ಏಳಕ್ಕಿ, ಮಸಾಲೆ ಪದಾರ್ಥ ಕದ್ದನೆಂದು ಆರೋಪಿಸಿ ಶೂ ನೆಕ್ಕುವಂತೆ ಮನಬಂದಂತೆ ಹಲ್ಲೆ, ಆರು ಮಂದಿ ಅರೆಸ್ಟ್!

police
Published on

ಮುಂಬೈ: ಏಳಕ್ಕಿ ಮತ್ತು ಮಸಾಲೆ ಪದಾರ್ಥಗಳನ್ನು ಕಳ್ಳತನ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಶೂ ನೆಕ್ಕುವಂತೆ ಒತ್ತಾಯಿಸಿದ ಆರೋಪದ ಮೇಲೆ ಆರು ಮಂದಿಯನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಎಪಿಎಂಸಿ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ನವಿ ಮುಂಬೈ ಎಪಿಎಂಸಿಯಲ್ಲಿರುವ ಅಂಗಡಿ ಮಾಲೀಕ ರೌನಕ್ ದಯಾಳ್‌ ಜಿಭಾಯಿ ಭಾನುಶಾಲಿ ಮತ್ತು ಇವರ ಅಂಗಡಿಯಲ್ಲಿ ಕೆಲಸ ಮಾಡುವ ಸಂಜಯ್ ಚೌಧರಿ, ಲಾಲಾಜಿ ಬಾಬುಬಾಯಿ ಪಾಗಿ, ವೀರೇಂದ್ರ ಕುಮಾರ್ ಲಕ್ಷ್ಮಣ ಗೌತಮ್, ಯೋಗೇಶ್ ಮತ್ತು ಕರಣ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ.

ನವಿ ಮುಂಬೈಯ ಎಪಿಎಂಸಿಯ ಅಂಗಡಿಯೊಂದರಲ್ಲಿ ವ್ಯಕ್ತಿಯು ಏಲಕ್ಕಿ ಹಾಗೂ ಮಸಾಲೆ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾನೆಂದು ಮಾಲೀಕ ಸೇರಿ ಇತರೆ ಸಿಬ್ಬಂದಿ ಆರೋಪ ಮಾಡಿದ್ದಾರೆ.

ಆ ವ್ಯಕ್ತಿಯನ್ನು ಹಿಡಿದುಕೊಂಡು ಏಲಕ್ಕಿ ಮತ್ತು ಮಸಲಾ ಪದಾರ್ಥಗಳನ್ನು ಕದ್ದಿದ್ದಿಯಾ ಎಂದು ಆರೋಪಿಸಿ ಥಳಿಸಿ ತೀವ್ರ ಹಲ್ಲೆ ವ್ಯಸಗಿದ್ದಾರೆ. ನಂತರ ಮಾಲೀಕ ರೌನಕ್ ದಯಾಳ್‌ ಜಿಭಾಯಿ ಶೂ ನೆಕ್ಕುವಂತೆ ಬಲವಂತ ಮಾಡಿದ್ದಾನೆ. ಇದನ್ನು ವಿಡಿಯೋ ಮಾಡಿದ್ದರಿಂದ ಪ್ರಕರಣ ಹೊರ ಬಂದಿದೆ. ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿದ್ದು ತನಿಖೆ ಕೈಗೊಂಡಿರುವ ಪೊಲೀಸರು ಆರು ಜನರನ್ನ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net