More

    ಕಾಂಗ್ರೆಸ್‌ ಬಳಿಕ ಸಿಪಿಐಗೆ 11 ಕೋಟಿ ರೂ. ತೆರಿಗೆ ಪಾವಿಸುವಂತೆ ನೋಟಿಸ್ ನೀಡಿದ ಐಟಿ!

    ನವದೆಹಲಿ: ಹಿಂದಿನ ವರ್ಷಗಳ ತೆರಿಗೆ ರಿಟರ್ನ್ಸ್‌ನಲ್ಲಿನ ವ್ಯತ್ಯಾಸಗಳಿಗಾಗಿ ಆದಾಯ ತೆರಿಗೆ ಇಲಾಖೆಯು 1,700 ಕೋಟಿ ರೂಪಾಯಿ ಮೊತ್ತದ ಹೊಸ ನೋಟಿಸ್ ಅನ್ನು ಕಾಂಗ್ರೆಸ್‌ಗೆ ರವಾನಿಸಿದ ಬೆನ್ನೆಲ್ಲೇ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದೆ.

    ಇದನ್ನೂ ಓದಿ: ಏಳಕ್ಕಿ, ಮಸಾಲೆ ಪದಾರ್ಥ ಕದ್ದನೆಂದು ಆರೋಪಿಸಿ ಶೂ ನೆಕ್ಕುವಂತೆ ಮನಬಂದಂತೆ ಹಲ್ಲೆ, ಆರು ಮಂದಿ ಅರೆಸ್ಟ್!

    ಕಳೆದ ಕೆಲವು ವರ್ಷಗಳಿಂದ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಹಳೆಯ ಪ್ಯಾನ್ ಕಾರ್ಡ್ ಬಳಸಿದ್ದಕ್ಕಾಗಿ 11 ಕೋಟಿ ರೂ. ಬಾಕಿ ಪಾವತಿಸುವಂತೆ ಕೇಳಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ತೆರಿಗೆ ಇಲಾಖೆ ಅಧಿಕಾರಿಗಳ ಸೂಚನೆಯನ್ನು ಪ್ರಶ್ನಿಸಲು ಎಡಪಕ್ಷವು ತನ್ನ ವಕೀಲರನ್ನು ಸಂಪರ್ಕಿಸುತ್ತಿದೆ ಎಂದು ಅವರು ಹೇಳಿದರು.

    ಐಟಿ ಇಲಾಖೆಗೆ ಪಾವತಿಸಬೇಕಾದ ಬಾಕಿ ಹಣವನ್ನು ಪಕ್ಷವು ಹಳೆಯ ಪ್ಯಾನ್ ಕಾರ್ಡ್ ಬಳಕೆಯಲ್ಲಿನ ವ್ಯತ್ಯಾಸಗಳಿಗಾಗಿ ಅಧಿಕಾರಿಗಳಿಗೆ ಪಾವತಿಸಬೇಕಾದ ದಂಡ ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ. ಹಿಂದಿನ ವರ್ಷಗಳಲ್ಲಿ ಸಲ್ಲಿಸಿದ ತೆರಿಗೆ ರಿಟರ್ನ್ಸ್‌ನಲ್ಲಿನ ವ್ಯತ್ಯಾಸಗಳಿಗಾಗಿ 1,823 ಕೋಟಿಗಿಂತ ಹೆಚ್ಚಿನ ಬಾಕಿ ಪಾವತಿಸಲು ಪಕ್ಷಕ್ಕೆ ಐಟಿ ನೋಟಿಸ್‌ ಬಂದಿವೆ ಎಂದು ಕಾಂಗ್ರೆಸ್ ಈ ಮೊದಲು ಹೇಳಿದೆ. ಕಳೆದ 72 ಗಂಟೆಗಳಲ್ಲಿ ತನಗೆ 11 ಐಟಿ ನೋಟಿಸ್‌ಗಳು ಬಂದಿವೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ.

    ಬಿಜೆಪಿ ವಿರುದ್ಧ ಕಾಂಗ್ರೆಸ್ ಗುಟುರು: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ವಿರೋಧ ಪಕ್ಷಗಳನ್ನು ಹಣಿಯಲು ಬಿಜೆಪಿ ಪಕ್ಷದಿಂದ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ ಎಂದು ಕಿಡಿಕಾರಿದೆ. ಬಿಜೆಪಿ ಐಟಿ ಕಾನೂನುಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ. ಕಾಂಗ್ರೆಸ್​ ಪಕ್ಷವನ್ನು ಇಂತಹ ನೋಟಿಸ್​ ಗಳಿಗೆ ಹೆದರುವುದಿಲ್ಲ. ಮತ್ತಷ್ಟು ಉತ್ಸಾಹದಿಂದ ಮುನ್ನಗುತ್ತೇವೆ ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಹೋರಾಡುತ್ತೇವೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿದೆ.

    ಮೊದಲ ಋತುಸ್ರಾವ ನೋವಿಗೆ ಹೆದರಿ ಬಾಲಕಿ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts