೆ ಪಾವಿಸುವಂತೆ ನೋಟಿಸ್ ನೀಡಿದ ಐಟಿ!

    ಫ್ಯಾಮಿಲಿ ಸ್ಟಾರ್ ರಿಲೀಸ್ ಗೆ ಇನ್ನು ಕೇವಲ ಒಂದು ವಾರ ಬಾಕಿ ಇರುವಾಗ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿದೆ. ಗುರುವಾರ ತಿರುಪತಿಯಲ್ಲಿ ಅದ್ಧೂರಿಯಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಸಿರುವ ಚಿತ್ರತಂಡ, ಇತ್ತೀಚೆಗೆ ತಮಿಳುನಾಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಿತ್ತು. ಈ ಮಾಧ್ಯಮ ಗೋಷ್ಠಿಯಲ್ಲಿ ನಾಯಕ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಹಾಗೂ ಮದುವೆಯ ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ರೌಡಿಬಾಯ್ ತನ್ನ ಮದುವೆಯ ಬಗ್ಗೆ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ನನ್ನದು ಪಕ್ಕಾ ಲವ್‌ ಮ್ಯಾರೇಜ್‌, ಆದರೆ ಒಂದು ಕಂಡೀಷನ್….: ನಟ ವಿಜಯ್​ ಮನದಾಳದ ಮಾತು!

    ನನ್ನ ಪೋಷಕರು ಇಷ್ಟಪಡಬೇಕು: ಈ ಕುರಿತು ಮಾತನಾಡಿರುವ ವಿಜಯ್​, “ನನಗೂ ಮದುವೆಯಾಗಿ ತಂದೆಯಾಗಬೇಕು ಎಂಬ ಆಸೆಯಿದೆ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿಬರಬೇಕು. ನಾನು ಖಂಡಿತವಾಗಿಯೂ ಪ್ರೀತಿಸಿ ಮದುವೆಯಾಗುತ್ತೇನೆ. ನಾನು ಮದುವೆಯಾಗುವ ಹುಡುಗಿಯನ್ನು ನನ್ನ ಪೋಷಕರು ಇಷ್ಟಪಡಬೇಕು ಎಂದಿರುವ ವಿಜಯ್​ ಕೊನೆಗೂ ತಾವು ಪ್ರೀತಿಸಿ ಮದುವೆಯಾಗುವುದು ಸ್ಪಷ್ಟನೆ ನೀಡಿದರು.

    ಇನ್ನೂ ಕೆರಿಯರ್ ವಿಷಯಕ್ಕೆ ಬಂದಾಗ ನನಗೆ ಕೆಲವು ತಮಿಳು ನಿರ್ದೇಶಕರು ಕಥೆಗಳನ್ನು ಹೇಳಿದ್ದಾರೆ. ಅವುಗಳಲ್ಲಿ ಕೆಲವು ನನಗೆ ತುಂಬಾ ಇಷ್ಟವಾಗಿದೆ. ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ನಾನು ಗೌತಮ್ ತಿನ್ನನೂರಿ ಜೊತೆ ಮಾಡುತ್ತಿರುವ ಚಿತ್ರದಲ್ಲಿ ಅನೇಕ ಕಾಲಿವುಡ್ ನಟರು ಭಾಗವಾಗಲಿದ್ದಾರೆ ಎಂದು ಹೇಳಿದರು.

    ಪ್ರೇಕ್ಷಕರನ್ನು ರಂಜಿಸಲಿದೆ: ಸ್ಟಾರ್ ಯುನಿವರ್ಸಲ್ ಕಂಟೆಂಟ್‌ನೊಂದಿಗೆ ತಯಾರಾಗುತ್ತಿದೆ. ಇದು ಖಂಡಿತವಾಗಿಯೂ ಪ್ರೇಕ್ಷಕರನ್ನು ರಂಜಿಸಲಿದೆ. ನಾವು ಇದನ್ನು ಏಪ್ರಿಲ್ 5 ರಂದು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಎರಡು ವಾರಗಳ ನಂತರ, ಇದು ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ತಮಿಳುನಾಡಿನಲ್ಲಿ 250 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿರುವ ಫ್ಯಾಮಿಲಿ ಸ್ಟಾರ್ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಹಾಗೆಯೇ ಸಿನಿಮಾ ಅವಧಿ 2.40 ಗಂಟೆ ಎಮೋಷನ್, ಆಕ್ಷನ್, ಮನೋರಂಜನೆ ಎಲ್ಲವೂ ಇದೆ. ಒಳ್ಳೆಯ ಕಥೆಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇವೆ ಎಂದು ವಿಜಯ್ ಹೇಳಿದರು.

    ಏತನ್ಮಧ್ಯೆ, ಏಪ್ರಿಲ್ 5 ರಂದು ಬಿಡುಗಡೆಯಾಗುತ್ತಿರುವ ಫ್ಯಾಮಿಲಿ ಸ್ಟಾರ್ ಮೇಲೆ ಭಾರಿ ನಿರೀಕ್ಷೆಗಳಿವೆ. ಏಕೆಂದರೆ ನಿರ್ದೇಶಕ ಪರಶುರಾಮ್ ಮತ್ತು ವಿಜಯ್ ದೇವರಕೊಂಡ ಈ ಹಿಂದೆ ಗೀತಾ ಗೋವಿಂದಂನಂತಹ ಸೂಪರ್ ಹಿಟ್ ನೀಡಿದ್ದರು. ಇದೀಗ ಈ ಜೋಡಿಯಲ್ಲಿ ಫ್ಯಾಮಿಲಿ ಸ್ಟಾರ್ ಬರುತ್ತಿದ್ದು, ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಜಯ್ ಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ನಟಿಸುತ್ತಿದ್ದಾರೆ. ಟಾಲಿವುಡ್‌ನ ದೊಡ್ಡ ನಿರ್ಮಾಪಕ ದಿಲ್ ರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೀತಾ ಗೋವಿಂದಂ ಚಿತ್ರದ ನಂತರ ಗೋಪಿ ಸುಂದರೆ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts